ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ನಟ ಕಮ್ ನಿರ್ದೇಶಕ ಅನೀಶ್ ತೇಜೇಶ್ವರ್. ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ಅನೀಶ್ ತೇಜೇಶ್ವರ್ ಅವರೀಗ ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚು ಹರಿಸಲು ಸಜ್ಜಾಗಿದ್ದಾರೆ. 'ಆರಾಮ್ ಅರವಿಂದ್ ಸ್ವಾಮಿ' ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ. ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು, ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ ಜೊತೆ ಕಾಣಿಸಿಕೊಂಡಿದ್ದಾರೆ.
ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ತೇಜೇಶ್ವರ್ ಭೇಟಿಯಾಗಿದ್ದಾರೆ. ಇಂದು ಹೈದರಾಬಾದ್ನ ಹೆಸರಾಂತ ನಟ ಚಿರಂಜೀವಿ ಅವರ ನಿವಾಸದಲ್ಲಿ ಭೇಟಿಯಾಗಿರೋ ಸ್ಯಾಂಡಲ್ವುಡ್ ಸ್ಟಾರ್, ಅಭಿನಂದನೆ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಕಂಟೆಂಟ್ ಅನ್ನೂ ಸಹ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅವರು ಅನೀಶ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಅನೀಶ್ ತೇಜೇಶ್ವರ್ ಹುಟ್ಟುಹಬ್ಬದ ನಿಮಿತ್ತ ಬಿಡುಗಡೆಯಾಗಿದ್ದ ಆರಾಮ್ ಅರವಿಂದ್ ಸ್ವಾಮಿ ಟೈಟಲ್ ಟ್ರ್ಯಾಕ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡಿಗೆ ಬೊಂಬಾಟ್ ಆಗಿ ಅನೀಶ್ ಕುಣಿದು ಕುಪ್ಪಳಿಸಿದ್ದರು. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಮೂಡಿಬಂದಿದ್ದ ಟೈಟಲ್ ಟ್ರ್ಯಾಕ್ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.