ಕರ್ನಾಟಕ

karnataka

ETV Bharat / entertainment

ಆಕ್ಷನ್​​​ ಪ್ರಿನ್ಸ್​ ಧ್ರುವ ಸರ್ಜಾರಿಂದ 'ಭುವನಂ ಗಗನಂ' ಚಿತ್ರ ಟೀಸರ್ ಅನಾವರಣ - Bhuvanam Gaganam movie Teaser

ನಟ ಸಲಾರ್​​​​​ ಪ್ರಮೋದ್​​​​​ ಹಾಗೂ ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬರ್​​​​​​​ ನಟನೆಯ ಭುವನಂ ಗಗನಂ ಚಿತ್ರದ ಟೀಸರ್​ನ್ನು ಆಕ್ಷನ್​​​ ಪ್ರಿನ್ಸ್​ ಧ್ರುವ ಸರ್ಜಾ ಅನಾವರಣ ಮಾಡಿದರು.

'ಭುವನಂ ಗಗನಂ' ಚಿತ್ರ ಟೀಸರ್ ಅನಾವರಣ
'ಭುವನಂ ಗಗನಂ' ಚಿತ್ರ ಟೀಸರ್ ಅನಾವರಣ

By ETV Bharat Karnataka Team

Published : Mar 18, 2024, 1:45 PM IST

ಸ್ಯಾಂಡಲ್​​ವುಡ್​​​​​​​ ಅಂಗಳದಲ್ಲಿ ಇಬ್ಬರು ಪ್ರತಿಭಾನ್ವಿತ ನಟರಾದ ಸಲಾರ್​​​​​ ಪ್ರಮೋದ್​​​​​ ಹಾಗೂ ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬರ್​​​​​​​ ನಟನೆಯ ಬಹುನಿರೀಕ್ಷಿತ ಸಿನಿಮಾ 'ಭುವನಂ ಗಗನಂ'. ಬಹುತೇಕ ಚಿತ್ರೀಕರಣ ಮುಗಿಸಿರೋ ಭುವನಂ ಗಗನಂ ಚಿತ್ರದ ಟೀಸರ್​ನ್ನು ಆ್ಯಕ್ಷನ್​​​ ಪ್ರಿನ್ಸ್​ ಧ್ರುವ ಸರ್ಜಾ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ.ರಾಜಕುಮಾರ ಇಂಡೋರ್​ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್​, ನಿರ್ದೇಶಕ ಸಿಂಪಲ್​ ಸುನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟೀಸರ್​ ರಿಲೀಸ್ ಬಳಿಕ ಧ್ರುವ ಸರ್ಜಾ ಮಾತನಾಡಿ, 'ಚಿತ್ರದ ಟೈಟಲ್​​ ಕೇಳಿದ ತಕ್ಷಣ ನನಗೆ ನೆನಪಾಗಿದ್ದು ವಂಶಿ ಚಿತ್ರದ ಭುವನಂ ಗಗನಂ ಸಾಂಗ್. ನಾನು ಇವತ್ತು ಇಲ್ಲಿಗೆ ಬರಲು ಮುಖ್ಯ ಕಾರಣ ಈ ಚಿತ್ರದ ಟೆಕ್ನಿಷಿಯನ್ಸ್. ನಮ್ಮ ಅಣ್ಣ ಹಾಗೂ ಸುದೀಪ್ ಸರ್ ನಟಿಸಿದ ವರದನಾಯಕ ಸಿನಿಮಾದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಗಿರೀಶ್ ಮೂಲಿಮನಿ ಅವರು ಈ ಚಿತ್ರದ ನಿರ್ದೇಶಕ. ಈ ಸಿನಿಮಾದ ಟ್ರೇಲರ್​ ನೋಡಿದರೇ ಟೇಕಿಂಗ್​ ಚೆನ್ನಾಗಿದೆ. ಈ ಚಿತ್ರದ ಡಿಒಪಿ ಉದಯ್​ ಜೊತೆ ಬಹದ್ದೂರು, ಭರ್ಜರಿ ಸಿನಿಮಾ ಮಾಡಿದ್ದೇವೆ. ಮ್ಯೂಸಿಕ್ ಡೈರೆಕ್ಟರ್ ಜೊತೆಯೂ ಕೆಲಸ ಮಾಡಿದ್ದೇವೆ. ಈ ಸಿನಿಮಾ ಸೂಪರ್ ಹಿಟ್ ಆಗುತ್ತದೆ'ಎಂದು ಶುಭ ಹಾರೈಸಿದರು.

ನಟ ಪ್ರಮೋದ್​ ಮಾತನಾಡಿ, ಭುವನಂ ಗಗನಂ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ನಾನು ಇದುವರೆಗೆ ಲವ್ ಸ್ಟೋರಿ ಮಾಡಿರಲಿಲ್ಲ. ಗಿರೀಶ್ ಸರ್ ಕಥೆ ಹೇಳಿದಾಗ ಖುಷಿಯಾಯ್ತು. ಈ ತರಹದ ಸಿನಿಮಾ ಮಾಡಿದರೆ ತುಂಬಾ ಕುಟುಂಬಗಳಿಗೆ ಅದರಲ್ಲೂ ಹೆಣ್ಮಕ್ಕಳಿಗೆ ರೀಚ್​ ಆಗುತ್ತದೆ. ಗಿರೀಶ್ ಸರ್​ ಶೂಟ್ ಮಾಡಿದಾಗ ಯಾಕೆ ಇಷ್ಟು ಇವರು ನಿಧಾನವಿದ್ದಾರೆ ಎಂದು ಗಾಬರಿಯಾಗಿತ್ತು. ಡಬ್ಬಿಂಗ್ ಶುರುವಾಗಿದೆ. ಸಿನಿಮಾ ನೋಡುತ್ತಿದ್ದೇವೆ. ಈಗ ಅವರು ಯಾಕೆ ನಿಧಾನ ಶೂಟ್ ಮಾಡಿದ್ದಾರೆ ಅನ್ನುವುದು ಗೊತ್ತಾಗಿದೆ. ಪ್ರತಿಯೊಬ್ಬ ಕಲಾವಿದನ ನಟನೆ ಅವರು ಅಂದುಕೊಂಡಂತೆ ಬರಲು ತಡವಾಗಿದೆ ಎಂದು ಅರ್ಥವಾಯ್ತು. ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ. ಮುನೇಗೌಡ ಅವರು ತುಂಬಾ ಫ್ಯಾಷನೇಟೆಡ್ ನಿರ್ಮಾಪರು ಎಂದರು.

ನಿರ್ಮಾಪಕ ಎಂ ಮುನೇಗೌಡ

ನಿರ್ದೇಶಕ ಗಿರೀಶ್ ಮಾತನಾಡಿ, ಭುವನಂ ಗಗನಂ ಟೀಸರ್ ಲಾಂಚ್ ಮಾಡಲು ಕಾರಣ ನಿರ್ಮಾಪಕರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬಕ್ಕೆ ಏನಾದರೂ ಗಿಫ್ಟ್ ಕೊಡಬೇಕೆಂದು ನಿರ್ಧರಿಸಿ ಟೀಸರ್ ಲಾಂಚ್ ಮಾಡಿದ್ದೇವೆ. ಇದು ಜಸ್ಟ್ ಟೀಸರ್, ಮುಂದೆ ಸಾಂಗ್ ಇದೆ, ಟ್ರೇಲರ್ ಇದೆ. ಸಿನಿಮಾ ಚೆನ್ನಾಗಿದೆ. ಅದರಲ್ಲೂ ಯೂತ್ಸ್​​ಗೆ ಕನೆಕ್ಟ್ ಆಗುತ್ತದೆ. ಫ್ಯಾಮಿಲಿ ಎಂಟರ್​ಟೈನರ್​ ಕಥೆ ಇದೆ. ಸಿನಿಮಾದ ಪ್ರತಿ ಹಂತದಲ್ಲಿಯೂ ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್​ನಲ್ಲಿ ನಡೆಯುವ ಕಥೆಯಾಗಿದೆ. ಪ್ರಮೋದ್​ಗೆ ಜೋಡಿಯಾಗಿ ಲವ್​ ಮಾಕ್ಟೇಲ್​ ಖ್ಯಾತಿಯ ರೆಚೆಲ್​ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸುತ್ತಿದ್ದಾರೆ. ಅಚ್ಯುತ್​ ಕುಮಾರ್​, ಶರತ್ ಲೋಹಿತಾಶ್ವ, ಪ್ರಕಾಶ್​ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್​ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಮಾನ್ಸೂನ್​ಗೆ ಭುವನಂ ಗಗನಂ ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ:ಕಿರಣ್ ​ರಾಜ್ ಅಭಿನಯದ​ 'ಭರ್ಜರಿ ಗಂಡು' ಟ್ರೇಲರ್ ಔಟ್​​

ABOUT THE AUTHOR

...view details