29 ವರ್ಷಗಳ ವೈವಾಹಿಕ ಜೀವನಕ್ಕೆ ಎ.ಆರ್.ರೆಹಮಾನ್ ಹಾಗೂ ಸೈರಾ ಬಾನು ಅಂತ್ಯವಿರಾಮ ಇಟ್ಟಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಅಭಿಮಾನಿಗಳು ಶಾಕ್ನಲ್ಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಮನರಂಜನಾ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆಗಳಿಂದಾಗಿ ಸಾಕಷ್ಟು ಪ್ರಸಿದ್ಧಿ ಗಳಿಸಿದ್ದಾರೆ. ಇದೀಗ ಅವರ ವೈಯಕ್ತಿಕ ಬದುಕಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಎ.ಆರ್.ರೆಹಮಾನ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ದಂಪತಿ ತಮ್ಮ 'ಗ್ರ್ಯಾಂಡ್ 30'ಯನ್ನು ಸಂಭ್ರಮಾಚರಿಸಲು ಆಶಿಸಿದ್ದರು. ಆದ್ರೆ ಅನಿರೀಕ್ಷಿತ, ನೋವಿನ ಅಂತ್ಯವನ್ನು ಎದುರಿಸಿರುವುದಾಗಿ ಬಹಿರಂಗಪಡಿಸಿದರು. ಪೋಸ್ಟ್‌ನಲ್ಲಿ ಕಠಿಣ ಸಂದರ್ಭದಲ್ಲಿ 'ಗೌಪ್ಯತೆ'ಗಾಗಿ ವಿನಂತಿಸಿದ್ದು, ಅವರ ಪ್ರತ್ಯೇಕತೆಯ ದುಃಖವನ್ನೂ ತಿಳಿಸಿದೆ. ಆದಾಗ್ಯೂ, ಇದು ನೆಟಿಜನ್‌ಗಳಿಗೆ ಚರ್ಚೆಯ ವಿಷಯವಾಗಿದೆ.
ರೆಹಮಾನ್ ಅವರ ಪೋಸ್ಟ್‌ನಲ್ಲಿ, "ನಾವು ಗ್ರ್ಯಾಂಡ್ ತರ್ಟಿ (29 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದಾರೆ) ತಲುಪಲು ಆಶಿಸಿದ್ದೆವು. ಆದ್ರೆ ಇದು ಅಂತ್ಯ ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರದಲ್ಲಿ ದೇವರ ಸಿಂಹಾಸನವೂ (ಗದ್ದುಗೆ) ಸಹ ನಡುಗಬಹುದು. ಇಂಥ ಪರಿಸ್ಥಿತಿಯಲ್ಲೂ ಅರ್ಥ ಹುಡುಕುವ ಪ್ರಯತ್ನ ನಮ್ಮದು. ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಮ್ಮ ಸ್ನೇಹಿತರಿಗೆ ಧನ್ಯವಾದಗಳು. #arrsairaabreakupಎಂದು ಬರೆದುಕೊಂಡಿದ್ದಾರೆ. ಗಾಯಕನ ಬರಹ ಬಹಳ ಭಾವನಾತ್ಮಕವಾಗಿದ್ದರೂ, ಇಂಥ ವೈಯಕ್ತಿಕ ಕ್ಷಣದಲ್ಲಿ ಹ್ಯಾಶ್‌ಟ್ಯಾಗ್ (''#arrsairaabreakup") ಅನ್ನು ಸೇರಿಸಿರುವುದು ಆನ್‌ಲೈನ್ ಗದ್ದಲಕ್ಕೆ ಕಾರಣವಾಗಿದೆ.
ಈ ಪೋಸ್ಟ್‌ಗೆ ಹೆಚ್ಚಿನ ಸಂಖ್ಯೆಯ ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇಂಥ ವಿಷಾದಕರ ಸಂದರ್ಭದಲ್ಲಿ ಗಣ್ಯ ವ್ಯಕ್ತಿ ಹ್ಯಾಶ್‌ಟ್ಯಾಗ್ ಅನ್ನು ಏಕೆ ಬಳಸಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ 'X'ನ ಓರ್ವ ಬಳಕೆದಾರರು ಪ್ರತಿಕ್ರಿಯಿಸಿ, "ಇಂಥ ಪರಿಸ್ಥಿತಿಗಾಗಿ ಹ್ಯಾಶ್‌ಟ್ಯಾಗ್ ಅನ್ನು ಯಾರು ರಚಿಸುತ್ತಾರೆ? ಫೈರ್ ಯುವರ್ ಅಡ್ಮಿನ್, ಥಲೈವಾ ಎಂದು ಬರೆದಿದ್ದಾರೆ. ಇತರರು AI ಒಳಗೊಳ್ಳುವಿಕೆಯ ಬಗ್ಗೆ ಊಹಿಸಿದ್ದಾರೆ.