ಭಾರತಿ ವಿಷ್ಣುವರ್ಧನ್, ಜೇಷ್ಠವರ್ಧನ್ ಮತದಾನ ಮೈಸೂರು: 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಗಣ್ಯರು ಮತಗಟ್ಟೆಗಳತ್ತ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಮೊಮ್ಮಗ ಜೇಷ್ಠವರ್ಧನ್ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ವಿಷ್ಣು ಮೊಮ್ಮಗ ಜೇಷ್ಠವರ್ಧನ್ ಮಾತನಾಡಿ, ಮತ ಹಾಕಿರೋದು ಬಹಳ ಸಂತೋಷ ತಂದಿದೆ. ಎಲ್ಲರೂ ತಪ್ಪದೇ ಮತದಾನದ ಮೂಲಕ ನಿಮ್ಮ ಸರ್ಕಾರ ಆಯ್ಕೆ ಮಾಡಿ. ಯಾರಿಗೆ ಮತ ಹಾಕುತ್ತಿದ್ದೇವೆ ಅನ್ನೋದನ್ನು ಯೋಚಿಸಿ, ನೋಡಿಕೊಂಡು ಹಾಕಿ ಎಂದು ತಿಳಿಸಿದರು.
ಮತದಾನ ಮಾಡಿದ ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ, ಮತದಾನ ನಮ್ಮಲ್ಲೆರ ಹಕ್ಕು. ಮತದಾನ ಮಾಡುವುದರಿಂದ ತಪ್ಪಿಸಿಕೊಳ್ಳಬೇಡಿ. ಯೋಚನೆಯಿಂದ ಮತದಾನ ಮಾಡಿ. ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ನಿಮ್ಮ ಮತ ಚಲಾಯಿಸಿ ಎಂದು ಎಲ್ಲರಲ್ಲೂ ಕೇಳಿಕೊಳ್ಳುತ್ತೇವೆ. ಬಂದು ಮತ ಹಾಕಿ, ಬಳಿಕ ಎಲ್ಲಿಗಾದರೂ ಹೋಗಿ. ಏಕೆಂದರೆ ಮತಕ್ಕೆ ಬಹಳ ಬೆಲೆ ಇದೆ. ಅದನ್ನು ವ್ಯರ್ಥ ಮಾಡಬೇಡಿ ಎಂದರು.
ಇದನ್ನೂ ಓದಿ:Watch: ಉತ್ಸಾಹದಿಂದ ಹಕ್ಕು ಚಲಾಯಿಸುತ್ತಿರುವ ನಟ-ನಟಿಯರು: ಜಗ್ಗೇಶ್, ಗಣೇಶ್, ರಾಜ್ ಫ್ಯಾಮಿಲಿಯಿಂದ ವೋಟಿಂಗ್ - Sandalwood Stars Voting