ಇತ್ತೀಚೆಗಷ್ಟೇ ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15 ರಂದು ವಿರುಷ್ಕಾ ದಂಪತಿ ಪುತ್ರ ಅಕಾಯ್ನನ್ನು ಸ್ವಾಗತಿಸಿದ್ದಾರೆ. ನೆಟ್ಟಿಗರೀಗ ಬಾಲಿವುಡ್ನ ಮತ್ತೋರ್ವ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಊಹಿಸುತ್ತಿದ್ದಾರೆ. ಆದರೆ, ತಾರಾ ದಂಪತಿ ದೀಪ್ವೀರ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇತ್ತೀಚೆಗೆ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಲಂಡನ್ 'BAFTA' ಅವಾರ್ಡ್ಸ್ನಲ್ಲಿ ಪ್ರೆಸೆಂಟರ್ ಆಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಬಳಿಕ ನಟಿಯ ಗರ್ಭಧಾರಣೆ ಸುದ್ದಿ ಶರವೇಗದಲ್ಲಿ ಹರಡಿದೆ. ಇದೀಗ ಮತ್ತೊಮ್ಮೆ ದೀಪಿಕಾ ಅವರ ನಡೆ ಗರ್ಭಧಾರಣೆಯ ಸುದ್ದಿಗೆ ಪುಷ್ಟಿ ನೀಡಿದೆ.
ಕಳೆದ ರಾತ್ರಿ BAFTA ಅವಾರ್ಡ್ಸ್ನಿಂದ ದೀಪಿಕಾ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಿನುಗುವ ಸೀರೆಯುಟ್ಟು ಕಂಗೊಳಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನಟಿ ಗರ್ಭಿಣಿ ಎಂದು ಊಹಿಸುತ್ತಿದ್ದಾರೆ. ಬೇಬಿ ಬಂಪ್ ಕಾಣಿಸುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇತ್ತೀಚಿನ ಏರ್ಪೋರ್ಟ್ ವಿಡಿಯೋ ನೋಡಿದ ನೆಟ್ಟಿಗರು ಸಹ ಇದನ್ನೇ ಹೇಳಿದ್ದರು.
ದೀಪಿಕಾ ಅವರ ವಿಡಿಯೋ ನೋಡಿದ ಅಭಿಮಾನಿಯೊಬ್ಬರು, ಬೇಬಿ ಬಂಪ್ ಅನ್ನು ಯಾರೂ ಗಮನಿಸಲಿಲ್ಲವೇ? ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, 'ದೀಪಿಕಾ, ನೀವು ಗರ್ಭಿಣಿಯಾಗಿದ್ದೀರಾ? ದಯವಿಟ್ಟು ಹೇಳಿ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ನಮಗೆ ಸಾಕಾಗಿದೆ, ನೀವು ಗರ್ಭಿಣಿಯಾಗಿದ್ದರೆ ದಯವಿಟ್ಟು ಹೇಳಿ' ಎಂದು ಬರೆದಿದ್ದಾರೆ. ನೆಟ್ಟಿಗರೊಬ್ಬರು ವಿಡಿಯೋದಲ್ಲಿ 'ದೀಪಿಕಾ ಕೇವಲ ಹಿಂದಿನಿಂದ ಪೋಸ್ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.