ಕನ್ನಡದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ ''ಬಿಗ್ ಬಾಸ್'' ತನ್ನ 10 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೊನೆ ಸೀಸನ್ನ ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಈ 10 ಸೀಸನ್ಗಳಲ್ಲಿಯೂ ಸುದೀಪ್ ಅವರೇ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ಸೀಸನ್ನಲ್ಲಿಯೂ ಅವರೇ ನಿರೂಪಕ ಅನ್ನೋದು ಸದ್ಯದ ಖುಷಿಯ ಸಂಗತಿ.
''ಹೌದು ಸ್ವಾಮಿ''. ಇದು ''ಬಿಗ್ ಬಾಸ್''ನ ಫೇಮಸ್ ಡೈಲಾಗ್. ಬಿಗ್ ಬಾಸ್ ಅನ್ನೋದು ಕಾರ್ಯಕ್ರಮ ಎಂಬುದಕ್ಕಿಂತ ಒಂದು ಎಮೋಶನ್ ಎಂದೇ ಹೇಳಬಹುದು. ಕನ್ನಡ ಕಿರುತೆರೆಯಲ್ಲೇ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರತೀ ಸೀಸನ್ಗಳು ಕಳೆದಂತೆ ಈ ಕಾರ್ಯಕ್ರಮ ವೀಕ್ಷಿಸುವವರ ಸಂಖ್ಯೆಯೂ ಹೆಚ್ಚುತ್ತದೆ. ವೋಟಿಂಗ್ ಲೆಕ್ಕವೇ ಇದಕ್ಕೆ ಸಾಕ್ಷಿ.
ಕನ್ನಡ ಚಿತ್ರರಂಗದಲ್ಲಿ'ಅಭಿನಯ ಚಕ್ರವರ್ತಿ' ಎಂದೇ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ 1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಅವರ ಈ ಪಯಣ ಈಗಾಗಲೇ 28 ವರ್ಷಗಳನ್ನು ಪೂರೈಸಿದೆ. ಸಖತ್ ಪಾಪ್ಯುಲಾರಿಟಿ ಗಳಿಸಿರುವ ಕನ್ನಡ ಬಿಗ್ ಬಾಸ್ ಕೂಡ ಬರೋಬ್ಬರಿ 10 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ 10 ಸೀಸನ್ಗಳಲ್ಲಿಯೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ 'ದಶಕ'ದ ಸಂಭ್ರಮದ ಸಂದರ್ಭ ಖ್ಯಾತ ನಿರೂಪಕ ಸರ್ವರಿಗೂ ಧನ್ಯವಾದಗಳನ್ನೂ ಅರ್ಪಿಸಿದ್ದರು. ಹೊಸ ಗುಡ್ ನ್ಯೂಸ್ ಏನಂದರೆ ಮುಂದಿನ ಸೀಸನ್ಗೂ ಇವರೇ ಆ್ಯಂಕರ್.
ಇದನ್ನೂ ಓದಿ:ಶಿವಣ್ಣನಿಗೆ ಎದ್ದು ನಿಂತು ಚಪ್ಪಾಳೆ ಹೊಡೆದ ದಕ್ಷಿಣ ಚಿತ್ರರಂಗದ ಗಣ್ಯರು: ವಿಡಿಯೋ ನೋಡಿ - Standing Ovation to Shivarajkumar
ಕೆಲ ದಿನಗಳ ಹಿಂದೆ ಕನ್ನಡ ಬಿಗ್ ಬಾಸ್ ಆ್ಯಂಕರ್ ಬದಲಾಗಲಿದ್ದಾರೆ ಎಂಬ ವದಂತಿ ಇತ್ತು. ಕಿಚ್ಚ ಸುದೀಪ್ ಜಾಗಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲ, ಪ್ರಶ್ನೆಗಳು ಅಭಿಮಾನಿಗಳಲ್ಲಿತ್ತು. ಸುದೀಪ್ ಜಾಗಕ್ಕೆ ಬೇರೆ ಯಾರನ್ನೂ ಸ್ವೀಕರಿಸಲು ಸಾಧ್ಯವಿರದ ಪರಿಸ್ಥಿತಿಯಲ್ಲಿ ಅಭಿಮಾನಿಗಳಿದ್ದರು. ಫೈನಲಿ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
ಬದಲಾವಣೆ ನೋ ವೇ, ಛಾನ್ಸೇ ಇಲ್ಲ: ಕಲರ್ಸ್ ಕನ್ನಡ ಆ್ಯಂಕರ್ ಇಂಟ್ರುಡಕ್ಷನ್ ಪ್ರೋಮೋ ಅನಾವರಣಗೊಳಿಸಿದೆ. ಪೋಸ್ಟ್ಗೆ ''ಬದಲಾವಣೆ ಜಗದ ನಿಯಮ; ಅದಕ್ಕೆ ಬಿಗ್ ಬಾಸ್ ಕೂಡಾ ಹೇಳೋದು 'ಹೌದು ಸ್ವಾಮಿ'. ಆದರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್ ಕನ್ನಡ ಸೀಸನ್ 11 | ಸೆಪ್ಟೆಂಬರ್ 29ರಿಂದ ಪ್ರಸಾರ ಎಂದು ಬರೆದುಕೊಂಡಿದೆ. ಈ ವಿಡಿಯೋ ಪಂಚಿಂಗ್ ಡೈಲಾಗ್ಸ್ ಒಳಗೊಂಡಿದ್ದು, ಬಹಳ ಕುತೂಹಲಕಾರಿಯಾಗಿ ಮೂಡಿ ಬಂದಿದೆ.
ಇದನ್ನೂ ಓದಿ:ಆಟೋ ಓಡಿಸಿ 'ಭೈರಾದೇವಿ' ರಿಲೀಸ್ ಡೇಟ್ ಘೋಷಿಸಿದ ರಾಧಿಕಾ ಕುಮಾರಸ್ವಾಮಿ - Bhairadevi Release Date
''ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗ್ತಾರೆ. ಆದರೆ ಎಲ್ಲಾನೂ ನಿಯಂತ್ರಿಸೋ ಸೂತ್ರಧಾರ'' ಎಂದು ಹೇಳುತ್ತಿದ್ದಂತೆ ಕಿಚ್ಚ ಸುದೀಪ್ ಅದ್ಭುತವಾಗಿ ಎಂಟ್ರಿ ಕೊಟ್ಟಿದ್ದಾರೆ. ''10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ'' ಎಂಬ ಕಿಚ್ಚನ ಡೈಲಾಗ್ಸ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶ ಕಂಡಿವೆ. ಇದೇ ಸೆಪ್ಟೆಂಬರ್ 29ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಪ್ರಸಾರ ಕಾಣಲಿದೆ.