ಬಹುಭಾಷಾ ತಾರೆಯರಾದ ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮಿಂಚು ಹರಿಸಲು ಸಿದ್ಧರಾಗಿದ್ದಾರೆ. ಜಾಗತಿಕ ಸೌಂದರ್ಯ ಬ್ರ್ಯಾಂಡ್ ಅನ್ನು ಪ್ರತಿನಿಧಿಸುವ ಈ ಇಬ್ಬರು ನಟಿಮಣಿಯರು ಫ್ರೆಂಚ್ ರಿವೇರಿಯಾದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವರು. ಈವೆಂಟ್‌ನ 77ನೇ ಆವೃತ್ತಿಯ ರೆಡ್ ಕಾರ್ಪೆಟ್‌ನಲ್ಲಿ ಸೇರಲಿರುವ ಹಲವಾರು ಸೆಲೆಬ್ರಿಟಿಗಳಲ್ಲಿ ಇವರೂ ಸೇರಿದ್ದಾರೆ.
ಅದಿತಿ 2022ರಲ್ಲಿ ಮೊದಲ ಬಾರಿಗೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಐಶ್ ಆಗಾಗ್ಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಜಗತ್ತಿನ ಗಮನ ಸೆಳೆದಿದ್ದಾರೆ.
"ಮಹಿಳೆಯರು ತಮ್ಮ ವಿಶಿಷ್ಟತೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಬೇಕು, ಸ್ವೀಕರಿಸಬೇಕೆಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ" ಎಂದು ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ಸಿನಿಮಾದಲ್ಲಿ ಕಾಣಿಸಿಕೊಂಡ ಅದಿತಿ ರಾವ್ ಹೈದರಿ ತಿಳಿಸಿದ್ದರು. ಪ್ರತಿಷ್ಟಿತ ಕಾರ್ಯಕ್ರಮದ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಾ, "ಮಹಿಳಾ ಸಬಲೀಕರಣವನ್ನು ನಿರಂತರವಾಗಿ ಉತ್ತೇಜಿಸುವ ಬ್ರ್ಯಾಂಡ್‌ನೊಂದಿಗೆ ಸಹಕರಿಸುತ್ತಿರುವುದು ನಿಜಕ್ಕೂ ಗೌರವದ ವಿಚಾರ" ಎಂದು ಹೇಳಿದರು.