ದಕ್ಷಿಣ ಚಿತ್ರರಂಗದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅವರ ವಿವಾಹ ಸಮಾರಂಭ ಅತ್ಯಂತ ವೈಭವದಿಂದ ಜರುಗಿತು. ಜನಪ್ರಿಯ ತಮಿಳು ಕಾಮಿಡಿಯನ್ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿಯೊಂದಿಗೆ ಐಶ್ವರ್ಯ ಹಸೆಮಣೆ ಏರಿದರು. ಚೆನ್ನೈನ ಅಂಜನಾಸುತ ಶ್ರೀ ಯೋಗಾಂಜನೇಯಸ್ವಾಮಿ ಮಂದಿರದಲ್ಲಿ ಮದುವೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಉಮಾಪತಿ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ - Aishwarya Umapathy Marriage - AISHWARYA UMAPATHY MARRIAGE
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಾಗೂ ಕಾಮಿಡಿಯನ್ ತಂಬಿ ರಾಮಯ್ಯ ಪುತ್ರ ಉಮಾಪತಿ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಐಶ್ವರ್ಯಾ ಉಮಾಪತಿ ಮದುವೆ (ETV Bharat)
Published : Jun 11, 2024, 5:50 PM IST
ಜೂನ್ 7 ರಂದು ಹಲ್ದಿ ಕಾರ್ಯಕ್ರಮದ ಮೂಲಕ ವಿವಾಹ ಸಮಾರಂಭ ಪ್ರಾರಂಭವಾಯಿತು. ಜೂನ್ 8 ಸಂಗೀತ ಕಾರ್ಯಕ್ರಮವಿತ್ತು. ಹಲವು ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಜರುಗಿದವು. ಆ ನಂತರ ಜೂನ್ 10ರಂದು ಚಿತ್ರರಂಗದ ಪ್ರಮುಖರು, ಆಪ್ತರು, ಕುಟುಂಬಸ್ಥರ ಉಪಸ್ಥಿತಿಯಲ್ಲಿ ಈ ಜೋಡಿ ಹಾರ ಬದಲಾಯಿಸಿಕೊಂಡರು. ಜೂನ್ 14ರಂದು ಚೆನ್ನೈನ ಲೀಲಾ ಪ್ಯಾಲೆಸ್ನಲ್ಲಿ ಗ್ರ್ಯಾಂಡ್ ರಿಸೆಪ್ಷನ್ ಪ್ರೊಗ್ರಾಮ್ ನಡೆಯಲಿದೆ.
ಇದನ್ನೂ ಓದಿ:'ಕೋಟಿ': ಡಾಲಿ ವೃತ್ತಿಜೀವನದಲ್ಲೇ ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರ - Kotee Movie