ಹೈದರಾಬಾದ್: ಯಾಮಿ ಗೌತಮ್ ನಟನೆಯ ಆರ್ಟಿಕಲ್ 370 ಮತ್ತು ವಿದ್ಯುತ್ ಜಮ್ವಾಲ್ ಕ್ರಾಕ್ ಸಿನಿಮಾ ಒಟ್ಟಿಗೆ ಫೆ 23ರಂದು ಬಿಡುಗಡೆಯಾಗಿದ್ದವು. ಚಿತ್ರ ಬಿಡುಗಡೆಯಾಗಿ 10 ದಿನ ಕಳೆದಿದ್ದು,' ಆರ್ಟಿಕಲ್ 370' ಚಿತ್ರ ಇದುವರೆಗೆ 50 ಕೋಟಿ ರೂ.ಯನ್ನು ಸಂಪಾದಿಸಿದರೆ, 'ಕ್ರಾಕ್' ಸಿನಿಮಾ ಇನ್ನು ತೆವಳುತ್ತಾ ಸಾಗಿದೆ. ಯಾಮಿ ಗೌತಮ್ ನಟನೆಯ ಚಿತ್ರಕ್ಕೆ ಆದಿತ್ಯ ಸುಹಾಸ್ ಜಂಬ್ಹಲೆ ನಿರ್ದೇಶನ ಮಾಡಿದರೆ, ಕ್ರಾಕ್ ಚಿತ್ರವನ್ನು ಆದಿತ್ಯ ದತ್ ನಿರ್ದೇಶಿಸಿದ್ದಾರೆ.
ಎರಡನೇ ವಾರದಲ್ಲಿ 'ಆರ್ಟಿಕಲ್ 370' ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ. ಆದಿತ್ಯ ಧಾರ್ ನಿರ್ಮಾಣದ ಈ ಚಿತ್ರ ಮೆಟ್ರೊಪಾಲಿಟನ್ ಪ್ರದೇಶಗಳಲ್ಲಿ ಉತ್ತಮವಾಗಿ ಪ್ರದರ್ಶನ ಮಾಡುತ್ತಿದ್ದು, ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಂಬರುವ ವಾರದಲ್ಲಿ ಕೂಡ ಚಿತ್ರ ಉತ್ತಮ ಗಳಿಕೆ ಮಾಡುವ ಸಾಧ್ಯತೆ ಇದೆ.
ಅಂದಾಜು ಲೆಕ್ಕದ ಪ್ರಕಾರ, 'ಆರ್ಟಿಕಲ್ 370' ಚಿತ್ರ ಥಿಯೇಟರ್ನಲ್ಲಿ 10ನೇ ದಿನದ ಪ್ರದರ್ಶನದ ವೇಳೆ 6.35 ಕೋಟಿ ಗಳಿಸಿದ್ದು, ಒಟ್ಟಾರೆ ಚಿತ್ರ 50.45 ಕೋಟಿ ರೂ. ಸಂಪಾದಿಸಿದೆ. ಭಾನುವಾರ ಹಿಂದಿ ಭಾಷೆಯಲ್ಲಿಯೇ ಚಿತ್ರ 33.89 ಕೋಟಿ ಕಲೆಕ್ಷನ್ ಮಾಡಿದೆ. ಬೆಳಗಿನ ಪ್ರದರ್ಶನದಲ್ಲಿ 18.96ರಷ್ಟು ಭರ್ತಿ ಕಂಡರೆ, ಮಧ್ಯಾಹ್ನದ ಪ್ರದರ್ಶನ 36.20ರಷ್ಟು ಮತ್ತು ಸಂಜೆ ಪ್ರದರ್ಶನದಲ್ಲಿ 47.09ರಷ್ಟು ಹಾಗೂ ರಾತ್ರಿಯ ಶೋ ಅಲ್ಲಿ 33.20ರಷ್ಟು ಭರ್ತಿ ಕಂಡಿದೆ.