ಕರ್ನಾಟಕ

karnataka

ETV Bharat / entertainment

'ಸನ್ ಆಫ್ ಸರ್ದಾರ್' ಸೀಕ್ವೆಲ್​ಗೆ ಸಜ್ಜಾದ ಅಜಯ್ ದೇವ್​​ಗನ್, ಸಂಜಯ್​ ದತ್​ - Son of Sardaar 2 - SON OF SARDAAR 2

ಅಜಯ್ ದೇವ್​​ಗನ್ ಮತ್ತು ಸಂಜಯ್ ದತ್ 'ಸನ್ ಆಫ್ ಸರ್ದಾರ್' ಸೀಕ್ವೆಲ್‌ ಶೂಟಿಂಗ್​ನಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆಂದು ವರದಿಗಳು ಸೂಚಿಸಿವೆ.

Ajay Devgn and Sanjay Dutt
ಅಜಯ್ ದೇವ್​​ಗನ್ ಹಾಗೂ ಸಂಜಯ್ ದತ್ (ANI)

By ETV Bharat Karnataka Team

Published : Jul 2, 2024, 5:50 PM IST

ಬಾಲಿವುಡ್ ನಟ ಅಜಯ್ ದೇವ್​​ಗನ್ ತಮ್ಮ ಹಲವು ಸಿನಿಮಾಗಳ ಸೀಕ್ವೆಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚು ಸೀಕ್ವೆಲ್​ಗಳನ್ನು ಹೊಂದಿರುವ ನಟ ಇವರು. ಸದ್ಯ ಸಿಂಗಮ್ ಎಗೈನ್​​​​ನಲ್ಲಿ ಬ್ಯುಸಿಯಾಗಿರುವ ನಟ ಶೀಘ್ರದಲ್ಲೇ 'ಸನ್ ಆಫ್ ಸರ್ದಾರ್' ಸೀಕ್ವೆಲ್‌ ಅನ್ನೂ ಪ್ರಾರಂಭಿಸಲಿದ್ದಾರೆ. ಕಾಮಿಡಿ ಸಿನಿಮಾದ ಎರಡನೇ ಭಾಗ ಈ ತಿಂಗಳು ಸೆಟ್ಟೇರಲಿದೆ ಎಂದು ವರದಿಗಳು ತಿಳಿಸಿವೆ.

ಮಾಧ್ಯಮ ವರದಿಗಳ ಪ್ರಕಾರ, ಅಜಯ್ ತಮ್ಮ ಜಸ್ಸಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಸಂಜಯ್ ದತ್ ತಮ್ಮ ಜನಪ್ರಿಯ ಪಾತ್ರ ಬಲ್ವಿಂದರ್ ಸಿಂಗ್ ಸಂಧು ಅಥವಾ ಬಿಲ್ಲು ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಈ ಇಬ್ಬರೂ ಮುಂದಿನ ಭಾಗದಲ್ಲಿ ಮುಖಾಮುಖಿಯಾಗಲಿದ್ದಾರೆ ಎಂದು ವರದಿಯಾಗಿದೆ. ಸಂಜಯ್​​, ಅಜಯ್​ ಅವರ ಶತ್ರುವಾಗಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಸ್ಕಾಟ್ಲೆಂಡ್‌ನಲ್ಲಿ 50 ದಿನಗಳ ಶೂಟಿಂಗ್​ ನಡೆಯಲಿದ್ದು, ಇದೇ ಜುಲೈ ಅಂತ್ಯದಲ್ಲಿ ಪ್ರಾರಂಭವಾಲಿದೆ.

ಇದನ್ನೂ ಓದಿ:ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ: ಈ ತಿಂಗಳು ಬಿಡುಗಡೆಯಾಗಲಿರುವ ಸಿನಿಮಾ, ಸೀರಿಸ್​ಗಳಿವು - Upcoming Movies and Web Series

ಚಿತ್ರಕ್ಕೆ ನಿರ್ದೇಶಕ ವಿಜಯ್ ಕುಮಾರ್ ಅರೋರಾ ಆ್ಯಕ್ಷನ್​ ಕಟ್​ ಹೇಳಲಿದ್ದು, ಅಜಯ್, ಸಂಜಯ್ ಜೊತೆ ಬಹುಬೇಡಿಕೆ ನಟಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ದೇವ್​ಗನ್​​ ಪ್ರಸ್ತುತ ಬಾಲಿವುಡ್​ನ ಸ್ಟಾರ್​​ ಡೈರೆಕ್ಟರ್ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಮ್ ಎಗೈನ್​​​​ ಚಿತ್ರೀಕರಣದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್​ನ ಕರೀನಾ ಕಪೂರ್ ಖಾನ್, ಅಕ್ಷಯ್ ಕುಮಾರ್, ರಣ್​​​ವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮತ್ತು ಜಾಕಿ ಶ್ರಾಫ್ ಅವರಂತಹ ಸ್ಟಾರ್ ನಟರು ತೆರೆಹಂಚಿಕೊಂಡಿದ್ದಾರೆ. ಅಜಯ್ ದೇವ್​ಗನ್​​ ಅತಿ ಶೀಘ್ರದಲ್ಲೇ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ. ನಂತರ 'ಸನ್ ಆಫ್ ಸರ್ದಾರ್ 2' ಪ್ರಾರಂಭವಾಗಬಹುದು.

ಇದನ್ನೂ ಓದಿ:ಸೂಪರ್ ಸ್ಟಾರ್ಸ್ ಸಲ್ಮಾನ್ ಖಾನ್-ಕಮಲ್ ಹಾಸನ್ ಸ್ಕ್ರೀನ್​ ಶೇರ್: ಆ್ಯಕ್ಷನ್​ ಸಿನಿಮಾಗೆ ಅಟ್ಲೀ ಆ್ಯಕ್ಷನ್​ ಕಟ್ - Atlee next movie

'ಸಿಂಗಮ್ ಎಗೈನ್' ಪೂರ್ಣಗೊಳ್ಳುತ್ತಿದ್ದಂತೆ, ಸನ್ ಆಫ್ ಸರ್ದಾರ್ 2ನಲ್ಲಿ ಭಾಗಿಯಾಗಲಿದ್ದಾರೆ. ಸ್ಕಾಟ್ಲೆಂಡ್ ಶೆಡ್ಯೂಲ್​​ ಮುಗಿಸಿದ ನಂತರ, ದೇವ್​​ಗನ್ ಮತ್ತೊಂದು ಬಹುನಿರೀಕ್ಷಿತ ಸೀಕ್ವೆಲ್ ಆದ ದೇ ದೇ ಪ್ಯಾರ್ ದೇ 2 ಶೂಟಿಂಗ್​ಗಾಗಿ ಲಂಡನ್​ಗೆ ತೆರೆಳುವ ಸಾಧ್ಯತೆ ಇದೆ. ಇವುಗಳಲ್ಲದೇ ಅಜಯ್ ಇತರೆ ಕೆಲ ಸೀಕ್ವೆಲ್‌ಗಳನ್ನೂ ಹೊಂದಿದ್ದಾರೆ. ರೈಡ್ 2 ಮತ್ತು ಗೋಲ್ಮಾಲ್ 5 ಕೂಡಾ ಮೂಡಿ ಬರಲಿದೆ. ಪ್ರಸ್ತುತ ಬಿಡುಗಡೆಗೆ ಸಜ್ಜಾಗಿರುವ ಔರಾನ್ ಮೇ ಕಹಾ ದಮ್ ಥಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ಜುಲೈ 5ರಂದು ಬಿಡುಗಡೆ ಆಗಲಿದೆ.

ABOUT THE AUTHOR

...view details