ಕರ್ನಾಟಕ

karnataka

ETV Bharat / entertainment

ಕಲ್ಕಿ ಸಿನಿಮಾದ ಟ್ರೈಲರ್​ಗೂ ಮುನ್ನ ಪೋಸ್ಟರ್​ ಬಿಡುಗಡೆ; ಸ್ಟನ್ನಿಂಗ್​ ಲುಕ್​ನಲ್ಲಿ ದೀಪಿಕಾ ಪಡುಕೋಣೆ - Kalki Stunning Poster - KALKI STUNNING POSTER

ಕಲ್ಕಿ ಸಿನಿಮಾದ ಟ್ರೈಲರ್​ ನಾಳೆ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ನಟಿ ದೀಪಿಕಾ ಪಡುಕೋಣೆ ಅವರ ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಕಲ್ಕಿ ಸಿನಿಮಾದ ಟ್ರೈಲರ್​ಗೂ ಮುನ್ನ ಪೋಸ್ಟರ್​ ಬಿಡುಗಡೆ
ಕಲ್ಕಿ ಸಿನಿಮಾದ ಟ್ರೈಲರ್​ಗೂ ಮುನ್ನ ಪೋಸ್ಟರ್​ ಬಿಡುಗಡೆ (Instagram)

By ETV Bharat Karnataka Team

Published : Jun 9, 2024, 4:14 PM IST

ಹೈದರಾಬಾದ್:ಪ್ಯಾನ್​ ಇಂಡಿಯಾ ಸ್ಟಾರ್​ ಡಾರ್ಲಿಂಗ್​ ಪ್ರಭಾಸ್​ ಅವರ ಬಹುನಿರೀಕ್ಷಿತ "ಕಲ್ಕಿ 2898 ಎಡಿ" ಸಿನಿಮಾದ ಟ್ರೇಲರ್​ ನಾಳೆ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಅಭಿಮಾನಿಗಳಲ್ಲಿ ಸಿನಿಮಾದ ಕುತೂಹಲವನ್ನು ಕೆರಳಿಸಲು ಚಿತ್ರತಂಡ ಪೋಸ್ಟರ್​ ಒಂದನ್ನು ಬಿಡುಗಡೆ ಮಾಡಿದೆ.

ಪೋಸ್ಟರ್​ನಲ್ಲಿ ನಟಿ ದೀಪಿಕಾ ಪಡುಕೋಣೆ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದೆ ಕೋಟೆ, ಜನರನ್ನು ಕಾಣಬಹುದು. ಯಾವುದೇ ಕುತೂಹಲಕಾರಿ ಸನ್ನಿವೇಶದಲ್ಲಿ ದೀಪಿಕಾ ಅವರು ಅಚ್ಚರಿಯ ರೀತಿಯಲ್ಲಿ ನೋಟ ಬೀರಿದ್ದಾರೆ. ಈ ಲುಕ್ ನಟಿ ದೀಪಿಕಾರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಪ್ರತಿಬಿಂಬಿಸುತ್ತದೆ. ಟ್ರೇಲರ್​ ಲಾಂಚ್​ಗೂ ಮುನ್ನ ಚಿತ್ರ ನಿರ್ಮಾಪಕರು ದೀಪಿಕಾರ ಪೋಸ್ಟರ್​ ಬಿಡುಗಗೆ ಮಾಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ವೈಜಯಂತಿ ಮೂವೀಸ್​ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದೆ. "ಅವಳೊಂದಿಗೆ ಭರವಸೆಯೂ ಶುರುವಾಗಲಿದೆ. ಕಲ್ಕಿ 2898 ಎಡಿ ಟ್ರೈಲರ್ ನಾಳೆ ಬಿಡುಗಡೆಯಾಗುತ್ತದೆ" ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ಪೋಸ್ಟರ್​ ಅನ್ನು ದೀಪಿಕಾ ಪಡುಕೋಣೆ ಕೂಡ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಪತಿ, ನಟ ರಣವೀರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೂಮ್​ (ಬೆಂಕಿ ಎಮೋಜಿ) ಸ್ಟನ್ನರ್! ಎಂದು ಕಾಮೆಂಟ್​ ಮಾಡಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಅವರು W-O-W ಎಂದು ಬರೆದಿದ್ದಾರೆ. "ದೀಪಿಕಾ, ನೀವು ಅಕ್ಷರಶಃ ಸಿನಿಮಾ ಮತ್ತು ನಮ್ಮ ಹೃದಯವನ್ನು ಆಳುತ್ತಿರುವಿರಿ" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ.ಅಸ್ವನಿ ದತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಘಟಾನುಘಟಿ ತಾರೆಯರಿರುವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗ್​ ಅಶ್ವಿನ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಎಲ್ಲರ ಪ್ರೀತಿಯ ಡಾರ್ಲಿಂಗ್​ ಪ್ರಭಾಸ್​​​ ಮುಖ್ಯಭೂಮಿಕೆಯಲ್ಲಿದ್ದರೆ, ದಕ್ಷಿಣ ಭಾರತದ ಹಿರಿಯ ನಟ ಕಮಲ್ ಹಾಸನ್, ಬಾಲಿವುಡ್​ ಸೂಪರ್​ಸ್ಟಾರ್​ ಅಮಿತಾಭ್​ ಬಚ್ಚನ್​​, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪುರಾಣ ಕಥೆಯಾಧಾರಿತ ವೈಜ್ಞಾನಿಕ ದೃಶ್ಯಾವಳಿಗಳುಳ್ಳ ಸಿನಿಮಾ ಇದಾಗಿದೆ. ಮೊದಲು ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಬಳಿಕ ಕಾರಣಾಂತರಗಳಿಂದ ಜೂನ್ 27 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕಳೆದ ತಿಂಗಳಷ್ಟೇ ಟೀಸರ್‌ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಅಮಿತಾಭ್ ಬಚ್ಚನ್​ ಅವರು ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿರುವ ಸುಳಿವು ಬಿಟ್ಟುಕೊಟ್ಟಿದ್ದರು. ಗುಹೆಯಲ್ಲಿ ಪ್ರಾರ್ಥನೆ ಮಾಡುತ್ತಿರುವಂತೆ ಅದರಲ್ಲಿ ತೋರಿಸಲಾಗಿತ್ತು. ಈ ಚಿಕ್ಕ ಟೀಸರ್​ ಸಿನಿಮಾದ ಸಿರಿವಂತಿಕೆಯ ಬಗ್ಗೆ ಸಣ್ಣ ಝಲಕ್​ ನೀಡಿತ್ತು.

ಇದನ್ನೂ ಓದಿ:ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಟ್ರೇಲರ್​​ ಬಿಡುಗಡೆಗೆ ಮುಹೂರ್ತ ಫಿಕ್ಸ್ - Kalki 2898 Ad Trailer

ABOUT THE AUTHOR

...view details