ಅಮೃತಾ ಅಯ್ಯಂಗಾರ್, ಸ್ಯಾಂಡಲ್ವುಡ್ನ ಬಹುಬೇಡಿಕೆ ನಟಿಯರಲ್ಲೋರ್ವರು. ಕಳೆದ ದಿನ ತಮ್ಮ 28ನೇ ವರ್ಷದ ಜನ್ಮದಿನ ಆಚರಿಸಿಕೊಂಡ ನಟಿ, ಫೋಟೋಗಳನ್ನು ಹಂಚಿಕೊಂಡು ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸುಂದರ ಫೋಟೋಗಳ ಜೊತೆಗೆ ಬರ್ತ್ಡೇ ಸೆಲೆಬ್ರೇಶನ್ನಂತೆ ತೋರುವ ಫೋಟೋವನ್ನೂ ಹಂಚಿಕೊಂಡ ಅಮೃತಾ ಅಯ್ಯಂಗಾರ್, ವಂಡರ್ಫುಲ್ ವಿಶಸ್ಗೆ ಧನ್ಯವಾದಗಳು. ಯೂ ಗಾಯ್ಸ್ ಮೇಡ್ ಮೈ ಡೇ ಎಂದು ಬರೆದುಕೊಂಡಿದ್ದಾರೆ. ಕಳೆದ ದಿನ ತಮ್ಮ ಸ್ಟೋರಿ ವಿಭಾಗದಲ್ಲಿ ಹಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದರು.
28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಅವುಗಳಲ್ಲಿ ಕೆಲವನ್ನು ನಟಿ ತಮ್ಮ ಸ್ಟೋರಿ ಸೆಕ್ಷನ್ನಲ್ಲಿ ರೀಶೇರ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದರು. ಸದ್ಯ ಹಂಚಿಕೊಂಡಿರುವ ಹೊಸ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.