ಹೈದರಾಬಾದ್‌ನಲ್ಲಿ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ 109ನೇ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಸೆಟ್‌ನಲ್ಲಿ ನಟಿ ಊರ್ವಶಿ ರೌಟೇಲ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ನಲ್ಲಿ ಭಾಗಿಯಾಗಿದ್ದಾಗ ನಟಿ ಗಾಯಗೊಂಡರು ಎಂದು ಹೇಳಲಾಗುತ್ತಿದೆ.
ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿಯ ನಡುವೆ, ಅವರ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ಕೆಲವು ಫೋಟೋ-ವಿಡಿಯೋಗಳು ಶೇರ್ ಆಗಿವೆ. ಇದನ್ನು ಗಮನಿಸಿದ ಅಭಿಮಾನಿಗಳು, ನೆಟ್ಟಿಗರು ನಟಿಗೆ ಏನಾಗಿರಬಹುದೆಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಮೂರನೇ ಹಂತದ ಶೂಟಿಂಗ್ಗಾಗಿ ನಟಿ ಇತ್ತೀಚೆಗೆ ಹೈದರಾಬಾದ್‌ಗೆ ಆಗಮಿಸಿದ್ದರು.
ಗಂಭೀರವಾಗಿ ಮುರಿತಕ್ಕೊಳಗಾಗಿರುವ ಊರ್ವಶಿ, ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಹಲವು ಸುದ್ದಿಗಳು ಶರವೇಗದಲ್ಲಿ ಹರಡುತ್ತಿದ್ದರೂ ಕೂಡ, ನಟಿಯ ಲೇಟೆಸ್ಟ್ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಬೇರೆಯದ್ದನ್ನೇ ಹೇಳುತ್ತಿವೆ. ಹೌದು, ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ದುಬೈನಿಂದ ಫೋಟೋ-ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸ್ಪಾನಲ್ಲಿನ ಕ್ಷಣಗಳು ಮತ್ತು ಐಷಾರಾಮಿ ಹೋಟೆಲ್‌ನಂತೆ ಕಾಣುವ ಕೋಣೆಯಲ್ಲಿ ಕಾಫಿ ಕಪ್ನ ಫೋಟೋಗಳು ಶೇರ್ ಆಗಿವೆ.
ಊರ್ವಶಿ ರೌಟೇಲಾ ಇನ್ಸ್ಟಾಗ್ರಾಮ್ ಸ್ಟೋರಿ (Urvashi Rautela IG Story Screen Grab) ಈ ಪೋಸ್ಟ್‌ಗಳು ಮತ್ತು ಗಾಯಗೊಂಡಿರುವ ವರದಿಗಳ ಸತ್ಯಾಸತ್ಯತೆ ತಿಳಿಯುವ ತವಕದಲ್ಲಿರುವ ಅಭಿಮಾನಿಗಳಿಗೆ ನಿರಾಶೆ ತರಿಸಿದೆ. ಹಳೆಯ ಫೋಟೋ-ವಿಡಿಯೋಗಳನ್ನು ನಿನ್ನೆ, ಇಂದು ಶೇರ್ ಮಾಡಿರುವ ಸಾಧ್ಯತೆಗಳಿವೆ. ಇಲ್ಲವೇ ಚಿಕಿತ್ಸೆ ಪಡೆಯುತ್ತಲೇ ತಮ್ಮ ತಂಡದವರಿಂದ ಪೋಸ್ಟ್ಗಳನ್ನು ಶೇರ್ ಮಾಡಿಸಿರುವ ಸಾಧ್ಯತೆಗಳೂ ಇವೆ. ಯಾವುದಕ್ಕೂ ಸ್ವತಃ ಊರ್ವಶಿ ಅವರೇ ಅಧಿಕೃತ ಮಾಹಿತಿ ಕೊಡಬೇಕಿದೆ.
ಎನ್ಬಿಕೆ 109: ಬಾಬಿ ಎಂದೇ ಜನಪ್ರಿಯವಾಗಿರುವ ಕೊಲ್ಲಿ ಸಂತೋಷ್ ರವೀಂದ್ರ ನಿರ್ದೇಶನದ ಎನ್ಬಿಕೆ 109 ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಬಾಬಿ ಡಿಯೋಲ್, ದುಲ್ಕರ್ ಸಲ್ಮಾನ್ ಮತ್ತು ಚಾಂದಿನಿ ಚೌದರಿ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ 4 ಸಿನಿಮಾಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾಗೆ ತಮನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಊರ್ವಶಿ ರೌಟೇಲಾ ಇನ್ಸ್ಟಾಗ್ರಾಮ್ ಸ್ಟೋರಿ (Urvashi Rautela IG Story Screen Grab) ಇದನ್ನೂ ಓದಿ:10 ದಿನದಲ್ಲಿ ಮುಗಿಯಲಿದೆ 'ದೇವರ' ಶೂಟಿಂಗ್; ಜೂ.ಎನ್ಟಿಆರ್ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ - Devara Shooting
ಸೌತ್ ಸೂಪರ್ ಸ್ಟಾರ್ ಚಿರಂಜೀವಿ ಅವರ 'ವಾಲ್ಟೇರ್ ವೀರಯ್ಯ', ಪವನ್ ಕಲ್ಯಾಣ್ ಅವರ 'ಬ್ರೋ' ಮತ್ತು ಅಖಿಲ್ ಅಕ್ಕಿನೇನಿ ಅವರ 'ಏಜೆಂಟ್' ಸೇರಿದಂತೆ ಹಲವು ಚಿತ್ರಗಳಲ್ಲಿ ಸೂಪರ್ ಡ್ಯಾನ್ಸ್ ಮಾಡುವ ಮೂಲಕ ಊರ್ವಶಿ ಟಾಲಿವುಡ್‌ನಲ್ಲಿ ಅಲೆ ಎಬ್ಬಿಸಿದ್ದಾರೆ.
ಇದನ್ನೂ ಓದಿ:'ಶಾರುಖ್ ಜೊತೆ ನಟಿಸಲು ಅವಕಾಶ ಸಿಕ್ಕಿಲ್ಲ': ಬೇಸರ ವ್ಯಕ್ತಪಡಿಸಿದ ಖ್ಯಾತ ನಟ - Shah Rukh Khan
'ಎನ್ಬಿಕೆ 109' ಅಲ್ಲದೇ ಊರ್ವಶಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ 'ವೆಲ್ಕಮ್ ಟು ದಿ ಜಂಗಲ್', ಸನ್ನಿ ಡಿಯೋಲ್ ಮತ್ತು ಸಂಜಯ್ ದತ್ ನಟನೆಯ 'ಬಾಪ್', ರಣ್ದೀಪ್ ಹೂಡಾ ಅವರನ್ನೊಳಗೊಂಡ 'ಇನ್ಸ್ಪೆಕ್ಟರ್ ಅವಿನಾಶ್ 2', 'ಬ್ಲ್ಯಾಕ್ ರೋಸ್' ಸೇರಿದಂತೆ ಹಲವು ಪ್ರೊಜೆಕ್ಟ್‌ಗಳನ್ನು ಹೊಂದಿದ್ದಾರೆ. ಇಂಟರ್ನ್ಯಾಶನಲ್ ಮ್ಯೂಸಿಕ್ ವಿಡಿಯೋದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ, ಪರ್ವೀನ್ ಬಾಬಿ ಅವರ ಜೀವನಚರಿತ್ರೆಯಲ್ಲೂ ನಟಿಸಲಿದ್ದಾರೆ.