ETV Bharat / state

ಪಾಕ್, ಬಾಂಗ್ಲಾದ 159 ಅಕ್ರಮ ವಲಸಿಗರ ಬಂಧನ: ಜಿ.ಪರಮೇಶ್ವರ್​​ - ILLEGAL IMMIGRANTS ARREST

ರಾಜ್ಯದಲ್ಲಿಅನಧಿಕೃತವಾಗಿ ನೆಲೆಸಿದ್ದ ವಲಸಿಗರ ಬಂಧನ ಕುರಿತಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು​​ ವಿಧಾನಪರಿಷತ್​​ನಲ್ಲಿ ಮಾಹಿತಿ ನೀಡಿದರು.

parameshwara
ಜಿ.ಪರಮೇಶ್ವರ್​​ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರು ಅನಧಿಕೃತವಾಗಿ ವಾಸವಿರುವ ವಿಚಾರ ವಿಧಾನಪರಿಷತ್​​ನಲ್ಲಿ ಗಂಭೀರ ಚರ್ಚೆಯಾಯಿತು.

ಈವರೆಗೆ ಅನಧಿಕೃತವಾಗಿ ಇರುವ ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಬಿಜೆಪಿ ಸದಸ್ಯ ಡಿ.ಎಸ್.ಅರುಣ ಕೇಳಿದ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ್​​ ಉತ್ತರಿಸಿದರು. ಪಾಕಿಸ್ತಾನದ 24, ಬಾಂಗ್ಲಾ ದೇಶದ 159 ಜನರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಶೈಕ್ಷಣಿಕ ಪ್ರವಾಸ ಮತ್ತು ಉದ್ಯೋಗ ಅರಸಿ ಬರುವ ಅಕ್ರಮ ವಲಸಿಗರು ಏಜೆಂಟ್​​ಗಳ ಮೂಲಕ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪಡೆದು ಇಲ್ಲಿಯೇ ನೆಲೆಯೂರಿದ್ದಾರೆ‌‌‌. ಹಾಗಾಗಿ, ಇವರನ್ನು ಪತ್ತೆ ಹಚ್ಚಿ ವಾಪಸ್​​ ಕಳಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳಲ್ಲಿ ನಕಲಿ ದಾಖಲೆಗಳ ಮೂಲಕ 115 ಜನ ಅನಧಿಕೃತವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರು ವಾಸವಿದ್ದಾರೆ. ಬೆಂಗಳೂರು ನಗರದಲ್ಲಿ 93 ಜನರು, ಮಂಗಳೂರು ನಗರದಲ್ಲಿ ಓರ್ವ, ಬೆಂಗಳೂರು ಜಿಲ್ಲೆಯಲ್ಲಿ ಇಬ್ಬರು, ಚಿತ್ರದುರ್ಗದಲ್ಲಿ 06, ಹಾಸನದಲ್ಲಿ ಮೂವರು ಹಾಗೂ ಉಡುಪಿಯಲ್ಲಿ 10 ಮಂದಿ ಅಕ್ರಮವಾಗಿ ವಾಸವಿದ್ದರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೀಡಿದ್ದ ನೀರಿನ ಬಿಲ್ ನೋಟಿಸ್ ವಾಪಸ್​​: ಸಚಿವ ಎಂ.ಬಿ.ಪಾಟೀಲ್

ಬೆಂಗಳೂರಿನಲ್ಲಿ ಈ ಬಗ್ಗೆ ನಗರ ವಿಶೇಷ ಘಟಕವಿದ್ದು, ನಗರಕ್ಕೆ ಪ್ರವೇಶಿಸುವ ಯಾವುದೇ ವಿದೇಶಿಯರ ಬಗ್ಗೆ ಪೊಲೀಸ್ ಠಾಣೆಗಳ ಮೂಲಕ ಬೆಂಗಳೂರಿನ ಎಫ್​ಆರ್​ಆರ್​ಒ ಅವರಿಂದ ಮಾಹಿತಿ ಪಡೆದು, ಪ್ರತಿ ವಿಭಾಗೀಯ ಡಿಸಿಪಿಗಳ ಮುಖಾಂತರ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತಿದೆ. ಅಲ್ಲದೇ ಸಿಸಿಬಿ ಸಂಘಟಿತ ಅಪರಾಧ ದಳವೂ ಕೂಡ ಕಾರ್ಯಾಚರಣೆ ನಡೆಸುತ್ತಿರುತ್ತದೆ. ಇತರ ನಗರ, ಜಿಲ್ಲೆಗಳಲ್ಲಿ ಅನಧಿಕೃತವಾಗಿ ಪ್ರವೇಶಿಸುವ ವಿದೇಶಿಯರ ಪತ್ತೆ ಹಚ್ಚಲು ಸ್ಪೇಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಡಾ. ಜಿ‌.ಪರಮೇಶ್ವರ್​​ ತಿಳಿಸಿದರು.

ಇದನ್ನೂ ಓದಿ: ಅಮಿತ್ ಶಾ ಹೇಳಿದ್ದರಲ್ಲಿ ತಪ್ಪೇನಿದೆ? ಅಂಬೇಡ್ಕರ್​ರನ್ನು ಕಾಂಗ್ರೆಸ್ ಪ್ರತಿಯೊಂದು ಹೆಜ್ಜೆಯಲ್ಲೂ ವಿರೋಧಿಸಿದೆ: ಛಲವಾದಿ ನಾರಾಯಣಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.