ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಬುಧವಾರ ತಡರಾತ್ರಿ ಮಗಳು ಆರಾಧ್ಯ ಜೊತೆ ಮುಂಬೈ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡರು. ನಟಿ ತನ್ನ ಬಲಗೈಗೆ ಆರ್ಮ್ ಸ್ಲಿಂಗ್ ಧರಿಸಿದ್ದು, ಪಾಪರಾಜಿಗಳು ಶೇರ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಐಶ್ವರ್ಯಾಗೆ ಏನಾಯ್ತು? ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.
ಐಶ್ವರ್ಯಾ ಎಂದಿನಂತೆ ಆಕರ್ಷಕ ಏರ್‌ಪೋರ್ಟ್ ಔಟ್ಫಿಟ್ ಧರಿಸಿದ್ದರು. ಬ್ಲ್ಯಾಕ್ ಪ್ಯಾಂಟ್, ಬ್ಲ್ಯೂ ಓವರ್ ಕೋಟ್‌ನಲ್ಲಿ ಕಂಗೊಳಿಸಿದರು. ಆರಾಧ್ಯ ಬಿಳಿ ಸ್ವೆಟ್‌ಶರ್ಟ್ ಮತ್ತು ಬ್ಲ್ಯಾಕ್ ಪ್ಯಾಂಟ್ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಐಶ್ವರ್ಯಾ, ಪಾಪರಾಜಿಗಳತ್ತ ಕೈ ಬೀಸಿದ್ದು, ಆರಾಧ್ಯ ಕೂಡ ಬಾಯ್ ಮಾಡಿ ಗಮನ ಸೆಳೆದರು.
ಏರ್‌ಪೋರ್ಟ್ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ನಟಿಯ ಕೈ ಗಾಯ ನೋಡಿದ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಉಳಿದಂತೆ, ತಾಯಿ ಮಗಳ ಸೌಂದರ್ಯ, ಸರಳತೆಯ ಗುಣಗಾನ ನಡೆಯುತ್ತಿದೆ. ಪಾಪರಾಜಿಗಳು ವಿಮಾನ ನಿಲ್ದಾಣದಿಂದ ಶೇರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.
ಐಶ್ವರ್ಯಾ ರೈ ಬಚ್ಚನ್ ಮೊದಲ ಬಾರಿ 2002ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದರು. 1994ರ ಈ ವಿಶ್ವ ಸುಂದರಿ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಸೀರೆ ಧರಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು. ಕಳೆದ ವರ್ಷ, ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಗೌನ್ ಧರಿಸಿ ಅದ್ಭುತ ನಗು ಬೀರಿದ್ದರು. ಪ್ರತೀ ಬಾರಿಯೂ ಅತ್ಯದ್ಭುತ ಸೌಂದರ್ಯದ ಮೂಲಕ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಾಗಾಗಿ ಈ ಬಾರಿ ನಟಿಯ ನೋಟ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲ.