ಕರ್ನಾಟಕ

karnataka

ETV Bharat / entertainment

ಅಪ್ಪ ಎಂಬ ದೇವರ ಸತ್ಯ ಕಥೆ 'ಅಪ್ಪ ಐ ಲವ್ ಯೂ': ಮುಂದಿನ ಶುಕ್ರವಾರ ತೆರೆಗೆ - Appa I Love You

'ಅಪ್ಪ ಐ ಲವ್ ಯೂ' ಸಿನಿಮಾ ಇದೇ 12ರಂದು ಚಿತ್ರಮಂದಿರ ಪ್ರವೇಶಿಸಲಿದೆ.

Appa I Love You team
'ಅಪ್ಪ ಐ ಲವ್ ಯೂ' ಚಿತ್ರತಂಡ

By ETV Bharat Karnataka Team

Published : Apr 6, 2024, 12:46 PM IST

ನೆನಪಿರಲಿ ಪ್ರೇಮ್ ಅವರ ಸಿನಿಮಾ ಬಂದು ಬಹಳ ದಿನಗಳೇ ಕಳೆದಿವೆ. ಇದೀಗ 'ಅಪ್ಪ ಐ ಲವ್ ಯೂ' ಚಿತ್ರದ ಮೂಲಕ ಲವ್ಲಿ ಸ್ಟಾರ್ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ಟಗರು' ಖ್ಯಾತಿಯ ಮಾನ್ವಿತಾ ಪ್ರೇಮ್‌ಗೆ ಜೋಡಿಯಾಗಿದ್ದಾರೆ. ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿದ್ದು, ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು, ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

'ಅಪ್ಪ ಐ ಲವ್ ಯೂ' ಚಿತ್ರತಂಡ

ನಟ ಪ್ರೇಮ್ ಮಾತನಾಡಿ, ಸಾಮಾನ್ಯವಾಗಿ ಎಲ್ಲ ತಂದೆಯರು ಹೀರೋನೇ. ಮಕ್ಕಳ ಬಾಯಲ್ಲಿ ಹೆಚ್ಚಾಗಿ ಬರುವ ಮಾತು ಎಂದರೆ'ಅಪ್ಪನಿಗೆ ಹೇಳ್ತೀನಿ'. ನನ್ನ ತಂದೆ ನನಗೆ ಹೀರೋ. ನಾನು ಪ್ಲೇಬ್ಯಾಕ್ ಸಿಂಗರ್ ಆಗಲು ಇಷ್ಟಪಟ್ಟಿದ್ದೆ. ಯಾರಾದರೂ ಏನಾಗ್ತೀಯಾ? ಎಂದು ಕೇಳಿದರೆ ನಾನು ಸಿಂಗರ್ ಆಗುತ್ತೇನೆ ಎನ್ನುತ್ತಿದ್ದೆ. ನಾನು ಚಿಕ್ಕವನಿದ್ದಾಗ ಎಲ್ಲ ರೀತಿಯ ಹುಡುಗರ ಸಹವಾಸ ಮಾಡುತ್ತಿದ್ದೆ. ಆದರೆ ನಮ್ಮ ಅಪ್ಪ ಎಂದಿಗೂ ಸಂಶಯ ಮಾಡಲಿಲ್ಲ. ನನ್ನ ಮಗ ಏನು ಅಂತಾ ಗೊತ್ತು‌ ಎಂದಿದ್ದರು. ಹೀಗಾಗಿ ನಾನು ಕೆಟ್ಟ ದಾರಿ ತುಳಿಯಲಿಲ್ಲ. ಈ ಚಿತ್ರದಲ್ಲಿ ನನಗೆ ಕ್ಲೈಮ್ಯಾಕ್ಸ್ ಬಹಳ‌ ಕನೆಕ್ಟ್ ಆಯ್ತು. ನನಗೆ ಸಿಕ್ಕಿರುವುದು ಬಹಳ ಅದ್ಭುತ ಪಾತ್ರ. ನನಗೋಸ್ಕರ ಹುಡುಕಿ ಬಂದ ಪಾತ್ರ. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದು ತಿಳಿಸಿದರು.

ಇದು ಕಾಲ್ಪನಿಕ ಕಥೆಯಲ್ಲ:ನಿರ್ದೇಶಕ ಅಥರ್ವ್ ಆರ್ಯ ಮಾತನಾಡಿ, ಇದು ಕಾಲ್ಪನಿಕ ಕಥೆಯಲ್ಲ. ಅಪ್ಪ ಎಂಬ ದೇವರ ಸತ್ಯ ಕಥೆ. ಕಾಲ್ಪನಿಕ ಕಥೆ ಮಾಡುವುದು ಸುಲಭ. ಆದರೆ ನಮ್ಮ ನಿಮ್ಮ ನಡುವೆ ನಡೆಯುವ, ಸಮಾಜದಲ್ಲಿ ವಾಸ್ತವವಾಗಿ ನಡೆಯುವ ಕಥೆಗಳನ್ನು ಎಷ್ಟೋ ಬಾರಿ ಮೆರೆತುಬಿಟ್ಟಿರುತ್ತೇವೆ. ನಾವು ಅದನ್ನು ಅನುಭವಿಸುತ್ತಿರುತ್ತೇವೆ. ಅದು ಜೀವನದ ಭಾಗವಾಗಿರುತ್ತದೆ. ಅಂತಹ ಕಥೆಗಳನ್ನು ತೆರೆಮೇಲೆ ತರಬೇಕು ಎಂಬ ಉದ್ದೇಶದಿಂದ 'ಅಪ್ಪಾ ಐ ಲವ್ ಯೂ' ಕಥೆಯನ್ನು ಆಯ್ಕೆ‌ ಮಾಡಿಕೊಂಡೆವು. ಕಥೆ ಹುಟ್ಟಲು ನಾಣಿ ಸರ್ ಮೂಲ ಕಾರಣ. ಸಿನಿಮಾ ಆಗಲೂ ಅವರೇ ಕಾರಣ. ಅಪ್ಪ ಸಂಸಾರಕ್ಕೆ,‌ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದು ನಾವು ಅಪ್ಪ ಆದಾಗ ಗೊತ್ತಾಗುತ್ತದೆ. ಇಡೀ ತಂಡದ ಬೆಂಬಲದಿಂದ ಈ ಸಿನಿಮಾ ಆಗಿದೆ. ಅಪ್ಪ ಐ ಲವ್ ಯೂ ಚಿತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಕೇಳಿಕೊಂಡರು.

'ಅಪ್ಪ ಐ ಲವ್ ಯೂ' ಚಿತ್ರತಂಡ

ತಬಲಾ ನಾಣಿ ಮಾತನಾಡಿ, ಕಿನ್ನಾಳ್ ರಾಜ್ ಅವರು ಈ ಸಿನಿಮಾಗೆ ಅದ್ಭುತ ಹಾಡು ಕೊಟ್ಟಿದ್ದಾರೆ. ನಮ್ಮ ಚಿತ್ರಕ್ಕೆ ಅವರು ಬರೆದಿರುವ ಹಾಡು ಹಾಡುವಾಗ ವಿಜಯ್ ಪ್ರಕಾಶ್ ಕಣ್ಣೀರಾದರು. ಅಂತಹ ಸಾಹಿತ್ಯವದು. ಅದಕ್ಕೆ ತಕ್ಕನಾದ ಟ್ಯೂನ್ ಆಕಾಶ್ ಕೊಟ್ಟಿದ್ದಾರೆ. ವಿಜಯ್ ಚೆಂಡೂರು ಒಳ್ಳೆ ಪಾತ್ರ ಮಾಡಿದ್ದಾರೆ. ನಿಮ್ಮ ಬೆಂಬಲ ಇರಲಿ ಎಂದರು.

ಇದನ್ನೂ ಓದಿ:'ಡಿಯರ್​'ಗಾಗಿ ಬಣ್ಣ ಹಚ್ಚಿದ ಸ್ಪಿನ್​ ಮಾಂತ್ರಿಕ ಆರ್.ಅಶ್ವಿನ್ - R Ashwin

ಅಥರ್ವ್ ಆರ್ಯ 'ಅಪ್ಪಾ ಐ ಲವ್ ಯೂ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಅಪ್ಪನ ಕಥೆಯನ್ನೇ ಇಲ್ಲಿ ನಿರೀಕ್ಷೆ ಮಾಡಬೇಕಾಗುತ್ತದೆ. ಅಪ್ಪನಾಗಿ ಹಾಸ್ಯ ನಟ ತಬಲಾ ನಾಣಿ ಅಭಿನಯಿಸಿದ್ದಾರೆ. ಪ್ರೇಮ್ ಹಾಗೂ ಮಾನ್ವಿತಾ ಕಾಮತ್ ಜೊತೆಗೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವರು ಚಿತ್ರ.

ಇದನ್ನೂ ಓದಿ:'ಗಾಳಿಪಟ 2' ನಿರ್ಮಾಪಕ ರಮೇಶ್ ರೆಡ್ಡಿ ಮಗಳ ಅದ್ಧೂರಿ ಮದುವೆ: ಸ್ಯಾಂಡಲ್‌ವುಡ್ ತಾರೆಗಳು​ ಭಾಗಿ - Ramesh Reddy Daughter Wedding

ಚಿತ್ರಕ್ಕೆ ಆಕಾಶ್ ಪರ್ವ ಸಂಗೀತ ಒದಗಿಸಿದ್ದಾರೆ. ಕೆಜಿಎಫ್ ಕಿನ್ನಾಳ್ ರಾಜ್, ಕವಿರಾಜ್, ವಿ. ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ನಾಗಾರ್ಜುನ್ ಆರ್.ಡಿ. ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕೆಆರ್​ಎಸ್​​ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.ಅಪ್ಪನ ಮಹತ್ವ ಸಾರುವ ಚಿತ್ರ ಇದೇ 12ರಂದು ತೆರೆಗೆ ಬರಲಿದೆ.

ABOUT THE AUTHOR

...view details