ಕರ್ನಾಟಕ

karnataka

ETV Bharat / entertainment

ಮುಂದುವರೆದ​ 'ಪುಷ್ಪ-2' ಕ್ರೇಜ್​​​: ಬದಲಾಯ್ತು ಬಾಲಿವುಡ್​ನ 'ಸಿಂಗಮ್​ ಅಗೈನ್' ರಿಲೀಸ್​ ಡೇಟ್ - Singham Again Release Postponed - SINGHAM AGAIN RELEASE POSTPONED

ಆಗಸ್ಟ್ 15ರಂದು ಚಿತ್ರಮಂದಿರ ಪ್ರವೇಶಿಸಲು ರೆಡಿಯಾಗುತ್ತಿದ್ದ ಬಹುನಿರೀಕ್ಷಿತ 'ಸಿಂಗಮ್​ ಅಗೈನ್' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ.

Singham Again, Pushpa 2 poster
ಸಿಂಗಮ್​ ಎಗೈನ್, ಪುಷ್ಪ 2 ಪೋಸ್ಟರ್ (Instagram)

By ETV Bharat Karnataka Team

Published : Jun 14, 2024, 1:01 PM IST

ಚಿತ್ರರಂಗದಲ್ಲಿ ಬಿಗ್​​ ಸ್ಟಾರ್ ಕಾಸ್ಟ್ ಸಿನಿಮಾಗಳು ಅದ್ಧೂರಿ ಬಿಡುಗಡೆಗೆ ಸಜ್ಜಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ತೆರೆಗಪ್ಪಳಿಸಲು ಭಾರತೀಯ ಚಿತ್ರರಂಗದ ಎರಡು ಬಹುನಿರೀಕ್ಷಿತ ಸಿನಿಮಾಗಳು ಸಜ್ಜಾಗಿದ್ದವು. ಬಾಲಿವುಡ್​ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್​ ಕಟ್ ಹೇಳಿರುವ ಸಿಂಗಮ್ ಸರಣಿಯ ಮೂರನೇ ಭಾಗ ಮತ್ತು ಸೌತ್​ನ ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಎರಡೂ ಚಿತ್ರಗಳು ಆಗಸ್ಟ್ 15ಕ್ಕೆ ಚಿತ್ರಮಂದಿರ ಪ್ರವೇಶಿಸಲು ಸಿದ್ದತೆ ನಡೆದಿತ್ತು. ಹಾಗಾಗಿ, ಸಿನಿಪ್ರಿಯರ ಗಮನ ಈ ಎರಡು ಬಹುನಿರೀಕ್ಷಿತ ಚಿತ್ರಗಳ ಜೊತೆಗೆ ಬಾಕ್ಸ್ ಆಫೀಸ್​ ಫೈಟ್​ ಮೇಲಿತ್ತು.​​​ ಆದರೀಗ ಬಿಡುಗಡೆ ದಿನದಲ್ಲಿ ಸಣ್ಣ ಬದಲಾವಣೆಯಾಗಿದೆ. ಬಹುತಾರಾಗಣದ ಸಿಂಗಮ್ ಅಗೈನ್​ ಈ ಮೊದಲು ತಿಳಿಸಿದಂತೆ ಆಗಸ್ಟ್ 15ರಂದು ರಿಲೀಸ್​ ಆಗುವುದಿಲ್ಲ.

ಬಾಲಿವುಡ್​​ನ ಬಹುಬೇಡಿಕೆಯ ತಾರೆಯರಾದ ಅಜಯ್ ದೇವ್​ಗನ್, ಅಕ್ಷಯ್ ಕುಮಾರ್, ರಣ್​ವೀರ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಖಾನ್, ಟೈಗರ್ ಶ್ರಾಫ್ ಮತ್ತು ಅರ್ಜುನ್ ಕಪೂರ್ ಸೇರಿದಂತೆ ಬಹುತಾರಾಗಣದ ಈ ಚಿತ್ರದ ಬಿಡುಗಡೆ ಮುಂದೂಡಿಕೆಯಾಗಿದೆ. ಈ ವರ್ಷದ ದೀಪಾವಳಿಗೆ ಸಿನಿಮಾ ತೆರೆಕಾಣಲಿದೆ.

ನಟ ಅಜಯ್ ದೇವಗನ್ ಸಿಂಗಮ್ ಅಗೈನ್​​ನ ಹೊಸ ಬಿಡುಗಡೆ ದಿನಾಂಕವನ್ನು ತಮ್ಮ ಅಫೀಶಿಯಲ್​​ ಸೋಷಿಯಲ್​ ಮೀಡಿಯಾ ಮೂಲಕ ಘೋಷಿಸಿದ್ದಾರೆ. ಪೋಸ್ಟರ್ ಹಂಚಿಕೊಂಡ ನಟ, "ಸಿಂಗಮ್​ ಎಗೈನ್​​​ ಈ ದೀಪಾವಳಿಗೆ (ಅಕ್ಟೋಬರ್ 29) ಘರ್ಜಿಸಲಿದೆ" ಎಂದು ಬರೆದುಕೊಂಡಿದ್ದಾರೆ. ಚಿತ್ರ ಪ್ರಮುಖ ಪಾತ್ರವರ್ಗದ ಹೆಸರುಗಳನ್ನು ಒಳಗೊಂಡ ಪೋಸ್ಟರ್ ಇದಾಗಿದೆ.

ಇದನ್ನೂ ಓದಿ:ದರ್ಶನ್​​​ ಪ್ರಕರಣ: 'ಸ್ಟಾರ್ ವರ್ಶಿಪ್​​​ ಸಿಂಡ್ರೋಮ್​​​ನ ಸೈಡ್​ ಎಫೆಕ್ಟ್'​​​ - ನಿರ್ದೇಶಕ ಆರ್​ಜಿವಿ ಟ್ವೀಟ್ - RGV on Darshan Case

ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ನಟ ಅಜಯ್ ದೇವ್​​ಗನ್, "ಆಗಸ್ಟ್ 15ರೊಳಗೆ ಸಿನಿಮಾ ರೆಡಿಯಾಗಲಿದೆ ಎಂಬುದರ ಬಗ್ಗೆ ನಮಗೆ ಖಚಿತವಿಲ್ಲ. ಹಾಗಾಗಿ, ನಾವು ಆತುರ ಪಡಲು ಬಯಸುವುದಿಲ್ಲ. ಅವಸರದ ಕೆಲಸ ಸರಿಯಾಗುವುದಿಲ್ಲ. ನಾವು ಸಮಯ ತೆಗೆದುಕೊಂಡು ಚಿತ್ರವನ್ನು ಪೂರ್ಣಗೊಳಿಸುತ್ತೇವೆ" ಎಂದು ತಿಳಿಸಿದ್ದರು.

ಇದನ್ನೂ ಓದಿ:'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ - Hamare Baarah Movie

ಸದ್ಯ ಚಿತ್ರತಂಡ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಿದೆ. ಇತ್ತೀಚೆಗಷ್ಟೇ, ನಿಖಿಲ್ ಅಡ್ವಾಣಿ ನಿರ್ದೇಶನದ ಮತ್ತು ಜಾನ್ ಅಬ್ರಹಾಂ ನಟನೆಯ ಸಿನಿಮಾ ಬಿಡುಗಡೆ ದಿನಾಂಕವನ್ನು ಜುಲೈ 12 ರಿಂದ ಆಗಸ್ಟ್ 15ಕ್ಕೆ ಮುಂದೂಡಲಾಗಿದೆ. ಜಾನ್ ಅಭಿನಯದ 'ವೇದಾ' ಸಿನಿಮಾ 'ಪುಷ್ಪ 2'ರೊಂದಿಗೆ ಮುಖಾಮುಖಿಯಾಗಲಿದೆ. ಒಟ್ಟಾರೆ, ಅಪಾರ ಸಂಖ್ಯೆಯ ಸಿನಿಪ್ರಿಯರು ದೊಡ್ಡ​ ಸ್ಟಾರ್​ಗಳ ಅಭಿನಯದ ಬಿಗ್​ ಬಜೆಟ್​​​ ಸಿನಿಮಾಗಳನ್ನು ವೀಕ್ಷಿಸಲು ಸಾಕಷ್ಟು ಕಾತರರಾಗಿದ್ದಾರೆ.

ABOUT THE AUTHOR

...view details