ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಚಿತ್ರರಂಗದ ಟ್ವಿನ್ಸ್ ಸ್ಟಾರ್ಗಳಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಅವರು ತುಳು ಚಿತ್ರದಲ್ಲಿ ಒಟ್ಟಿಗೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಯುಗಾದಿ ಪ್ರಯುಕ್ತ ಮಂಗಳೂರಿನಲ್ಲಿ ಕಲ್ಯಾಣ್ ಜ್ಯುವೆಲ್ಲರ್ನ ನೂತನ ಆಭರಣ ಬಿಡುಗಡೆಗೆ ಆಗಮಿಸಿದ್ದ ಈ ಅವಳಿ ನಟಿಯರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಕನ್ನಡ ಸಿನಿರಂಗಕ್ಕೆ ಬಂದು ಹತ್ತು ವರ್ಷಗಳಾಗಿವೆ: ತುಳು ನಮ್ಮ ಭಾಷೆ. ನಾವು ನಟನೆ ಮಾಡಿಯೇ ಮಾಡುತ್ತೇವೆ. ತುಳು ಭಾಷೆ ಮೇಲಿನ ನಮ್ಮ ಪ್ರೀತಿ ಅಪಾರ. ನಮ್ಮ ಮಾತೃಭಾಷೆ ಅದು. ನಾವು ಹುಟ್ಟಿ ಬೆಳೆದದ್ದು ಮಂಗಳೂರಿನಲ್ಲಿ. ತುಳು ಮೇಲೆ ನಮಗೆ ಸಾಫ್ಟ್ ಕಾರ್ನರ್ ಇದ್ದೇ ಇರುತ್ತದೆ. ತುಳು ಸಿನಿಮಾ ಸಿಕ್ಕರೆ ನಾವು ನಟನೆ ಮಾಡಿಯೇ ಮಾಡುತ್ತೇವೆ. ನಾವು ಕನ್ನಡ ಸಿನಿರಂಗಕ್ಕೆ ಬಂದು 10 ವರ್ಷಗಳಾಗಿದೆ. ಈ ಹತ್ತು ವರ್ಷದಲ್ಲಿ ತುಳು ಇಂಡಸ್ಟ್ರಿಗೆ ಬರಲು ಬಹಳ ಪ್ರಾರ್ಥಿಸುತ್ತಿದ್ದೇವೆ. ತುಳು ಭಾಷೆಯ ಉತ್ತಮ ಸ್ಕ್ರಿಪ್ಟ್ಗಾಗಿ ಕಾಯುತ್ತಿದ್ದೇವೆ. ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾದರೂ ತುಳು ಸಿನಿಮಾಗೆ ಬರಲು ಹತ್ತು ವರ್ಷದಿಂದಲೂ ಕನಸು ಕಂಡಿದ್ದೇವೆ. ಒಳ್ಳೆ ತುಳು ಸ್ಕ್ರಿಪ್ಟ್ ಬಂದರೆ ಪಕ್ಕಾ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದರು.
ಒಂದೊಳ್ಳೆ ಕಥೆಗಾಗಿ ಕಾಯುತ್ತಿದ್ದೇವೆ: ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಆದ ಮೇಲೆ ನಮ್ಮಿಬ್ಬರಿಗೆ ಒಟ್ಟಿಗೆ ನಟಿಸಲು ಮೂರ್ನಾಲ್ಕು ಸಿನಿಮಾಗಳ ಆಫರ್ ಬಂತು. ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಬ್ಲಾಕ್ಬಸ್ಟರ್ ಸಿನಿಮಾ. ಹಾಗಾಗಿ ಅದಕ್ಕಿಂತ ಉತ್ತಮ ಸಿನಿಮಾ ನಿರೀಕ್ಷಿಸುತ್ತಿದ್ದೇವೆ. ಅಭಿಮಾನಿಗಳ ನಿರೀಕ್ಷೆ ತಲುಪುವ ಪ್ರಯತ್ನ ನಮ್ಮದು. ಹಾಗಾಗಿಯೇ ಒಳ್ಳೆಯ ಸಬ್ಜೆಕ್ಟ್ ಬರಲಿ ಎಂದು ಕಾಯುತ್ತಿದ್ದೇವೆ. ತುಳು ಸಿನಿಮಾದಲ್ಲಿಯೂ ನಾವಿಬ್ಬರು ಒಟ್ಟಿಗೆ ಬರಲು ತಯಾರಿದ್ದೇವೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.