ಕಲ್ಕಿ 2898 AD ಒಂದು ವೈಜ್ಞಾನಿಕ ಮತ್ತು ಭವಿಷ್ಯದ ಚಿತ್ರ. ಪ್ರಭಾಸ್ ನಾಯಕ ನಟನಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಈಗಾಗಲೇ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನಿ, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಈಗ ಶೋಭನಾ ಹೆಸರೂ ಈ ಪಟ್ಟಿಗೆ ಸೇರಿಕೊಂಡಿದೆ. ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2006ರಲ್ಲಿ ಗೇಮ್ ನಂತರ ಶೋಭನಾ ತೆಲುಗಿನಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೇ ನಿಜವಾದರೆ ಹದಿನೆಂಟು ವರ್ಷಗಳ ನಂತರ ಸೋಭನಾ ನಟಿಸುತ್ತಿರುವ ತೆಲುಗು ಚಿತ್ರ ಇದಾಗಿದೆ. ಇದೇ ವೇಳೆ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ. ಇದೇ ತಿಂಗಳ 7ರಂದು ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಬಹುದು ಎನ್ನಲಾಗುತ್ತಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅವರ ಬಹುನಿರೀಕ್ಷಿತ "ಕಲ್ಕಿ 2898 ಎಡಿ" ಸಿನಿಮಾದ ಟ್ರೇಲರ್ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಅಭಿಮಾನಿಗಳಲ್ಲಿ ಸಿನಿಮಾದ ಕುತೂಹಲವನ್ನು ಕೆರಳಿಸಲು ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.
ಪೋಸ್ಟರ್ನಲ್ಲಿ ನಟಿ ದೀಪಿಕಾ ಪಡುಕೋಣೆ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದೆ ಕೋಟೆ, ಜನರನ್ನು ಕಾಣಬಹುದು. ಯಾವುದೇ ಕುತೂಹಲಕಾರಿ ಸನ್ನಿವೇಶದಲ್ಲಿ ದೀಪಿಕಾ ಅವರು ಅಚ್ಚರಿಯ ರೀತಿಯಲ್ಲಿ ನೋಟ ಬೀರಿದ್ದಾರೆ. ಈ ಲುಕ್ ನಟಿ ದೀಪಿಕಾರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಪ್ರತಿಬಿಂಬಿಸುತ್ತದೆ. ಟ್ರೇಲರ್ ಲಾಂಚ್ಗೂ ಮುನ್ನ ಚಿತ್ರ ನಿರ್ಮಾಪಕರು ದೀಪಿಕಾರ ಪೋಸ್ಟರ್ ಬಿಡುಗಗೆ ಮಾಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಇದನ್ನು ಓದಿ:ಕಲ್ಕಿ ಸಿನಿಮಾದ ಟ್ರೈಲರ್ಗೂ ಮುನ್ನ ಪೋಸ್ಟರ್ ಬಿಡುಗಡೆ; ಸ್ಟನ್ನಿಂಗ್ ಲುಕ್ನಲ್ಲಿ ದೀಪಿಕಾ ಪಡುಕೋಣೆ - Kalki Stunning Poster