ಕರ್ನಾಟಕ

karnataka

ETV Bharat / entertainment

ಮೊನಾಲಿಸಾ ಸೌಂದರ್ಯಕ್ಕೆ ಮನಸೋತ ಕಂಗನಾ ಹೇಳಿದ್ದಿಷ್ಟು - KANGANA RANAUT

ಬಾಲಿವುಡ್​​ ಬ್ಯೂಟಿ, ರಾಜಕಾರಣಿ ಕಂಗನಾ ರಣಾವತ್​​ ಕೂಡಾ ಮೊನಾಲಿಸಾ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.

Actress Kangana Ranaut
ಕಂಗನಾ ರಣಾವತ್​​, ಮೊನಾಲಿಸಾ (IANS)

By ETV Bharat Entertainment Team

Published : Jan 30, 2025, 7:42 PM IST

2025ರ ಮಹಾ ಕುಂಭಮೇಳ ಮೂಲಕ ಆನ್​ಲೈನ್​​​ ಸಂಚಲನ ಸೃಷ್ಟಿಸಿರುವ ಇಂದೋರ್‌ನ ಮೊನಾಲಿಸಾ ಬಹುತೇಕ ನೆಟ್ಟಿಗರ ಚರ್ಚೆಯ ವಿಷಯವಾಗಿದ್ದಾರೆ. ಬಹುತೇಕರು ಈ ಚೆಲುವೆಯನ್ನು ನ್ಯಾಚುರಲ್​ ಬ್ಯೂಟಿ ಎಂದು ಹಾಡಿ ಹೊಗಳಿದ್ದಾರೆ. ವೈರಲ್​ ಬ್ಯೂಟಿಯನ್ನೀಗ ಬಾಲಿವುಡ್​​ ಬ್ಯೂಟಿ, ರಾಜಕಾರಣಿ ಕಂಗನಾ ರಣಾವತ್​​ ಕೂಡಾ ಹೊಗಳಿದ್ದಾರೆ.

ನೆಟ್ಟಿಗರು ಇಂದೋರ್​​ ಮೊನಾಲಿಸಾರ ಕಣ್ಣುಗಳು ಮತ್ತು ಅವರ ಸೌಂದರ್ಯವನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ಅವರನ್ನು ಅತಿಲೋಕ ಸುಂದರಿ ಮೊನಾಲಿಸಾಗೆ ಹೋಲಿಸಲು ಪ್ರಾರಂಭಿಸಿದರು. ಇದೀಗ ಇಂದೋರ್​​ ಚೆಲುವೆಯನ್ನು ಹೊಗಳಿರುವ ಕಂಗನಾ ರಣಾವತ್​, ಸಿನಿಮಾ ಎಂಬ ಗ್ಲ್ಯಾಮರ್​ ಲೋಕದಲ್ಲಿ ಹಾಲ್ಗೆನ್ನೆ ಚೆಲುವೆಯರಿಗೆ ಮಾತ್ರ ಪ್ರಾಮುಖ್ಯತೆ ನೀಡುವವರ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ದೀಪಿಕಾ ಮತ್ತು ಬಿಪಾಶಾರಂತಹ ಕೃಷ್ಣಸುಂದರಿಯರ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

ಇದನ್ನೂ ಓದಿ:ವಿದ್ಯಾಭ್ಯಾಸಕ್ಕೆ ಅಡ್ಡಿಯಾಯ್ತು ಬಡತನ, ಅದೃಷ್ಟ ಬದಲಿಸಿತು ಕುಂಭಮೇಳ: ಬಾಲಿವುಡ್‌ಗೆ 'ಮೊನಾಲಿಸಾ' ಎಂಟ್ರಿ

ಕಂಗನಾ ರಣಾವತ್​ ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ, 'ಈ ಪುಟ್ಟ ಹುಡುಗಿ ತನ್ನ ನ್ಯಾಚುರಲ್​ ಬ್ಯೂಟಿಯಿಂದ ಇಂಟರ್ನೆಟ್​ನಲ್ಲಿ ಸದ್ದು ಮಾಡಿದ್ದಾರೆ' ಎಂದು ಬರೆದಿದ್ದಾರೆ. ಆದರೆ, ಫೋಟೋಗಳು ಮತ್ತು ಸಂದರ್ಶನಗಳಿಗಾಗಿ ಅವರಿಗೆ ಕಿರುಕುಳ ನೀಡಿದ ಜನರನ್ನು ನಾನು ಇಷ್ಟಪಡೋದಿಲ್ಲ. ಮತ್ತೊಂದೆಡೆ, ಗ್ಲ್ಯಾಮರ್ ಲೋಕದಲ್ಲಿರುವ ಜನರು 'ಡಾರ್ಕ್​​ ಟೋನ್​​' ಅನ್ನು ಏಕೆ ಇಷ್ಟಪಡುವುದಿಲ್ಲ ಎಂಬುದು ನನಗೆ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​ ಚೆಲುವೆ ಮಹಿರಾ ಶರ್ಮಾ ಪ್ರೀತಿಯಲ್ಲಿ ಕ್ರಿಕೆಟರ್​ ಮೊಹಮ್ಮದ್ ಸಿರಾಜ್?

ಡಾರ್ಕ್ ಬ್ಯೂಟಿಯರನ್ನು ಸಹ ಸಮಾನವಾಗಿ ಪ್ರೀತಿಸುತ್ತಿದ್ದ ಭಾರತೀಯ ಚಿತ್ರರಂಗದ ಆ ಯುಗವನ್ನು ಕಂಗನಾ ನೆನಪಿಸಿಕೊಂಡರು. 'ಜನರು ಅನು ಅಗರ್ವಾಲ್, ಕಾಜೋಲ್, ದೀಪಿಕಾ, ಬಿಪಾಶಾ ಮತ್ತು ರಾಣಿ ಮುಖರ್ಜಿ ಅವರನ್ನು ಪ್ರೀತಿಸಿದಷ್ಟು ಯುವ ನಟಿಯರನ್ನು ಪ್ರೀತಿಸುತ್ತಾರೆಯೇ'? ಎಂದು ಕೇಳಿದ್ದಾರೆ. ಸದ್ಯ ಎಲ್ಲಾ ನಟಿಯರು ಹೇಗೆ ಇಷ್ಟೊಂದು ಸುಂದರಿಯಾದರು? ಯೌವನದಲ್ಲಿ ಡಾರ್ಕ್​​ ಟೋನ್ ಹೊಂದಿದ್ದವರು ಸಹ. ಮೊನಾಲಿಸಾರನ್ನು ಇಷ್ಟಪಡುವವರು ಹೊಸ ಪ್ರತಿಭೆಗಳಿಗೂ ಅದೇ ಮಹತ್ವ ಏಕೆ ಕೊಡಬಾರದು? ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details