ಶಿಮ್ಲಾ, ಹಿಮಾಚಲಪ್ರದೇಶ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರ 12th Fail ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. 2023 ರಲ್ಲಿ ಬಿಡುಗಡೆಯಾದ ಈ ಚಿತ್ರ ಇಲ್ಲಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಕಳೆದ ತಿಂಗಳು ನಡೆದ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲೂ ಈ ಚಿತ್ರ ಮೇಲುಗೈ ಸಾಧಿಸಿತ್ತು. 12th Fail ಜನಪ್ರಿಯ ಚಿತ್ರ, ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಸಂಕಲನ ಸೇರಿದಂತೆ 5 ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಗೊತ್ತಿರುವ ಸಂಗತಿ. ಆದರೆ ವಿಶೇಷವೆಂದರೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ವಿಕ್ರಾಂತ್ ಮಾಸ್ಸಿ ಅತ್ಯುತ್ತಮ ನಟ ವಿಮರ್ಶಕರ ಪ್ರಶಸ್ತಿ ಸ್ವೀಕರಿಸಿದರು. ಆದರೆ ವಿಕ್ರಾಂತ್ ಮಾಸ್ಸಿಗೆ ಹಿಮಾಚಲ ಪ್ರದೇಶದೊಂದಿಗೆ ಒಂದಲ್ಲ ಎರಡು ವಿಶೇಷ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ?..
ಶಿಮ್ಲಾದೊಂದಿಗೆ ನಂಟು: ವಿಕ್ರಾಂತ್ ಮಾಸ್ಸಿ ಅಭಿನಯದ '12th ಫೇಲ್'ನ ದೊಡ್ಡ ಯಶಸ್ಸು ಕಂಡ ಚಿತ್ರ. ಮಹಾರಾಷ್ಟ್ರದಲ್ಲಿ ಜನಿಸಿದ ವಿಕ್ರಾಂತ್ ಮಾಸ್ಸೆ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಕುಟುಂಬದ ಮೂಲ ಹಿಮಾಚಲ ಪ್ರದೇಶ ಎಂದು ಕೆಲವೇ ಜನರಿಗೆ ತಿಳಿದಿದೆ. ಕೆಲ ದಿನಗಳ ಹಿಂದೆ ಅನ್‌ಫಿಲ್ಟರ್ಡ್ ಬೈ ಸಮ್ದೀಶ್‌ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ವಿಕ್ರಾಂತ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್ ಮಾಸ್ಸೆ ಅವರ ತಾತ ಶಿಮ್ಲಾದ ನಿವಾಸಿಯಾಗಿದ್ದರು ಮತ್ತು ಅವರು ಅನುಭವಿ ನಟರಾಗಿದ್ದರು, ಅವರು ಶಿಮ್ಲಾದಲ್ಲಿ ರಂಗಭೂಮಿಯಲ್ಲಿ ನಟಿಸುತ್ತಿದ್ದರೆಂದು ವಿಕ್ರಾಂತ್ ಹೇಳಿಕೊಂಡಿದ್ದಾರೆ.
ನಮ್ಮ ತಾತಾ ರಂಗಭೂಮಿ ಕಲಾವಿದ: ನನ್ನ ತಾತ ಕ್ಯಾರೆಕ್ಟರ್ ಆರ್ಟಿಸ್ಟ್. ಡಾ. ರಾಜೇಂದ್ರ ಪ್ರಸಾದ್ ಅವರಿಂದ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದರು. ಅವರು ಶಿಮ್ಲಾದ ಗೈಟಿ ಥಿಯೇಟರ್‌ನಲ್ಲಿ 20 ರಿಂದ 22 ವರ್ಷಗಳ ಕಾಲ ನಟಿಸಿದ್ದಾರೆ, ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಅವರು ಜನರಲ್ ಮ್ಯಾನೇಜರ್ ಶಿಮ್ಲಾದ ಗ್ರ್ಯಾಂಡ್ ಹೋಟೆಲ್‌ನಲ್ಲಿ ಅವರು ಮ್ಯಾನೇಜರ್ ಆಗಿದ್ದರು ಮತ್ತು ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವಿಕ್ರಾಂತ್ ಹೇಳಿದ್ದಾರೆ.
ನಾನು ನಮ್ಮ ಅಜ್ಜನನ್ನು ಇದುವರೆಗೆ ಭೇಟಿಯಾಗಿಲ್ಲ: ನನ್ನ ಅಜ್ಜನ ಹೆಸರು ರವಿಕಾಂತ್ ಮಾಸ್ಸೆ. ಆದ್ರೆ ನಾನು ಎಂದಿಗೂ ನನ್ನ ಅಜ್ಜನನ್ನು ಭೇಟಿಯಾಗಲಿಲ್ಲ ಎಂದು ಸಂದರ್ಶನದಲ್ಲಿ ವಿಕ್ರಾಂತ್ ಮಾಸ್ಸೆ ಮೊದಲ ಬಾರಿಗೆ ತನ್ನ ಹಿಮಾಚಲದ ನಂಟು ಮತ್ತು ತನ್ನ ಅಜ್ಜನ ನಟನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಜ್ಜ ಹಲವು ಹಿಂದಿ ಚಿತ್ರಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಮಾಡಿದ್ದಾರೆ. ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 'ನಯಾ ದೌರ್' ಚಿತ್ರದಲ್ಲಿ ನಟಿಸಿದ್ದಾರೆ. ದಿಲೀಪ್ ಕುಮಾರ್ ಜೊತೆ ಗೈಡ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಬಿಆರ್ ಚೋಪ್ರಾ ಸೇರಿ ಹಲವರ ಜೊತೆ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ವಿಕ್ರಾಂತ್ ತನ್ನ ಅಜ್ಜನ ನಟನೆಯನ್ನು ಮೆಲುಕು ಹಾಕಿದರು.
ಮುಂಬೈಗೆ ಶಿಫ್ಟ್ ಆದ ನಮ್ಮ ಕುಟುಂಬ: ರಂಗಭೂಮಿಯಿಂದ ಚಲನಚಿತ್ರದಲ್ಲಿ ನಟಿಸಲು ನಮ್ಮ ಅಜ್ಜ ಶಿಮ್ಲಾದಿಂದ ಮುಂಬೈಗೆ ತೆರಳಬೇಕಾಯಿತು. ನನ್ನ ಅಜ್ಜಿ ನರ್ಸ್, ಮುಂಬೈನ ಭಾಭಾ ಆಸ್ಪತ್ರೆಯಲ್ಲಿದ್ದರು. ಅದಕ್ಕೂ ಮೊದಲು ಅವರು ಶಿಮ್ಲಾದಲ್ಲಿದ್ದರು. ಶಿಮ್ಲಾದಲ್ಲಿ ಅವರು ಹಿಮದಲ್ಲಿ ಇನ್ಸುಲಿನ್ ಚುಚ್ಚುಮದ್ದನ್ನು ನೀಡುತ್ತಿದ್ದರು. ಇದಕ್ಕಾಗಿ ಅವರು ನಾಲ್ಕು ಕಿ.ಮೀ.ವರೆಗೆ ನಡೆಯುತ್ತಿದ್ದರು ಎಂದು ವಿಕ್ರಾಂತ್ ಹೇಳಿದರು.