ಮೈಸೂರು: ಎರಡು ವರ್ಷಗಳ ಕಾಯುವಿಕೆಯ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಮ್ಯಾಕ್ಸ್ ಡಿ.25 ರಂದು ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಕೂಡ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿರುವ ಹಿನ್ನೆಲೆ ಇಂದು ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಿರ್ಮಾಪಕ ಮತ್ತು ವಿತರಕರಾದ ಕಾರ್ತಿಕ್ ಗೌಡ ಅವರು ಕೂಡ ಕಿಚ್ಚನಿಗೆ ಸಾಥ್ ನೀಡಿದರು.
ಅಭಿಮಾನಿಗಳಿಂದ ಕಿಕ್ಕಿರಿದ ಚಾಮುಂಡಿ ಬೆಟ್ಟ:ನೆಚ್ಚಿನ ನಟ ಸುದೀಪ್ ಭೇಟಿ ಹಿನ್ನೆಲೆ ಅಭಿಮಾನಿಗಳ ದಂಡೇ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದಿತ್ತು. ಸುದೀಪ್ರನ್ನು ನೋಡಿದ ಫ್ಯಾನ್, ಜೈಕಾರ, ಶಿಳ್ಳೆ ಹಾಕಿ ಖುಷಿಪಟ್ಟರು. ಅಭಿಮಾನಿಗಳನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸವಾಯಿತು.
'ಮ್ಯಾಕ್ಸ್' ಸಕ್ಸಸ್: ಚಾಮುಂಡೇಶ್ವರಿ ದರ್ಶನ ಪಡೆದ ಕಿಚ್ಚ ಸುದೀಪ್ (ETV Bharat) ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು:ಚಾಮುಂಡಿ ದೇವಿಗೆಪೂಜೆ ಮುಗಿಸಿ ದೇವಾಲಯದಿಂದ ಸುದೀಪ್ ಹೊರಬಂದೊಡನೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ನಂತರ ಕಾರಿನೊಳಕ್ಕೆ ತೆರಳಿದ ಸುದೀಪ್ ಅವರು, ಅಭಿಮಾನಿಗಳತ್ತ ಕೈ ಬೀಸಿದರು.
ಸುದೀಪ್ಗೆ ಅಭಿನಂದನೆ ಸಲ್ಲಿಸಿದ ಬಿಗ್ಬಾಸ್ ತಂಡ:ಶನಿವಾರದ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಆಗಮನಕ್ಕೂ ಮೊದಲು ಮನೆಯೊಳಗಿನ ಕಂಟೆಸ್ಟೆಂಟ್ಗಳಿಗೆ ಮ್ಯಾಕ್ಸ್ ಯಶಸ್ಸಿನ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಮ್ಯಾಕ್ಸ್ ಸಕ್ಸಸ್ ಹಿನ್ನೆಲೆ ಮನೆಮಂದಿಗೆಲ್ಲಾ ಬಿಗ್ಬಾಸ್ ತಂಡ ಕೇಕ್ ಕಳುಹಿಸಿತ್ತು. ಕೇಕ್ ಕಟ್ ಮಾಡಿದ ಸ್ಪರ್ಧಿಗಳು ಸಿನಿಮಾದಲ್ಲಿ ಅಭಿನಯಿಸಿರುವ ಮಂಜು ಅವರಿಗೆ ಮೊದಲು ಕೇಕ್ ತಿನ್ನಿಸಿ, ಸಂಭ್ರಮಿಸಿದರು. ಬಳಿಕ ಸುದೀಪ್ ಕಾರ್ಯಕ್ರಮ ಆರಂಭಿಸುವಾಗ ಮಾತನಾಡಿದ ಬಿಗ್ಬಾಸ್, ಸುದೀಪ್ ಅವರಿಗೆ ಅಭಿನಂದಿಸಿದರು.
ಡಿಸೆಂಬರ್ 25ರಂದು ಬಿಡುಗಡೆಗೊಂಡ ಮ್ಯಾಕ್ಸ್ಗೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕವಾಗಿದೆ.
ಮ್ಯಾಕ್ಸ್ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿದೇಶಿಸಿದ್ದು, ಕಿಚ್ಚ ಕ್ರಿಯೇಶನ್ಸ್, ವಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಬಿಗ್ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ.
ಇದನ್ನೂ ಓದಿ:'ಮ್ಯಾಕ್ಸ್' 3 ದಿನಗಳ ಕಲೆಕ್ಷನ್ ಹೇಗಿದೆ? 'ಲೇಟಾದ್ರೂ ಲೇಟೆಸ್ಟಾಗಿ ಬರ್ತೀವಿ' ಎಂದಿದ್ದ ಕಿಚ್ಚನಿಗೆ ಪ್ರಶಂಸೆಯ ಸುರಿಮಳೆ