ದೀಪಾವಳಿ ಹಬ್ಬದಂದು ಸುಂದರ ಕವಿತೆಯೊಂದಿಗೆ ಆಕರ್ಷಕ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆ ಸುದ್ದಿ ರಿವೀಲ್ ಮಾಡಿದ್ದ ನಟ ಡಾಲಿ ಧನಂಜಯ್ ತಾನು ಪ್ರೀತಿಸಿದ ಹುಡುಗಿ ಡಾ.ಧನ್ಯತಾ ಅವರೊಂದಿಗೆ ಭಾನುವಾರ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡರು.
ತಮ್ಮ ಅಜ್ಜಿಯ ಆಸೆಯಂತೆ ಧನಂಜಯ್ ಅವರ ನಿವಾಸವಿರುವ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ನಡೆಯಿತು. ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಪರಸ್ಪರ ಉಂಗುರ ತೊಡಿಸಿಕೊಂಡರು. ಈ ಸಂದರ್ಭದಲ್ಲಿ ಧನಂಜಯ್ ಹಾಗೂ ಧನ್ಯತಾ ಕುಟುಂಬದವರು ಹಾಗೂ ಊರಿನ ಕೆಲವು ಸ್ನೇಹಿತರು ಭಾಗಿಯಾಗಿದ್ದರು.
ನಟ ಡಾಲಿ ಧನಂಜಯ್- ಡಾ.ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ (ETV Bharat) "ಡಾಲಿ ಅಜ್ಜಿ ಮಲ್ಲಮ್ಮ ಬದುಕಿದ್ದರೆ, ಮೊಮ್ಮಗನ ಮದುವೆ ನೋಡಿ ತುಂಬಾ ಖುಷಿ ಪಡುತ್ತಿದ್ದರು" ಎಂದು ಡಾಲಿ ಧನಂಜಯ್ ಆಪ್ತರೊಬ್ಬರು ತಿಳಿಸಿದರು.
ಫೆಬ್ರವರಿ 16ರಂದು ಮೈಸೂರಿನಲ್ಲಿ ಮದುವೆ: ನಿನ್ನೆ ಲಗ್ನಪತ್ರಿಕೆ ಬರೆಸುವ ಶಾಸ್ತ್ರವೂ ನಡೆದಿದೆ. 2025ರ ಫೆಬ್ರವರಿ 16ರಂದು ಮದುವೆ ಸಮಾರಂಭ ನಡೆಯಲಿದೆ.
ಡಾಲಿ ಧನಂಜಯ್- ಡಾ.ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ (ETV Bharat) ಡಾಲಿ ಮತ್ತು ಧನ್ಯತಾ ಅನೇಕ ವರ್ಷಗಳಿಂದ ಪರಿಚಯದಲ್ಲಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಇಬ್ಬರೂ ಹಸೆಮಣೆಯೇರಲು ಅಣಿಯಾಗುತ್ತಿದ್ದಾರೆ. ಚಿತ್ರದುರ್ಗದ ಧನ್ಯತಾ ಓದಿದ್ದು ಮೈಸೂರಿನಲ್ಲಿ. ಅರಸಿಕೆರೆ ನಿವಾಸಿಯಾಗಿರುವ ನಟ ಧನಂಜಯ್ ಕೂಡಾ ಮೈಸೂರಿನಲ್ಲಿಯೇ ಶಿಕ್ಷಣ ಪಡೆದಿದ್ದರು. ಹೀಗಾಗಿ, ಮೈಸೂರು ನಗರಿ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳವಾಗಿದೆ.
ನಟ ಡಾಲಿ ಧನಂಜಯ್- ಡಾ.ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ (ETV Bharat) ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬ್ಯೂಷನ್ ಗ್ರೌಂಡ್ನಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲು ಉಭಯ ಕುಟುಂಬಗಳು ತೀರ್ಮಾನಿಸಿವೆ.
ಇದನ್ನೂ ಓದಿ:ದೀಪಾವಳಿಗೆ ಗುಡ್ ನ್ಯೂಸ್ ಕೊಟ್ಟ ಡಾಲಿ: ಕೈಹಿಡಿಯೋ ಬಾಳಸಂಗಾತಿ ಪರಿಚಯಿಸಿದ ಧನಂಜಯ್