ಕರ್ನಾಟಕ

karnataka

ETV Bharat / entertainment

ಸ್ವಾತಿಮುತ್ತೇ ಸಿಕ್ಕಂಗೈತೆ..: 'ದೇವರ' ರೊಮ್ಯಾಂಟಿಕ್‌ ಹಾಡು ರಿಲೀಸ್​​ - Devara Movie Song - DEVARA MOVIE SONG

ಜೂನಿಯರ್‌ ಎನ್‌ಟಿಆರ್‌ ಹಾಗೂ ಜಾಹ್ನವಿ ಕಪೂರ್‌ ಅಭಿನಯದ ದೇವರ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ಕನ್ನಡದಲ್ಲಿಯೂ ಮೂಡಿಬಂದಿರುವ ರೊಮ್ಯಾಂಟಿಕ್‌ ಹಾಡು ಸಿನಿಪ್ರಿಯರನ್ನು ಸೆಳೆಯುತ್ತಿದೆ.

devara movie
ದೇವರ ಹಾಡಿನ ದೃಶ್ಯ (Devara Movie)

By ETV Bharat Entertainment Team

Published : Aug 5, 2024, 9:26 PM IST

ಜೂನಿಯರ್‌ ಎನ್‌ಟಿಆರ್‌ ನಟನೆಯ 'ದೇವರ' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇದೀಗ ಅನಿರುದ್ಧ ರವಿಚಂದರ್‌ ಸಂಗೀತ ನೀಡಿರುವ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಶಿಲ್ಪಾ ರಾವ್ ಕಂಠಸಿರಿಯಲ್ಲಿ ಸ್ವಾತಿಮುತ್ತೇ ಸಿಕ್ಕಂಗೈತೆ.. ಸಾಹಿತ್ಯವುಳ್ಳ ರೊಮ್ಯಾಂಟಿಕ್‌ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

ಈಗಾಗಲೇ ಇದೇ ದೇವರ ಸಿನಿಮಾದಿಂದ ಫಿಯರ್‌.. ಹಾಡು ಬಿಡುಗಡೆ ಆಗಿತ್ತು. ಆ ಮೂಲಕ ಪ್ರಚಾರ ಕೆಲಸ ಆರಂಭಿಸಿದ್ದ ಚಿತ್ರತಂಡಕ್ಕೆ ಮೊದಲ ಹಾಡೇ ದೊಡ್ಡ ಆಹ್ವಾನ ನೀಡಿತ್ತು.

ಇದೀಗ, ಸ್ವಾತಿಮುತ್ತೇ ಸಿಕ್ಕಂಗೈತೆ.. ಹಾಡಿನಲ್ಲಿ ಜಾಹ್ನವಿ ಕಪೂರ್‌ ಗ್ಲಾಮರಸ್‌ ಅವತಾರದಲ್ಲಿ ಕಣ್ಮನ ಸೆಳೆದಿದ್ದಾರೆ. ಎನ್‌ಟಿಆರ್ ಮತ್ತು ಜಾಹ್ನವಿ ಜೋಡಿಯ ಕೆಮಿಸ್ಟ್ರಿ ನೋಡುಗರು ಕಣ್ಣರಳಿಸುವಂತಿದೆ. ವರದರಾಜ್‌ ಚಿಕ್ಕಬಳ್ಳಾಪುರ ಅವರ ಈ ಹಾಡು ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿದೆ.

ದೇವರ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಮೊದಲನೆಯದ್ದು ಸೆಪ್ಟೆಂಬರ್ 27ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗಲಿದೆ. ಸಿನಿಮಾದಲ್ಲಿ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಆರ್.ರತ್ನವೇಲು ಛಾಯಾಗ್ರಹಣ ಹಾಗೂ ಸಾಬು ಸಿರಿಲ್ ಪ್ರೊಡಕ್ಷನ್‌ ಡಿಸೈನ್‌ ಚಿತ್ರಕ್ಕಿದೆ.

ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ಧೂರಿ ಬಜೆಟ್‌ನ ಈ ಪ್ಯಾನ್‌ ಇಂಡಿಯಾ ಸಿನಿಮಾವು ಯುವಸುಧಾ ಆರ್ಟ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ. ಈ ಚಿತ್ರದ ನಿರ್ಮಾಪಕರು. ದೇವರ ಸಿನಿಮಾ ಮೂಲಕ, ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಸೌತ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಖಳನಟನಾಗಿ ಸೈಫ್‌ ಅಲಿಖಾನ್‌ ನಟಿಸಿದ್ದಾರೆ.

ಇದನ್ನೂ ಓದಿ:6 ವರ್ಷಗಳ ಸಂಭ್ರಮದಲ್ಲಿ ಗೂಢಾಚಾರಿ: 'ಸೀಕ್ವೆಲ್'ನ ಸ್ಟನ್ನಿಂಗ್​ ಪೋಸ್ಟರ್!​​; ಅಡಿವಿ ಶೇಷ್ ಹೇಳಿದ್ದಿಷ್ಟು - Adivi Sesh

ABOUT THE AUTHOR

...view details