ಕರ್ನಾಟಕ

karnataka

ETV Bharat / entertainment

ಅಭಿಜಿತ್ ಅಭಿನಯದ 'ಅಡವಿಕಟ್ಟೆ' ಸಿನಿಮಾಗೆ ಸಿಕ್ತು ಡಿ.ಕೆ ಸುರೇಶ್ ಸಾಥ್: ಟ್ರೇಲರ್ ರಿಲೀಸ್ - Adavi Katte - ADAVI KATTE

ಮಾಜಿ ಸಂಸದ ಡಿ.ಕೆ. ಸುರೇಶ್ 'ಅಡವಿಕಟ್ಟೆ' ಚಿತ್ರದ ಟ್ರೇಲರ್ ಅನಾವರಣಗೊಳಿಸಿದ್ದಾರೆ. ಹಿರಿಯ ನಟ ಅಭಿಜಿತ್ ಅಭಿನಯದ ಈ ಚಿತ್ರಕ್ಕೆ ಅವರು ಸಾಥ್​ ನೀಡಿದ್ದಾರೆ.

Adavi Katte Trailer release event
'ಅಡವಿಕಟ್ಟೆ' ಟ್ರೇಲರ್ ರಿಲೀಸ್ ಈವೆಂಟ್​ (ETV Bharat)

By ETV Bharat Karnataka Team

Published : Jun 30, 2024, 3:47 PM IST

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರೋ ಚಿತ್ರ 'ಅಡವಿಕಟ್ಟೆ'. ಹಿರಿಯ ನಟ ಅಭಿಜಿತ್ ಹಾಗೂ ನಾಗರಾಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಅಡವಿಕಟ್ಟೆ ಚಿತ್ರದ ಟ್ರೇಲರ್ ‌ಇತ್ತೀಚೆಗೆ ಅನಾವರಣಗೊಂಡಿದೆ. ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಡಿ.ಕೆ. ಸುರೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ಕೊಟ್ಟರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಿ.ಕೆ. ಸುರೇಶ್, ಕನ್ನಡದಲ್ಲಿ ಸಾಕಷ್ಟು ಉತ್ತಮ ಕಂಟೆಂಟ್ ಉಳ್ಳ ಚಿತ್ರಗಳು ಮೂಡಿ ಬರುತ್ತಿವೆ. ಆ ಸಾಲಿಗೆ ಈ ಚಿತ್ರ ಕೂಡ ಸೇರಲಿದೆ ಎಂದು ನನಗೆ ಟ್ರೇಲರ್ ನೋಡಿದಾಗ ಅನಿಸಿತು. ಚಿತ್ರತಂಡಕ್ಕೆ ಒಳ್ಳೆಯದಾಗಲಿ. 'ಅಡವಿಕಟ್ಟೆ' ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಬಳಿಕ ಮಾತನಾಡಿದ ನಟ ಅಭಿಜಿತ್, ಈ ಚಿತ್ರದಲ್ಲಿ ನನ್ನದು ವಿಶೇಷ ಪಾತ್ರ. ಚಿತ್ರ ನೋಡಿದಾಗ ನಿಮಗೂ ನನ್ನ ಪಾತ್ರ ಇಷ್ಟವಾಗುತ್ತದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಡಿ.ಕೆ. ಸುರೇಶ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

'ಅಡವಿಕಟ್ಟೆ' ಟ್ರೇಲರ್ ರಿಲೀಸ್ ಈವೆಂಟ್​ (ETV Bharat)

ಇನ್ನು ಈ ಚಿತ್ರದ‌ ಮತ್ತೋರ್ವ ನಟ‌ ನಾಗರಾಜು ಮಾತನಾಡಿ, ನಾನು ಕನಕಪುರದ ಹತ್ತಿರದ ಹಳ್ಳಿಯ ಬಡ ಕುಟುಂಬದಿಂದ ಬಂದವನು. ಸಿನಿಮಾದಲ್ಲಿ ನಟಿಸುವುದು ನನ್ನ ಆಸೆಯಾಗಿತ್ತು. ಅದೀಗ ನನಸಾಗಿದೆ. ನಮ್ಮ ಚಿತ್ರದ ಟ್ರೇಲರ್ ಅನ್ನು ಡಿ.ಕೆ. ಸುರೇಶ್ ಅವರು ಬಿಡುಗಡೆ‌‌ ಮಾಡಿಕೊಟ್ಟಿದ್ದು ನನಗೆ ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಜುಲೈ 19ರಂದು ರಾಜ್ಯಾದ್ಯಂತ 'ಬ್ಯಾಕ್ ಬೆಂಚರ್ಸ್' ತೆರೆಗೆ - Backbenchers

ನಂತರ ಚಿತ್ರದ ನಿರ್ದೇಶಕ ಸಂಜೀವ್ ಗಾವಂಡಿ ಮಾತನಾಡಿ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರರ್ ಜಾನರ್​ನ ಚಿತ್ರ. ಕನ್ನಡದಲ್ಲಿ ಈ ಜಾನರ್​ನ ಸಾಕಷ್ಟು ಸಿನಿಮಾ ಬಂದಿದೆಯಾದರೂ ಇದು ವಿಭಿನ್ನ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಅಡವಿ ಅಂದರೆ ಕಾಡಿನಲ್ಲಿ ನಡೆಯುವ ಕಥೆ. ಗೋಕಾಕ್ ನಗರದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ ಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:ವಿಶ್ವ ಚಾಂಪಿಯನ್ನರಿಗೆ​ ಯಶ್​​, ಸುದೀಪ್​, ರಶ್ಮಿಕಾ ಸೇರಿ ಕನ್ನಡ ತಾರೆಯರಿಂದ ಅಭಿನಂದನೆ - Sandalwood Stars Reactions

ಉಮಾ ಎಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಟಿಯರಾದ ಶಾಂತಿ, ಮಂಜುಳ ಹಾಗೂ ವಿತರಕ ಶ್ರೀಧರ್ ಉಪಸ್ಥಿತರಿದ್ದರು‌. ಸದ್ಯ ಟ್ರೇಲರ್​​ನಿಂದ ಗಮನ ಸೆಳೆಯುತ್ತಿರೋ ಅಡವಿಕಟ್ಟೆ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ABOUT THE AUTHOR

...view details