ನವದೆಹಲಿ:ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಭಾರತೀಯ ಚಿತ್ರರಂಗದೊಂದಿಗೆ ಬಹಳ ಹಿಂದಿನಿಂದಲೂ ನಂಟು ಹೊಂದಿದ್ದಾರೆ. 'ಕಪ್ಪು ಬಿಳುಪು' ಚಿತ್ರಗಳು ಸಾಮಾನ್ಯವಾಗಿದ್ದ ಸಮಯದಿಂದ ಅಮಿತಾಬ್ ಕೆಲಸ ಮಾಡುತ್ತಿದ್ದಾರೆ. ಮತ್ತು ನಟರಿಗೆ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಸುಲಭವಾಗಿ ಮತ್ತು ಸುರಕ್ಷತೆಯೊಂದಿಗೆ ನಿರ್ವಹಿಸಲು ಸಹಾಯ ಮಾಡುವ ಯಾವುದೇ ವಿಎಫ್‌ಎಕ್ಸ್ ಇರಲಿಲ್ಲ.
ಇದೀಗ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಮಾಡುವುದು ಇಂದಿನ ತಂತ್ರಜ್ಞಾನದ ಯುಗಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ವಿಎಫ್‌ಎಕ್ಸ್ ಇಲ್ಲದೇ ಚಿತ್ರೀಕರಿಸಿದ ದಿನಗಳನ್ನು ಬಿಗ್ ಬಿ ಮೆಲುಕು ಹಾಕಿದ್ದಾರೆ.
1969ರಲ್ಲಿ 'ಸಾತ್ ಹಿಂದೂಸ್ತಾನಿ' ಚಿತ್ರದ ಮೂಲಕ ನಟನೆ ಆರಂಭಿಸಿದ ನಟ ಅಮಿತಾಬ್ ಬಚ್ಚನ್, ಹಲವು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಿಗ್ ಬಿ ಅಮಿತಾಬ್ ಅವರು, ಜಂಜೀರ್, ಶೋಲೆ, ಅಮರ್ ಅಕ್ಬರ್ ಆಂಥೋನಿ, ಡಾನ್ ಸೇರಿದಂತೆ ಅನೇಕ ಸಾಹಸ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು, ಚಲನಚಿತ್ರಗಳಿಗಾಗಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ತಮ್ಮ ಜೀವನವನ್ನು ಪಣಕ್ಕಿಟ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಇನಸ್ಟಾಗ್ರಾಮ್ ಪೋಸ್ಟ್:ಬಿಗ್ ಬಿ ಅವರು ತಮ್ಮ ಚಲನಚಿತ್ರವೊಂದರಲ್ಲಿ ಕಪ್ಪು- ಬಿಳುಪಿನ ಫೋಟೋವೊಂದನ್ನು ಪೋಸ್ಟ್ ಮಾಡಿದರು. ಆ ಫೋಟೋದಲ್ಲಿ ಅಮಿತಾಬ್ ಬಂಡೆಯಿಂದ ಜಿಗಿಯುವುದು ಕಂಡು ಬರುತ್ತದೆ. "ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ 30 ಅಡಿ ಬಂಡೆಯಿಂದ ಜಿಗಿಯುವುದು. ಯಾವುದೇ ಸರಂಜಾಮು ಇಲ್ಲ, ಮುಖ ಬದಲಾಯಿಸುವುದಿಲ್ಲ, ವಿಎಫ್‌ಎಕ್ಸ್ ಇಲ್ಲ... ಮತ್ತು ಲ್ಯಾಂಡಿಂಗ್... ತಪ್ಪು... ನೋ ಮ್ಯಾಟ್ರೆಸ್... ನೀವು ಅದೃಷ್ಟವಂತರಾಗಿದ್ದರೆ.. ಆ ದಿನಗಳು ನನ್ನ ಸ್ನೇಹಿತನಿದ್ದಂತೆ" ಎಂದು ಅಮಿತಾಬ್ ಬಚ್ಚನ್ ಇನ್ ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.