ಕರ್ನಾಟಕ

karnataka

ETV Bharat / entertainment

ಶಾರುಖ್ ಖಾನ್‌ಗೆ ಜೀವ ಬೆದರಿಕೆ: ಛತ್ತೀಸ್‌ಗಢದ ವಕೀಲ ಅರೆಸ್ಟ್ - DEATH THREAT TO SRK

ಬಾಲಿವುಡ್ ತಾರೆ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯ್‌ಪುರ ಮೂಲದ ವಕೀಲ ಫೈಜಾನ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Shah Rukh Khan
ನಟ ಶಾರುಖ್ ಖಾನ್‌ (Photo: IANS)

By ETV Bharat Entertainment Team

Published : Nov 12, 2024, 12:19 PM IST

ರಾಯ್‌ಪುರ (ಛತ್ತೀಸ್‌ಗಢ):ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಶಾರುಖ್ ಖಾನ್‌ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಛತ್ತೀಸ್‌ಗಢ ರಾಯ್‌ಪುರದ ವಕೀಲರೋರ್ವರನ್ನು ಇಂದು ಬಂಧಿಸಿದ್ದಾರೆ.

ಫೈಜಾನ್ ಖಾನ್ ಬಂಧಿತ ಆರೋಪಿಯಾಗಿದ್ದು, ಅವರನ್ನು ಮುಂಬೈ ಪೊಲೀಸ್​ ತಂಡ ಕಸ್ಟಡಿಗೆ ತೆಗೆದುಕೊಂಡಿದೆ. ಬಾಲಿವುಡ್​​ ಸೂಪರ್​ ಸ್ಟಾರ್​​ಗೆ ಬಂದ ಬೆದರಿಕೆ ಕರೆಯ (ಫೋನ್) ಸಂಖ್ಯೆಯು ಈ ಫೈಜಾನ್ ಖಾನ್ ಹೆಸರಲ್ಲಿ ನೋಂದಾಯಿಸಲ್ಪಟ್ಟಿದೆ. ಇದನ್ನು ಪತ್ತೆ ಹಚ್ಚಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಳೆದ ವಾರ, ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ಬಾಲಿವುಡ್​ ಕಿಂಗ್​ ಖಾನ್​ಗೆ ಬೆದರಿಕೆ ಕರೆ ಬಂದಿತ್ತು. ಘಟನೆ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖಾ ತಂಡ ನವೆಂಬರ್ 7 ರಂದು ರಾಯ್‌ಪುರಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ಫೈಜಾನ್ ಖಾನ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಪ್ರಕಾರ, ಫೈಜಾನ್‌ ಖಾನ್​​​ನನ್ನು ಪಾಂಡ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.

ವಿಚಾರಣೆ ಸಂದರ್ಭ, ಫೈಜಾನ್ ಖಾನ್​ ಇತ್ತೀಚೆಗೆ ತನ್ನ ಫೋನ್ ಕಳೆದುಹೋಗಿದೆ ಮತ್ತು ನವೆಂಬರ್ 2ರಂದು ರಾಯ್‌ಪುರದ ಖಮರ್ದಿಹ್ ಪೊಲೀಸ್ ಠಾಣೆಯಲ್ಲಿ ಫೋನ್​​ ಕಾಣೆಯಾಗಿದೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ಪೊಲೀಸರೀಗ ಈ ಹೇಳಿಕೆಯ ಸತ್ಯಾನುಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಬೆದರಿಕೆ ಕರೆ ನೇರವಾಗಿ ಫೈಜಾನ್ ಖಾನ್​ ಅವರಿಂದ ಬಂದಿದೆಯೇ ಅಥವಾ ಯಾರಾದರೂ ಅವರ ಫೋನ್ ಬಳಸಿ ಈ ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ತನಿಖೆ ಸಾಗಿದೆ.

ಇದನ್ನೂ ಓದಿ:'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ

ಮುಂಬೈ ಪೊಲೀಸ್ ಅಧಿಕಾರಿಗಳು ಫೈಜಾನ್‌ ಕೇಸ್​ಗೆ ಸಂಬಂಧಿಸಿದಂತೆ ಟ್ರಾನ್ಸಿಟ್ ರಿಮಾಂಡ್ (ಸ್ಥಳಾಂತರಕ್ಕೆ ಅನುಮತಿ) ಪಡೆಯಲು ರಾಯ್‌ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲು ಯೋಜಿಸಿದ್ದಾರೆ. ಇಂದು ಹೆಚ್ಚಿನ ತನಿಖೆಗಾಗಿ ಅವರನ್ನು ಮುಂಬೈಗೆ ಕರೆದೊಯ್ಯಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ:ಸಲ್ಮಾನ್​ ಬೆನ್ನಲ್ಲೇ ಸೂಪರ್​ ಸ್ಟಾರ್ ಶಾರುಖ್​ ಖಾನ್​ಗೂ ಕೊಲೆ ಬೆದರಿಕೆ: ಎಫ್​​ಐಆರ್​ ದಾಖಲು

ABOUT THE AUTHOR

...view details