ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಕುಶಲೋಪರಿ ವಿಚಾರಿಸಲು ಪರಪ್ಪನ ಅಗ್ರಹಾರ ಜೈಲಿಗೆ ಪತ್ನಿ, ಮಗ, ಸಂಬಂಧಿಕರು ಹಾಗೂ ಉದ್ಯಮದ ಸ್ನೇಹಿತರು ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ.
ಜೂನ್ 25ರಿಂದ ಜುಲೈ 26ರ ಅವಧಿಯಲ್ಲಿ 30 ಮಂದಿ ಭೇಟಿ ನೀಡಿದ್ದಾರೆ. ಪತಿಯ ಯೋಗಕ್ಷೇಮ ವಿಚಾರಿಸಲು ವಿಜಯಲಕ್ಷ್ಮೀ ನಾಲ್ಕು ಬಾರಿ ಭೇಟಿ ಕೊಟ್ಟಿದ್ದರೆ, ಸಹೋದರ ದಿನಕರ್ ತೂಗುದೀಪ ಮೂರು ಬಾರಿ ಜೈಲಿಗೆ ಬಂದಿದ್ದಾರೆ.
ಯಾವ ದಿನ, ಯಾರೆಲ್ಲಾ ಭೇಟಿ ಕೊಟ್ಟಿದ್ದರು?
- ಜುಲೈ 1ರಂದು ದರ್ಶನ್ ತಾಯಿ ಮೀನಾ.
- ಜೂನ್ 24ರಂದು ಪತ್ನಿ ವಿಜಯಲಕ್ಷ್ಮೀ.
- ಜೂನ್ 29ರಂದು ನಟಿ ರಕ್ಷಿತಾ. ನಮೂದು ಪುಸ್ತಕದಲ್ಲಿ ಸ್ನೇಹಿತೆ ಎಂದು ದಾಖಲಾಗಿದೆ.
- ಜುಲೈ 1ರಂದು ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ತಮ್ಮ ದಿನಕರ್ ತೂಗುದೀಪ.
- ಜುಲೈ 2ರಂದು ಸಮತಾ, ಪುಸ್ತಕದಲ್ಲಿ ತಂಗಿ ಎಂದು ನಮೂದು.
- ಜುಲೈ 10ರಂದು ಪತ್ನಿ ವಿಜಯಲಕ್ಷ್ಮೀ, ಮಗ, ಸುಶಾಂತ, ಚಂದ್ರಶೇಖರ್.
- ಜುಲೈ 11ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ.
- ಜುಲೈ 15ರಂದು ಪತ್ನಿ ವಿಜಯಲಕ್ಷ್ಮೀ, ನಿತಿನ್, ದಿನಕರ್, ಅನುಶ್ ಶೆಟ್ಟಿ.
- ಜುಲೈ 19ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ತರುಣ್ ಕಿಶೋರ್, ಹೇಮಂತ, ನವೀನ, ಕಿರ್ತನ್, ಕುಮಾರ್.
- ಜುಲೈ 22ರಂದು ವಿನೋದ್, ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮೀ.
- ಜುಲೈ 25ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ.