ಒಂದು ಸರಳ ಪ್ರೇಮಕಥೆ ಈ ವರ್ಷದ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ನಿರ್ದೇಶಕ ಸಿಂಪಲ್ ಸುನಿ ಹಾಗೂ ದೊಡ್ಮನೆಯ ಕುಡಿ ವಿನಯ್ ರಾಜ್ಕುಮಾರ್ ಕಾಂಬೋದಲ್ಲಿ ಬರ್ತಿರುವ ಚಿತ್ರ. ಸದ್ಯ ಹಾಡುಗಳಿಂದ ಸ್ಯಾಂಡಲ್ವುಡ್ ಟಾಕ್ ಆಗುತ್ತಿರುವ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣನೆಯಷ್ಟೇ ಬಾಕಿ ಇದೆ. ಸದ್ಯ ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ ಸುನಿ ಈಗ ಒಂದೊಂದೇ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಪ್ರೇಮಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ.
ಇದೀಗ ಒಂದು ಸರಳ ಪ್ರೇಮಕಥೆ ಸಿನಿಮಾದ ಮತ್ತೊಂದು ಮೆಲೋಡಿ ಮಸ್ತಿ ಅನಾವರಣಗೊಂಡಿದೆ. ಸೂಫಿ ಶೈಲಿ ಸರಳ ಗೀತೆಯನ್ನು ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಎಲ್ಲ ಮಾತನ್ನು ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ಒದಗಿಸುವುದರ ಜೊತೆಗೆ ಶಿವಾನಿ ಸ್ವಾಮಿ ಜೊತೆಗೂಡಿ ಧ್ವನಿಯಾಗಿದ್ದಾರೆ. ದೊಡ್ಮನೆ ಕುವರ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ಮಲ್ಲಿಕಾ ಹಾಡಿನಲ್ಲಿ ಮಿಂಚಿದ್ದಾರೆ.