ಕರ್ನಾಟಕ

karnataka

ETV Bharat / entertainment

'ನಾಟ್ ಔಟ್' ಚಿತ್ರದ ಮೂಲಕ ಕನ್ನಡಿರ ಮನಗೆಲ್ಲಲು ಬರುತ್ತಿದ್ದಾರೆ ಅಜಯ್ ಪೃಥ್ವಿ, ರಚನಾ ಇಂದರ್ - Not Out movie - NOT OUT MOVIE

ಅಜಯ್ ಪೃಥ್ವಿ ಹಾಗೂ ರಚನಾ ಇಂದರ್ ಅಭಿನಯದ 'ನಾಟ್ ಔಟ್' ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗಲಿದೆ.

Not Out movie ready to release
ರಿಲಿಸ್​ಗೆ ರೆಡಿ ಅಜಯ್ ಪೃಥ್ವಿ ಹಾಗೂ ರಚನಾ ಇಂದರ್ ಸಿನಿಮಾ (ETV Bharat)

By ETV Bharat Karnataka Team

Published : Jul 16, 2024, 6:36 PM IST

ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳು ಪ್ರೇಕ್ಷಕರನ್ನು ತಲುಪುತ್ತಿವೆ. ಈ ಹಿಂದೆ 'ಪುರುಷೋತ್ತಮ ಪ್ರಸಂಗ' ಎಂಬ ಚಿತ್ರದ ಮೂಲಕ ಭರವಸೆ ಮೂಡಿಸಿರೋ ಅಜಯ್ ಪೃಥ್ವಿ ಹಾಗೂ ಲವ್ ಮಾಕ್​​ಟೈಲ್ ಖ್ಯಾತಿಯ ರಚನಾ ಇಂದರ್ ಒಟ್ಟಿಗೆ ಅಭಿನಯಿಸಿರುವ 'ನಾಟ್ ಔಟ್' ಚಿತ್ರ ಒಂದಲ್ಲ ಒಂದು ವಿಚಾರಗಳಿಂದ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ.

ನಿರ್ದೇಶಕ ಅಂಬರೀಶ್ ಎಂ ಆಕ್ಷನ್ ಕಟ್ ಹೇಳಿರುವ ನಾಟ್ ಔಟ್ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್​​ನ ಕಥೆ ಹೊಂದಿರುವ ನಾಟ್ ಔಟ್ ಟ್ರೇಲರ್​ನಲ್ಲಿ ಆಮುರ್ಗಂ ಖ್ಯಾತಿಯ ರವಿಶಂಕರ್ ಗೌಡ ಹಾಗೂ ಗೋಪಾಲ ಕೃಷ್ಣದೇಶಪಾಂಡೆ ಅಂತಹ ಹಿರಿಯ ನಟರ ಜೊತೆ ಯುವ ನಟ ಅಜಯ್ ಪೃಥ್ವಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಅಜಯ್ ಪೃಥ್ವಿ ಅಭಿನಯದ ಹೊಸ ಸಿನಿಮಾ ಬಿಡುಗಡೆಗೆ ಸಜ್ಜು (ETV Bharat)

ಚಿತ್ರದಲ್ಲಿ ಅಜಯ್ ಪೃಥ್ವಿ ಆ್ಯಂಬುಲೆನ್ಸ್ ಡ್ರೈವರ್​ನ ಪಾತ್ರ ನಿರ್ವಹಿಸಿದ್ದು, ರಚನಾ ಇಂದರ್ ಜೋಡಿಯಾಗಿದ್ದಾರೆ. ಇವರ ಜೊತೆಗೆ ಗೋವಿಂದೇಗೌಡ, ಕಾಕ್ರೋಜ್ ಸುಧೀ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್ ಸೇರಿದಂತೆ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ನ ಕಾಮಿಡಿ ಸ್ಟಾರ್ ಈಗ ಖಡಕ್ ವಿಲನ್: ಈ ನಟನನ್ನು ಗುರುತಿಸುವಿರೇ? - Villain role Photoshoot

ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಹಾಲೇಶ್ ಅವರ ಛಾಯಾಗ್ರಹಣವಿದೆ. ಸದ್ಯ ಟ್ರೇಲರ್​ನಿಂದಲೇ ಗಮನ ಸೆಳೆಯುತ್ತಿರೋ ನಾಟ್ ಔಟ್ ಚಿತ್ರ ಇದೇ ಜುಲೈ 19ರಂದು (ಶುಕ್ರವಾರ) ಪ್ರೇಕ್ಷಕರಿಗೆ ದರ್ಶನ ಕೊಡಲಿದೆ.

ABOUT THE AUTHOR

...view details