ಕರ್ನಾಟಕ

karnataka

ETV Bharat / entertainment

ಜಾಹ್ನವಿ ಕತ್ತಲ್ಲಿ 'ಶಿಕು' ಬರಹದ ಡೈಮಂಡ್ ನೆಕ್ಲೇಸ್: ಪ್ರೇಮ ಸಂಬಂಧದ ಸುಳಿವು ಕೊಟ್ರಾ? - Janhvi Kapoor - JANHVI KAPOOR

ಬೋನಿ ಕಪೂರ್ ನಿರ್ಮಾಣದ 'ಮೈದಾನ್‌' ಸ್ಪೆಷಲ್​​ ಸ್ಕ್ರೀನಿಂಗ್‌ನಲ್ಲಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದು, ಅವರು ಧರಿಸಿದ್ದ ಡೈಮಂಡ್ ನೆಕ್ಲೇಸ್ ಕುತೂಹಲ ಕೆರಳಿಸಿದೆ.

Janhvi Shiku Necklace
'ಶಿಕು' ಬರಹವಿರುವ ನೆಕ್ಲೇಸ್ ಧರಿಸಿ ಬಂದ ಜಾಹ್ನವಿ

By ETV Bharat Karnataka Team

Published : Apr 10, 2024, 4:58 PM IST

Updated : Apr 10, 2024, 5:41 PM IST

ಬಾಲಿವುಡ್​​ ನಟಿ ಜಾಹ್ನವಿ ಕಪೂರ್ ಹಾಗೂ ಶಿಖರ್ ಪಹಾರಿಯಾ ಜೋಡಿಯ ಡೇಟಿಂಗ್ ವದಂತಿ ನಿನ್ನೆ, ಮೊನ್ನೆಯದ್ದಲ್ಲ. ಆದರೆ ಈ ಜೋಡಿ ಈವರೆಗೂ ಯಾವುದೇ ರೀತಿಯ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ದೇವಾಲಯ ಭೇಟಿಯಿಂದ ಹಿಡಿದು ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಜೋಡಿಯ ಪ್ರೀವೆಡ್ಡಿಂಗ್​ ಸೆಲೆಬ್ರೇಶನ್​ಗೆ ಹಾಜರಾಗುವವರೆಗೆ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ತಂದೆ ಬೋನಿ ಕಪೂರ್ ನಿರ್ಮಾಣದ 'ಮೈದಾನ್‌' ಸ್ಪೆಷಲ್​​ ಸ್ಕ್ರೀನಿಂಗ್‌ನಲ್ಲಿ ಕಾಣಿಸಿಕೊಂಡರು. 'ಶಿಕು' ಎಂದು ಬರೆದಿರುವ ನೆಕ್ಲೇಸ್ ಧರಿಸುವ ಮೂಲಕ ತಮ್ಮ ಪ್ರೇಮ ಸಂಬಂಧದ ಬಗ್ಗೆ ಸುಳಿವು ನೀಡಿದ್ದಾರೆ. ಶಿಖರ್ ಪಹಾರಿಯಾ ಅವರನ್ನು ಜಾಹ್ನವಿ 'ಶಿಕು' ಎಂದು ಕರೆಯುತ್ತಾರೆ.

ಕಳೆದ ರಾತ್ರಿ ಜಾಹ್ನವಿ ಕಪೂರ್ 'ಮೈದಾನ್' ಸ್ಕ್ರೀನಿಂಗ್‌ಗೆ ಹಾಜರಾಗಿದ್ದರು. ಇದು ತಂದೆ ಬೋನಿ ಕಪೂರ್ ನಿರ್ಮಾಣದ ಚಿತ್ರ. ಆಫ್-ವೈಟ್ ಔಟ್​ಫಿಟ್, ಹೀಲ್ಸ್‌ನಲ್ಲಿ ಬೆರಗುಗೊಳಿಸುವ ನೋಟ ಬೀರಿದರು. 'ಶಿಕು' ಎಂಬ ಹೆಸರಿನ ಚೈನ್​ ಧರಿಸಿ ಬಂದು ಎಲ್ಲರ ಗಮನ ಸೆಳೆದರು. ಕಾಫಿ ವಿತ್ ಕರಣ್‌ ಶೋನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ರಭಸದಲ್ಲಿ 'ಶಿಕು' ಎಂದು ಉಲ್ಲೇಖಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಜನಪ್ರಿಯ ಕಾಫಿ ವಿತ್ ಕರಣ್‌ ಶೋನಲ್ಲಿ ಕಾಣಿಸಿಕೊಂಡಿದ್ದ ವೇಳೆ, ನಿರೂಪಕ ಕರಣ್ ಜೋಹರ್ ಅವರು ಜಾಹ್ನವಿಯ ಡೇಟಿಂಗ್ ವಿಚಾರವನ್ನಿಡಿದು ತಮಾಷೆ ಮಾಡಿದ್ದರು. ಜಾಹ್ನವಿ, "ನಾವು 'ನಾದಾನ್ ಪರಿಂದೇ ಘರ್ ಆಜಾ' ಹಾಡನ್ನು ಕೇಳಿದ್ದೇವೆ. ಶಿಖರ್ ಹಲವು ಬಾಗಿ ನನಗಾಗಿ ಆ ಹಾಡನ್ನು ಹಾಡಿದ್ದಾರೆ. ನಾನದನ್ನು ಇಷ್ಟಪಟ್ಟೆ" ಎಂದು ತಿಳಿಸಿದ್ದರು.

ಕರಣ್, ನಿಮ್ಮ ಸ್ಪೀಡ್ ಡಯಲ್‌ ಲಿಸ್ಟ್​ನಲ್ಲಿರೋ (ಹೆಚ್ಚು ಕರೆ ಮಾಡುವವರು) ಮೂವರನ್ನು ಹೆಸರಿಸಲು ನಟಿ ಬಳಿ ಕೇಳಿದ್ದರು. ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸಿದ ಜಾಹ್ನವಿ, 'ಪಾಪಾ, ಖುಶು ಮತ್ತು ಶಿಖು' (ಶಿಖರ್ ಪಹಾರಿಯಾ) ಹೆಸರನ್ನು ಪ್ರಸ್ತಾಪಿಸಿದರು. ಇದೇ ವೇಳೆ ನಾವು ಒಳ್ಳೆಯ ಸ್ನೇಹಿತರೆಂಬುದನ್ನು ಸ್ಪಷ್ಟಪಡಿಸಿದರು.

ಇದನ್ನೂ ಓದಿ:'ರಾಮಾಯಣ'ಕ್ಕೆ ರಾಕಿಂಗ್ ಸ್ಟಾರ್ ಯಶ್ ಸಹ​ ನಿರ್ಮಾಪಕ? - Yash

ಇತ್ತೀಚಿನ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಕೂಡ ಶಿಖರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಹಾರಿಯಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನಿರ್ಮಾಪಕರು, ನಮ್ಮ ಜೀವನದಲ್ಲಿ ಅವರು ಅಚಲ. ನಮ್ಮ ಕುಟುಂಬಕ್ಕೆ ಸಾಥ್ ನೀಡುತ್ತಾರೆ ಎಂಬುದನ್ನು ಒತ್ತಿ ಹೇಳಿದರು.

ಇದನ್ನೂ ಓದಿ:ಝೈದ್ ಖಾನ್ 2ನೇ ಸಿನಿಮಾ ಅನೌನ್ಸ್: 'ಕಲ್ಟ್'ನಲ್ಲಿ 'ಬನಾರಸ್' ಹುಡುಗ - Cult Movie

ಅಮಿತ್ ಶರ್ಮಾ ನಿರ್ದೇಶನದ 'ಮೈದಾನ್​' ಚಿತ್ರ ನಾಳೆ ತೆರೆಗಪ್ಪಳಿಸಲಿದೆ. ಭಾರತೀಯ ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಜೀವನಾಧಾರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ಅಜಯ್ ದೇವ್​ಗನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಮಣಿ, ಗಜ್​​ರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Last Updated : Apr 10, 2024, 5:41 PM IST

ABOUT THE AUTHOR

...view details