ಕರ್ನಾಟಕ

karnataka

ETV Bharat / entertainment

ಅಜಯ್​ ದೇವ್​​ಗನ್​ ಜನ್ಮದಿನ: 'ಮೈದಾನ್'​ ಟ್ರೇಲರ್ ರಿಲೀಸ್; ಮುಂದಿನ ಚಿತ್ರಗಳಾವುವು ಗೊತ್ತೇ? - Maidaan Trailer - MAIDAAN TRAILER

ಇಂದು 55ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಾಲಿವುಡ್​ ನಟ ಅಜಯ್​ ದೇವ್​ಗನ್​​​ ಅವರ 'ಮೈದಾನ್'​​ ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

HBD Ajay Devgn
ಅಜಯ್​ ದೇವ್​​ಗನ್​ ಜನ್ಮದಿನ

By ETV Bharat Karnataka Team

Published : Apr 2, 2024, 3:00 PM IST

ಸರಿಸುಮಾರು 33 ವರ್ಷಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿರುವ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗಿಂದು ಜನ್ಮದಿನದ ಸಂಭ್ರಮ. 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇವರಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರೂ ಸೆರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಹುನಿರೀಕ್ಷಿತ 'ಮೈದಾನ್​' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಅಜಯ್ ದೇವಗನ್ ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. 55ರ ಹರೆಯದಲ್ಲೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ತಮ್ಮದೇ ಬೇಡಿಕೆ ಹೊಂದಿದ್ದಾರೆ. ಸಾಧಾರಣ ಆರಂಭದಿಂದ ಹಿಡಿದು ಪ್ರಸಿದ್ಧ ನಟರಾಗುವವರೆಗೆ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸಿನಿಪ್ರಿಯರ ಮನಗೆದ್ದಿದ್ದಾರೆ.

1969ರ ಏಪ್ರಿಲ್ 2ರಂದು ದೆಹಲಿಯಲ್ಲಿ ಜನಿಸಿದ ದೇವ್​ಗನ್​ 1991ರಲ್ಲಿ ಸಿನಿಪಯಣ ಆರಂಭಿಸಿದರು. ಫೂಲ್ ಔರ್ ಕಾಂಟೆ ಇವರ ಚೊಚ್ಚಲ ಚಿತ್ರ. ಈ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಬೆಸ್ಟ್ ಮೇಲ್​ ಡೆಬ್ಯೂ​ ಅವಾರ್ಡ್ ಪಡೆದುಕೊಂಡಿದ್ದರು. ಇದೇ ಚಿತ್ರದ ಪಾತ್ರ ಚಿತ್ರರಂಗದಲ್ಲಿ ಮುನ್ನಡೆಯಲು ದಾರಿ ಮಾಡಿಕೊಟ್ಟಿತು. ಬಳಿಕ ಆ್ಯಕ್ಷನ್-ಪ್ಯಾಕ್ಡ್ ಸಿನಿಮಾಗಳಿಂದ ಹಿಡಿದು ರೊಮ್ಯಾಂಟಿಕ್​ ಸಿನಿಮಾಗಳವರೆಗೂ ವಿವಿಧ ಜಾನರ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕಾಜೋಲ್​​​​ ಅವರನ್ನು 1999ರಲ್ಲಿ ಮದುವೆಯಾದರು.

ಮೈದಾನ್​ ಟ್ರೇಲರ್​ ರಿಲೀಸ್: ಅಜಯ್ ದೇವಗನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರವೇ 'ಮೈದಾನ್​'. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಪೋಸ್ಟರ್​, ಟೀಸರ್​​​ಗಳ ಮೂಲಕ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡವಿಂದು ಟ್ರೇಲರ್ ರಿಲೀಸ್ ಮಾಡಿದೆ. ಫುಟ್‌ಬಾಲ್‌ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಪಾತ್ರದ ಸುತ್ತ ಕಥೆ ಸುತ್ತುತ್ತದೆ. ಫುಟ್‌ಬಾಲ್‌ ತಂಡ ವಿವಿಧ ಸವಾಲುಗಳನ್ನು ಎದುರಿಸುವ ಕಥಾಹಂದರವೇ 'ಮೈದಾನ್'. ಪ್ರಿಯಾಮಣಿ ಮತ್ತು ಗಜ್​​ರಾಜ್ ರಾವ್ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 1952ರಿಂದ 1962ರವರೆಗಿನ ಭಾರತೀಯ ಫುಟ್​ಬಾಲ್​ ಸುವರ್ಣಾವಧಿಯನ್ನು ಹೇಳಲು 'ಮೈದಾನ್' ಸಜ್ಜಾಗಿದೆ. ಝೀ ಸ್ಟುಡಿಯೋಸ್, ಬೋನಿ ಕಪೂರ್, ಅರುಣವ ಜಾಯ್ ಸೇನ್‌ಗುಪ್ತಾ ಮತ್ತು ಆಕಾಶ್ ಚಾವ್ಲಾ ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಮಿತ್ ರವೀಂದ್ರನಾಥ್ ಶರ್ಮಾ ಆ್ಯಕ್ಷನ್​ ಕಟ್​​ ಹೇಳಿರುವ ಈ ಚಿತ್ರ ಏಪ್ರಿಲ್​​ 10ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಇಂದಿನಿಂದ 'ಪುಷ್ಪ' ಜಾತ್ರೆ: ಬಿಗ್ ಅನೌನ್ಸ್​​ಮೆಂಟ್; ಅಲ್ಲು ಅರ್ಜುನ್​​, ರಶ್ಮಿಕಾ ಅಭಿಮಾನಿಗಳಲ್ಲಿ ಕುತೂಹಲ - Pushpa Mass Jaathara

ಅಜಯ್​ ದೇವ್​​ಗನ್​ ಮುಂದಿನ ಚಿತ್ರಗಳು: ಮೈದಾನ್​, ಔರೋ ಮೇ ಕಹಾ ದಮ್​ ಥ, ಸಿಂಗಮ್​ ಎಗೈನ್​​, ರೈಡ್​ 2, ದೆ ದೆ ಪ್ಯಾರ್ ದೆ 2. ಇವರ ಒಟ್ಟು ಐದು ಚಿತ್ರಗಳು ಒಂದಾದ ಬಳಿಕ ಒಂದರಂತೆ ತೆರೆಗಪ್ಪಳಿಸಲಿದ್ದು, ಈ ಎಲ್ಲಾ ಚಿತ್ರಗಳ ಬಗ್ಗೆ ಸಿನಿಪ್ರಿಯರಿಗೆ ಸಾಕಷ್ಟು ಕುತೂಹಲವಿದೆ.

ಇದನ್ನೂ ಓದಿ: ಹೊಸ ಪ್ರತಿಭೆಗಳ 'ಸಿಂಹಗುಹೆ' ಸಿನಿಮಾಗೆ ನಟ ಅನಿರುದ್ಧ್ ಸಾಥ್ - Simhaguhe

ABOUT THE AUTHOR

...view details