ಹೈದರಾಬಾದ್: ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಹಾಗು ನಟಿ ಮಿಮಿ ಚಕ್ರವರ್ತಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಬೆದರಿಕೆಯ ಜೊತೆಗೆ ಅಶ್ಲೀಲ ಸಂದೇಶಗಳು ಬಂದಿವೆ. ಈ ವಿಷಯವನ್ನು ಸ್ವತಃ ನಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಕೋಲ್ಕತ್ತಾದಲ್ಲಿ 31ರ ಹರೆಯದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾದ ನಂತರ ನಟಿಗೆ ಈ ಬೆದರಿಕೆ ಬಂದಿದೆ. ಸೆಲೆಬ್ರಿಟಿಗಳಾದ ರಿದ್ಧಿ ಸೇನ್, ಅರಿಂದಮ್ ಸಿಲ್ ಮತ್ತು ಮಧುಮಿತಾ ಸರ್ಕಾರ್ ಅವರೊಂದಿಗೆ ಮಿಮಿ ಚಕ್ರವರ್ತಿ ಆಗಸ್ಟ್ 14ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನ್ಯಾಯ ಮತ್ತು ಮಹಿಳೆಯರ ಸುರಕ್ಷತೆಗಾಗಿ ನಡೆಸಿದ ಪ್ರತಿಭಟನೆ ಇದಾಗಿತ್ತು.
ಮಿಮಿ ಚಕ್ರವರ್ತಿ 'ಎಕ್ಸ್' ಪೋಸ್ಟ್ (X post) ಮಿಮಿ ಚಕ್ರವರ್ತಿ ತಾವು ಎದುರಿಸಿದ ಕಠಿಣ ಪರಿಸ್ಥಿತಿಯನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ವಿವರಿಸಿದ್ದಾರೆ. ಈ ಕುರಿತ ಪೋಸ್ಟ್ ಅನ್ನು ಕೋಲ್ಕತ್ತಾ ಪೊಲೀಸ್ ಸೈಬರ್ ಸೆಲ್ಗೆ ಟ್ಯಾಗ್ ಮಾಡಿ, ಇಂಥ ಬೆದರಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾವು ಮಹಿಳೆಗೆ ನ್ಯಾಯ ಕೇಳುತ್ತಿದ್ದೇವಲ್ಲವೇ? ಆದರೆ ಕೆಲವು ವಿಷಪೂರಿತ ಪುರುಷರು ಇಂಥ ಘಟನೆಗಳು ಸಾಮಾನ್ಯವೆಂಬಂತೆ ಬಿಂಬಿಸುತ್ತಿದ್ದಾರೆ. ಇದಕ್ಕೆ ಯಾವ ಶಿಕ್ಷಣ ಬೆಂಬಲ ನೀಡುತ್ತದೆ' ಎಂದು ಅವರು ಪ್ರಶ್ನಿಸಿದ್ದಾರೆ.
ನಟಿಯ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ, ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಒತ್ತಾಯಿಸಿದ್ದಾರೆ. ಕೆಲವರು ಇತರೆ ವಿಷಯಗಳ ಬಗೆಗಿನ ಪೊಲೀಸರ ಗಮನವನ್ನು ಟೀಕಿಸಿದ್ದಾರೆ. ಮಿಮಿ ಚಕ್ರವರ್ತಿ ವಿರುದ್ಧದ ಬೆದರಿಕೆಗಳು, ನ್ಯಾಯಕ್ಕಾಗಿ ಪ್ರತಿಪಾದಿಸುವ ಹೆಸರಾಂತ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಒತ್ತಿ ಹೇಳಿದ್ದಾರೆ. ಗಣ್ಯರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಕಥೆಯೇನು? ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್ನಲ್ಲಿ ಪಿಎಂ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್: ಅತಿ ಹೆಚ್ಚು ಫಾಲೋವರ್ಸ್ ಲಿಸ್ಟ್ನಲ್ಲಿ ಮೂರನೇ ಸ್ಥಾನ - Most Followed Indian
ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ: ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9ರಂದು ಕರ್ತವ್ಯದಲ್ಲಿದ್ದ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಘಟನೆಯ ನಂತರ ಕೋಲ್ಕತ್ತಾದಲ್ಲಿ"Women, Reclaim the Night" ಹೆಸರಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೌರ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಮುಂದುವರೆದಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ:'ಮೈ ಹೀರೋ' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಹಾಲಿವುಡ್ ನಟರು: ಟ್ರೇಲರ್ ನೋಡಿ - My Hero Trailer