ಕರ್ನಾಟಕ

karnataka

ETV Bharat / entertainment

ಮದುವೆಗೆ ನಟಿ ಕೀರ್ತಿ ಸುರೇಶ್ ಸಿದ್ಧತೆ: ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಎಂದ ತಂದೆ ಸುರೇಶ್​ - KEERTHY SURESH BOYFRIEND ANTONY

ನವೆಂಬರ್ 25 ರಂದು ಮದುವೆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ನಟಿ ಕೀರ್ತಿ ಸುರೇಶ್ ಅವರ ತಂದೆ ಸುರೇಶ್ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

Actress Keerthy Suresh's Marriage: Official Annoucement Coming Soon!
ಮದುವೆಗೆ ನಟಿ ಕೀರ್ತಿ ಸುರೇಶ್ ಸಿದ್ಧತೆ: ಶೀಘ್ರದಲ್ಲೇ ಅಧಿಕೃತ ಪ್ರಕಟಣೆ! (ETV Bharat)

By ETV Bharat Karnataka Team

Published : Nov 21, 2024, 10:19 PM IST

ಚೆನ್ನೈ (ತಮಿಳುನಾಡು):ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ (Antony Thattil) ಅವರನ್ನು ಇದೇ ಡಿಸೆಂಬರ್‌ನಲ್ಲಿ ಮದುವೆ ಆಗಲಿದ್ದಾರೆ ಎಂಬ ವರದಿ ಬಗ್ಗೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಅವರ ತಂದೆ ಸುರೇಶ್ ಅವರನ್ನು ಈ ಟಿವಿ ಭಾರತ ಸಂಪರ್ಕಿಸಿದಾಗ, ಮಾತನಾಡಿದ ಅವರು "ನಾವು ನವೆಂಬರ್ 25 ರಂದು ಮದುವೆಯ ಬಗ್ಗೆ ಔಪಚಾರಿಕ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅಂದೇ ಆ ಬಗ್ಗೆ ಕೀರ್ತಿ ಸುರೇಶ್​ ಅವರ ಮದುವೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಸುರೇಶ್​ ಹೇಳಿದ್ದಾರೆ.

ಗೋವಾದಲ್ಲಿ ಕೀರ್ತಿ ಸುರೇಶ್​ ಮತ್ತು ಅಂಟೋನಿ ಥಟಿಲ್​ ಅವರ ಮದುವೆ ನಡೆಯಲಿದೆ ಎಂದು ಈ ಮೊದಲು ವರದಿಯಾಗಿತ್ತು. 14 ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲಿದ್ದಾರೆ ಎಂದು ವರದಿಗಳು ಹೇಳಿದ್ದವು. ಆ ಬಗ್ಗೆ ನವೆಂಬರ್​ 25 ರಂದು ಅಧಿಕೃತ ಮಾಹಿತಿ ಹೊರ ಬೀಳಲಿದೆ ಎಂಬ ಬಗ್ಗೆ ನಟಿಯ ತಂದೆಯೇ ಮಾಹಿತಿ ನೀಡಿದ್ದಾರೆ. ಹೈಸ್ಕೂಲ್ ಸಮಯದಿಂದ ಪ್ರೀತಿಯಲ್ಲಿರುವ ಜೋಡಿ ತಮ್ಮ ಪ್ರೇಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿರುವುದು ನಿಶ್ಚಿತವಾಗಿದೆ.

ನಟಿಯ ಚಿತ್ರ ಜೀವನ: ಖ್ಯಾತ ನಟಿ ಕೀರ್ತಿ ಸುರೇಶ್ ದಕ್ಷಿಣ ಸಿನಿ ಕ್ಷೇತ್ರದಲ್ಲಿ ಅತಿದೊಡ್ಡ ಹೆಸರು. ಹಲವು ಭಾಷೆಯ ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಬಹು ಜನಪ್ರೀಯತೆ ಗಳಿಸಿದ್ದಾರೆ. ಬಾಲನಟಿಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ ಕೀರ್ತಿ ಸುರೇಶ್, 'ಇದು ಎನ್ನ ಮಾಯಂ' ಚಿತ್ರದಲ್ಲಿ ನಾಯಕಿಯಾಗಿ ತಮಿಳು ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ವಿಕ್ರಮ್ ಪ್ರಭುಗೆ ನಾಯಕಿ ಆಗಿ ಅವರು ಮನೋಜ್ಞ ಅಭಿನಯ ನೀಡಿದ್ದರು.

ನಂತರ, ಅವರು ರಜಿನಿಮುರುಗನ್ ಮತ್ತು ರೆಮೋ ಚಿತ್ರಗಳಲ್ಲಿ ಶಿವಕಾರ್ತಿಕೇಯನ್ ಅವರೊಂದಿಗೆ ನಟಿಸುವ ಮೂಲಕ ಜನಪ್ರೀಯತೆ ಗಳಿಸಿಕೊಂಡಿದ್ದರು. ಆ ನಂತರ ಅವರು ವಿಜಯ್ ಜೊತೆ ಭೈರವ ಮತ್ತು ಸರ್ಕಾರ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಂದಕೋಜಿ 2, ರಜನಿಕಾಂತ್ ಅವರ ಅಣ್ಣತ, ಮಾಮಣ್ಣನ್ ಸೇರಿದಂತೆ ಹಲವು ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ. ಇದಲ್ಲದೇ ಅಗ್ನಿದವಾಸಿ ಮತ್ತು ನೇನು ಲೋಕಲ್ ಮುಂತಾದ ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಜನಮನ್ನಣೆ ಗಳಿಸಿ ಪ್ರಸಿದ್ಧ ನಟಿಯಾಗಿ ಹೊರಹೊಮ್ಮಿದ್ದಾರೆ.

ತಮಿಳು ಸಿನಿಮಾ 'ನಾಡಿಗೈಯರ್ ತಿಲಕಂ' ನಲ್ಲಿ ಸಾವಿತ್ರಿಯಾಗಿ ನಟಿಸಿದ್ದ ಕೀರ್ತಿ ಸುರೇಶ್ ಅವರ ಪಾತ್ರ ಭಾರಿ ಮೆಚ್ಚುಗೆ ಗಳಿಸಿತ್ತು. ಈ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಕೀರ್ತಿ ಸುರೇಶ್‌ಗೆ ರಾಷ್ಟ್ರ ಪ್ರಶಸ್ತಿ ಕೂಡಾ ಲಭಿಸಿದೆ.

ಇದನ್ನು ಓದಿ:14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಗೋವಾದಲ್ಲಿ ಪ್ರಿಯತಮನನ್ನು ವರಿಸಲಿರುವ ನಟಿ ಕೀರ್ತಿ ಸುರೇಶ್?

ABOUT THE AUTHOR

...view details