ಕರ್ನಾಟಕ

karnataka

ETV Bharat / entertainment

'ಇಲ್ಲಿಗೆ ಬಂದಿರೋದು ನಾವೊಬ್ರೆ, ಆಡೋದು ನಾವೊಬ್ರೆ, ಗೆಲ್ಲೋದು ಒಬ್ರೆ': ಬಿಗ್​ ಬಾಸ್​ನಲ್ಲಿ ತೀರ್ಪೊಂದೇ ಬಾಕಿ - BIGG BOSS KANNADA 11

''ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್, ಉಳಿದಿರೋದು ಕೇವಲ ತೀರ್ಪು!''... ಬಿಗ್​ ಬಾಸ್​​ ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ ಆರಂಭ.

Bigg Boss Kannada 11
ಬಿಗ್​ ಬಾಸ್​ ಕನ್ನಡ 11 (Photo: Bigg Boss Team)

By ETV Bharat Entertainment Team

Published : Jan 23, 2025, 12:35 PM IST

'ಬಿಗ್​ ಬಾಸ್​​ ಸೀಸನ್​ 11'ರ ಗ್ರ್ಯಾಂಡ್​ ಫಿನಾಲೆಗೆ ಇನ್ನೆರಡು ದಿನಗಳಷ್ಟೇ ಬಾಕಿ. ಫೈನಲಿಸ್ಟ್​​ಗಳು ಈ ದೊಡ್ಮನೆಯಲ್ಲಿ ಕೊನೆಯ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಈ ವಾರಾಂತ್ಯ ಜರುಗಲಿರುವ ಅದ್ಧೂರಿ ಫಿನಾಲೆಗೆ ಭರದ ಸಿದ್ಧತೆ ಸಾಗಿದ್ದು, ಯಾರು ವಿಜೇತರು ಅನ್ನೋ ಕುತೂಹಲ ಮೂಡಿದೆ. ಪ್ರತೀ ಸ್ಪರ್ಧಿಗಳು ತಮ್ಮದೇ ಆದ ದೊಡ್ಡ ಅಭಿಮಾನಿಗಳನ್ನು ಸಂಪಾದಿಸಿರೋ ಹಿನ್ನೆಲೆ, ಸೀಸನ್​ 11ರ ಟ್ರೋಫಿಯನ್ನು ಯಾರು ಎತ್ತಿಡಿಯಲಿದ್ದಾರೆ ಅನ್ನೋದನ್ನು ಊಹಿಸೋದೇ ಕಷ್ಟವಾಗಿದೆ. ಇದೀಗ ಮನೆಯೊಳಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದು, ತಮ್ಮ ಮೆಚ್ಚಿನ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ.

ಉಳಿದಿರೋದು ಕೇವಲ ತೀರ್ಪು! ''ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್, ಉಳಿದಿರೋದು ಕೇವಲ ತೀರ್ಪು!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನಡಿ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಮನೆಯೊಳಗೆ ಅಭಿಮಾನಿಗಳು ಆಗಮಿಸಿರೋದನ್ನು ಕಾಣಬಹುದು. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಪ್ರೋಮೋದಲ್ಲಿ, ಮನೆಯ ಹೊರಾಂಗಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ನಿಂತಿರೋದನ್ನು ಕಾಣಬಹುದು. ತಮ್ಮ ಮೆಚ್ಚಿನ ಸ್ಪರ್ಧಿಗಳ ಹೆಸರನ್ನು ಕೂಗುತ್ತಾ ತಮ್ಮ ಬೆಂಬಲ ಸೂಚಿಸಿದ್ದಾರೆ. ತಮ್ಮ ಕಂಪ್ಲೀಟ್​ ಜರ್ನಿಯನ್ನು ನೆರೆದಿರೋ ಪ್ರೇಕ್ಷಕ ಪ್ರಭುಗಳ ಎದುರಲ್ಲಿ ಬಿಚ್ಚಿಡ್ತಿರೋ ಫಿನಾಲೆ ಕಂಟಸ್ಟೆಂಟ್ಸ್ ಎಂಬ ಬಿಗ್​ ಬಾಸ್​ ಹಿನ್ನೆಲೆ ದನಿ ಕೇಳಿಬಂದಿದೆ.

ಇದನ್ನೂ ಓದಿ:ರಾಜ್ಯ ಚಲನಚಿತ್ರ ಪ್ರಶಸ್ತಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​​ಗೆ ಅತ್ಯುತ್ತಮ ನಟ ಗೌರವ

ನಿಮ್ಮನ್ನು ನೋಡಿ ಹೆದ್ರಿಕೆ ಆಗ್ತಿದೆ ಎಂದು ಹನುಮಂತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತ್ರಿವಿಕ್ರಮ್​ ಮಾತನಾಡಿ, ಅಡೆತಡೆಗಳನ್ನೆಲ್ಲಾ ದಾಟಿಕೊಂಡು ನಿಮ್ಮಲ್ಲಿ ನಿಮ್ಮ ಅಣ್ಣನೋ ತಮ್ಮನ್ನೋ ನುಗ್ಗೊಂಡ್​ ಬಂದ್​ ನಿಂತ್ರೆ ಈ ತರ ಇರ್ತಾನೆ ಅಂತಾ ಅಂದ್ಕೊಳಿ ಎಂದು ತಿಳಿಸಿದ್ದಾರೆ. ಮೋಕ್ಷಿತಾ ಮಾತನಾಡಿ, ಇಲ್ಲಿಗೆ ಬಂದಿರೋದು ನಾವೊಬ್ರೆ, ಆಡೋದು ನಾವೊಬ್ರೆ, ಗೆಲ್ಲೋದು ಒಬ್ರೆ ಎಂದು ಭರವಸೆಯ ಮಾತನ್ನಾಡಿದ್ದಾರೆ.

ಇದನ್ನೂ ಓದಿ:ಯಾರಾಗಲಿದ್ದಾರೆ ಬಿಗ್ ಬಾಸ್​​​ ವಿನ್ನರ್?: ನಿಮ್ಮಿಷ್ಟದ ಸ್ಪರ್ಧಿ ಯಾರು, ಗೆಲುವಿಗೆ ಅವರು ಅರ್ಹರೇ?​

ಬಿಗ್​ ಬಾಸ್ ಟ್ರೋಫಿ ಗೆಲ್ಲೋರು ಯಾರು ಎಂಬ ಪ್ರಶ್ನೆ ಎದ್ದಿರೋ ಹೊತ್ತಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮನೆಗೆ ಪ್ರೇಕ್ಷಕ ಪ್ರಭುಗಳು ಹೆಜ್ಜೆ ಇಟ್ಟಿದ್ದಾರೆ. ತಮ್ಮ ಮೆಚ್ಚಿನ ಸ್ಪರ್ಧಿಗಳ ಭಾವಚಿತ್ರ, ಕಾರ್ಡ್ ಹಿಡಿದು ಘೋಷಣೆ ಕೂಗಿದ್ದಾರೆ. ಫೈನಲಿಸ್ಟ್​ ಸ್ಪರ್ಧಿಗಳೂ ಕೂಡಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಸಂಪೂರ್ಣ ಸಂಚಿಕೆ ವೀಕ್ಷಿಸೋ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಬಿಗ್​ ಬಾಸ್​ ಕನ್ನಡ ಫೈನಲಿಸ್ಟ್ಸ್:

  • ಹನುಮಂತು.
  • ಮೋಕ್ಷಿತಾ.
  • ತ್ರಿವಿಕ್ರಮ್​.
  • ರಜತ್ ಕಿಶನ್​​​.
  • ಮಂಜು.
  • ಭವ್ಯಾ..

ABOUT THE AUTHOR

...view details