ಕರ್ನಾಟಕ

karnataka

ETV Bharat / entertainment

ರಜನಿ ಬರ್ತ್​ಡೇಗೆ ಕೂಲಿ ಚಿತ್ರದಿಂದ ಸ್ಪೆಷಲ್​ ಗ್ಲಿಂಪ್ಸ್​​: 74ರ ವಯಸ್ಸಿನಲ್ಲಿ ತಲೈವ ಜಬರ್​ದಸ್ತ್​​ ಡ್ಯಾನ್ಸ್​​ ನೋಡಿ - RAJINIKANTH BIRTHDAY

ರಜನಿಕಾಂತ್​ ಜನ್ಮದಿನ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ ಚಿತ್ರ 'ಕೂಲಿ'ಯಿಂದ ಸ್ಪೆಷಲ್​ ಗ್ಲಿಂಪ್ಸ್ ಅನಾವರಣಗೊಂಡಿದೆ.

Chikitu Vibe Glimpse out
ಜನಪ್ರಿಯ ತಾರೆ ರಜನಿಕಾಂತ್ (Photo: Film poster)

By ETV Bharat Entertainment Team

Published : 4 hours ago

ಭಾರತೀಯ ಚಿತ್ರರಂಗದ ಜನಪ್ರಿಯ ತಾರೆ ರಜನಿಕಾಂತ್ ಅವರಿಂದು 74ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೂಲಿ' ಕಡೆಯಿಂದ ವಿಶೇಷ ಉಡುಗೊರೆಯೂ ಸಿಕ್ಕಿದೆ.

ತಮಿಳು ಸಿನಿಮಾ ಇಂಡಸ್ಟ್ರಿಯ ಐಕಾನ್ ತಮ್ಮ ವಿಶೇಷ ದಿನವನ್ನು ಆಚರಿಸುತ್ತಿದ್ದು, ಅವರ ಬಹು ನಿರೀಕ್ಷಿತ ಚಿತ್ರ 'ಕೂಲಿ' ನಿರ್ಮಾಪಕರು ಹಾಡಿನ ಗ್ಲಿಂಪ್ಸ್​​ ಅನಾವರಣಗೊಳಿಸಿದ್ದಾರೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 'ಚಿಕಿಟು ವೈಬ್' (Chikitu Vibe) ಎಂಬ ವಿಭಿನ್ನ ಶೀರ್ಷಿಕೆಯ ಈ ಶಾರ್ಟ್ ಗ್ಲಿಂಪ್ಸ್​​ 2025ರಲ್ಲಿ ರಜನಿಕಾಂತ್ ಅವರು ಬಿಗ್​ ಸ್ಕ್ರೀನ್​​ನಲ್ಲಿ ಮ್ಯಾಜಿಕ್​ ಮಾಡಲಿದ್ದಾರೆ ಎಂಬ ಭರವಸೆ ನೀಡಿದೆ.

ಭಾರತೀಯ ಚಿತ್ರರಂಗದ ದಂತಕಥೆ ಜನ್ಮದಿನವನ್ನು ಕೂಲಿ ಚಿತ್ರ ತಯಾರಕರು ಮತ್ತಷ್ಟು ಸ್ಮರಣೀಯವಾಗಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ಬಹುನಿರೀಕ್ಷಿತ ಬಿಗ್​ ಪ್ರಾಜೆಕ್ಟ್​ನ ಪ್ರಮೋಶನಲ್​ ಕಂಟೆಂಟ್​ ಅನ್ನು ಅನಾವರಣಗೊಳಿಸಲಾಯಿತು. ಇದು ಅಭಿಮಾನಿಗಳ ಉತ್ಸಾಹಕ್ಕೆ ಕಾರನವಾಗಿದೆ. ಈ ಪ್ರಾಜೆಕ್ಟ್​​ ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್ ಮಾಡಿದೆ. "ಸೌಂಡ್-ಅಹೇತು! ದೇವಾ ವರ್ರಾರ್. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜನ್ಮದಿನವನ್ನು ಕೂಲಿಯ ಚಿಕಿಟು ವೈಬ್ ನೊಂದಿಗೆ ಆಚರಿಸಿ'' ಎಂದು ಬರೆದುಕೊಂಡಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಈಗಾಗಲೇ ಬಹು ನಿರೀಕ್ಷಿತ ತಮಿಳು ಆ್ಯಕ್ಷನ್ ಥ್ರಿಲ್ಲರ್‌ಗಳಲ್ಲಿ ಒಂದಾಗಿ ಸಖತ್​ ಸದ್ದು ಮಾಡಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟರಾದ ನಾಗಾರ್ಜುನ, ಉಪೇಂದ್ರ, ಸೌಬಿನ್ ಶಾಹಿರ್, ಶ್ರುತಿ ಹಾಸನ್, ಸತ್ಯರಾಜ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ತಲೈವಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್​ ಜೈಪುರದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅಪ್ಡೇಟ್ಸ್​ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಹೊತ್ತಲ್ಲಿ ಕೂಲಿ ಚಿತ್ರದಿಂದ ಬಂದಿರುವ ರಜನಿಕಾಂತ್ ಅವರ ಈ ನೋಟ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದೆ.

ಇದನ್ನೂ ಓದಿ:15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ನಟಿ ಕೀರ್ತಿ ಸುರೇಶ್

ಕೂಲಿ ಸಿನಿಮಾದ ಪ್ರಯಾಣ 2023ರ ಸೆಪ್ಟೆಂಬರ್​​ನಲ್ಲಿ 'ತಲೈವರ್ 171' ಎಂಬ ಶೀರ್ಷಿಕೆಯಿಂದ ಶುರುವಾಯಿತು. ಇದು ಚಿತ್ರದ ತಾತ್ಕಾಲಿಕ ಟೈಟಲ್​ ಆಗಿತ್ತು. 2024ರ ಏಪ್ರಿಲ್​ನಲ್ಲಿ ಪ್ರೊಜೆಕ್ಟ್​ ಅನ್ನು ಅಧಿಕೃತವಾಗಿ ಕೂಲಿ ಎಂದು ಹೆಸರಿಸಲಾಯಿತು. ಹೈದರಾಬಾದ್‌ನಲ್ಲಿ ಕೂಲಿ ಸೆಟ್ಟೇರಿತು. ವಿಶಾಖಪಟ್ಟಣದಲ್ಲಿ ಶೂಟಿಂಗ್​ ನಡೆದಿದ್ದು, ಸದ್ಯ ತಂಡ ಜೈಪುರದಲ್ಲಿ ಚಿತ್ರೀಕರಣ ನಡೆಸುತ್ತಿದೆ. 2025 ರಲ್ಲಿ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಸ್ಟ್ಯಾಂಡರ್ಡ್ ಮತ್ತು IMAX ಸ್ವರೂಪಗಳಲ್ಲಿ ಬರಲಿದೆ. ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆ ಇದೆ.

ಇದನ್ನೂ ಓದಿ:'ನಾನು ಉಪೇಂದ್ರರ ದೊಡ್ಡ ಅಭಿಮಾನಿ': ಬಾಲಿವುಡ್​ ಮಿಸ್ಟರ್​ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​​

ಅದ್ಭುತ ಸಿನಿಮೀಯ ಅನುಭವ ನೀಡಲು ತೆರೆಮರೆಯಲ್ಲಿ ಪವರ್​ಫುಲ್​ ಟೀಮ್​ ಶ್ರಮಿಸುತ್ತಿದೆ. ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದು, ಗಿರೀಶ್ ಗಂಗಾಧರನ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲದ ಜವಾಬ್ದಾರಿ ಹೊತ್ತಿದ್ದಾರೆ. ಅಸಾಧಾರಣ ತಂಡ ಇರುವ ಹಿನ್ನೆಲೆಯಲ್ಲಿ ಸಿನಿಮಾ ಸುತ್ತಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ.

ABOUT THE AUTHOR

...view details