ಕರ್ನಾಟಕ

karnataka

ETV Bharat / entertainment

ತೆಲುಗು ರಾಜ್ಯಗಳಲ್ಲಿ ಪ್ರವಾಹ: ಸಿಎಂ ಭೇಟಿಯಾಗಿ 50ಲಕ್ಷ ರೂ. ದೇಣಿಗೆ ನೀಡಿದ ಸೂಪರ್​ಸ್ಟಾರ್ ಮಹೇಶ್​ ಬಾಬು - Mahesh Babu Philanthropic Activity - MAHESH BABU PHILANTHROPIC ACTIVITY

ಸೌತ್ ಸೂಪರ್​ ಸ್ಟಾರ್ ಮಹೇಶ್​ ಬಾಬು ಅವರು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಈ ಹಣ ಸಹಾಯವಾಗಲಿದೆ.

Mahesh Babu met CM Revanth Reddy
ಸಿಎಂ ರೇವಂತ್​ ರೆಡ್ಡಿ ಭೇಟಿಯಾದ ಮಹೇಶ್ ಬಾಬು (Photo: IANS)

By ETV Bharat Karnataka Team

Published : Sep 23, 2024, 7:50 PM IST

ಹೈದರಾಬಾದ್: ಇತ್ತೀಚೆಗೆ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ವಿನಾಶವನ್ನು ಸೃಷ್ಟಿಸಿರುವ ಪ್ರವಾಹ ಸಂತ್ರಸ್ತರ ನೆರವಿಗೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಆಗಮಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜುಬ್ಲಿ ಹಿಲ್ಸ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಟ ನೇರವಾಗಿ ಸಿಎಂ ರೇವಂತ್ ರೆಡ್ಡಿ ಅವರಿಗೆ ಚೆಕ್ ಹಸ್ತಾಂತರಿಸಿದರು.

ಇದಲ್ಲದೇ ಮಹೇಶ್ ಬಾಬು ಅವರ ಮಲ್ಟಿಪ್ಲೆಕ್ಸ್ ಸರಣಿ 'ಏಷ್ಯನ್ ಮಹೇಶ್ ಬಾಬು ಸಿನಿಮಾಸ್' (ಎಎಂಬಿ) ಸಹ ಪ್ರವಾಹ ಸಂತ್ರಸ್ತರಿಗೆ ಬೆಂಬಲ ನೀಡೋ ಸಲುವಾಗಿ ಹೆಚ್ಚುವರಿ 10 ಲಕ್ಷ ರೂ. ದೇಣಿಗೆ ನೀಡಿದೆ. ಇಂದಿನ ಸಿಎಂ ಜೊತೆಗಿನ ಮಹತ್ವದ ಸಭೆಯಲ್ಲಿ, ಮಹೇಶ್ ಬಾಬು ಜೊತೆ ಪತ್ನಿ ನಮ್ರತಾ ಶಿರೋಡ್ಕರ್ ಸಹ ಉಪಸ್ಥಿತರಿದ್ದರು. ನಟಿ ನಮ್ರತಾ ಪತಿಯೊಂದಿಗೆ ವಿವಿಧ ಲೋಕೋಪಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹೆಸರಾಂತ ನಟನ ಮಾನವೀಯ ಕಾರ್ಯಕ್ಕೆ ಮನತುಂಬಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮಹೇಶ್ ಬಾಬು ಅವರ ನಿರಂತರ ಪರೋಪಕಾರಿ ಪ್ರಯತ್ನಗಳನ್ನು ಪ್ರಶಂಸಿಸಿದರು. ನಿರಂತರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ನಿಂತಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು.

ಇನ್ನು ಮಹೇಶ್ ಬಾಬು ಅವರು ತಮ್ಮ ಹೊಸ ಹೇರ್​​ಸ್ಟೈಲ್​ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮುಂದಿನ ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗಿದೆ. ನಟನ ಮುಂಬರುವ ಬಹುನಿರೀಕ್ಷಿತ ಚಿತ್ರಕ್ಕೆ ತಾತ್ಕಾಲಿಕವಾಗಿ ಎಸ್​ಎಸ್​ಎಂಬಿ 29 ಎಂದು ಹೆಸರಿಡಲಾಗಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಯೋಜನೆಗೆ ಭರದ ತಯಾರಿ ನಡೆಯುತ್ತಿದ್ದು, ನಟನ ನಯಾ ಲುಕ್​ ಸಿನಿಪ್ರಿಯರ, ಅಭಿಮಾನಿಗಳ ಕುತೂಹಲ, ನಿರೀಕ್ಷೆ, ಉತ್ಸಾಹವನ್ನು ದುಪ್ಪಟ್ಟುಗೊಳಿಸಿದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಮೂಡಿಬರುವ ಸುಳಿವುಗಳು ಈಗಾಗಲೇ ಸಿಕ್ಕಿದೆ. ಅಷ್ಟಕ್ಕೂ ಆ್ಯಕ್ಷನ್​ ಕಟ್​​ ಹೇಳುತ್ತಿರುವುದು ಬಾಹುಬಲಿ ಖ್ಯಾತಿಯ ರಾಜಮೌಳಿ, ಬಣ್ಣ ಹಚ್ಚುತ್ತಿರುವುದು ಸೂಪರ್ ಡೂಪರ್ ಹೀರೋ ಮಹೇಶ್​ ಬಾಬು ಅವರಲ್ಲವೇ..

ಇದನ್ನೂ ಓದಿ:156 ಸಿನಿಮಾ - 537ಸಾಂಗ್ಸ್ - 24,000 ಸ್ಟೆಪ್ಸ್: ಗಿನ್ನೆಸ್​ ವಿಶ್ವದಾಖಲೆ ಗೌರವಕ್ಕೆ ಪಾತ್ರರಾದ ಚಿರಂಜೀವಿ: ರಿಷಬ್​ ಶೆಟ್ಟಿ ಅಭಿನಂದನೆ - Chiranjeevi Guinness World Record

ಆಗಸ್ಟ್‌ನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ ಎಂಬ ವದಂತಿಗಳಿತ್ತು. ಅದಾಗ್ಯೂ ಯೋಜನೆ ಇನ್ನೂ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಪಾತ್ರವರ್ಗ ಮತ್ತು ಶೂಟಿಗ್​ ಶೆಡ್ಯೂಲ್​​ ಕುರಿತು ಹೆಚ್ಚಿನ ಪ್ರಕಟಣೆಗಳನ್ನು ನಿರೀಕ್ಷಿಸಲಾಗಿದೆ. ಶೀಘ್ರದಲ್ಲೇ ಮಾಹಿತಿ ಸಿಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್​; ಭಾರತವನ್ನು ಪ್ರತಿನಿಧಿಸಲಿದೆ ''ಲಾಪತಾ ಲೇಡೀಸ್'' - Laapataa Ladies to Oscars 2025

ಭೀಕರ ಪ್ರವಾಹಕ್ಕೆ ನಲುಗಿರುವ ತೆಲುಗು ರಾಜ್ಯಗಳಿಗೆ ಈಗಾಗಲೇ ಟಾಲಿವುಡ್​ ಸೂಪ್​ ಸ್ಟಾರ್​ಗಳು ನೆರವಾಗಿದ್ದಾರೆ.

ABOUT THE AUTHOR

...view details