ಹೈದರಾಬಾದ್: ಭಾರತೀಯ ಯುವ ಜನತೆಯಲ್ಲಿ ಉದ್ಯೋಗ ಕೌಶಲ್ಯ ಹೆಚ್ಚುತ್ತಿದ್ದು, 2024ರ ಹೊತ್ತಿಗೆ ಜಾಗತಿಕವಾಗಿ ಈ ಕೌಶಲ್ಯಗಳೊಂದಿಗೆ ಶೇ 54.81ರಷ್ಟು ಉದ್ಯೋಗಗಳಿಸುವಲ್ಲಿ ಅರ್ಹರಾಗುತ್ತಾರೆ ಎಂದು ಭಾರತೀಯ ಕೌಶಲ್ಯ ವರದಿ 2025 ವರದಿ ಮಾಡಿದೆ. ಈ ಅಂಕಿ ಸಂಖ್ಯೆಯು 2021ಕ್ಕೆ ಹೋಲಿಕೆ ಮಾಡಿದಾಗ ಗಮನಾರ್ಹ ಏರಿಕೆ ಕಂಡಿದೆ, 2021ರಲ್ಲಿ ಈ ಪ್ರಮಾಣ ಶೇ 9ರಷ್ಟಿತು. ಈ ವೇಳೆ ಕೌಶಲ್ಯಯುತ ಉದ್ಯೋಗ ಪಡೆಯುವ ದರ 45.90ರಷ್ಟಿತ್ತು. ಇದೀಗ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿದ ಹಿನ್ನೆಲೆಯಲ್ಲಿ ಈ ಸಂಖ್ಯೆ ಶೇ 17ಕ್ಕೆ ಏರಿಕೆ ಕಂಡಿದೆ.
ಡೆಬೊಕ್ಸ್ ಸಹಯೋಗದಲ್ಲಿ ಎಐಸಿಟಿಇ ಮತ್ತು ಸಿಐಐ ಈ ಸಮೀಕ್ಷೆ ನಡೆಸಿದ್ದು, ದೇಶದೆಲ್ಲೆಡೆ ಒಟ್ಟು 6.5 ಲಕ್ಷ ಅಭ್ಯರ್ಥಿಗಳು ಗ್ಲೋಬಲ್ ಎಂಪ್ಲೊಯಿಬಿಲಿಟಿ ಟೆಸ್ಟ್ (ಜಾಗತಿಕ ಉದ್ಯೋಗ ಪರೀಕ್ಷೆ- ಜಿಇಟಿ)ಗೆ ಒಳಗಾದರು. ಇದರಲ್ಲಿ ಅರ್ಧದಷ್ಟು ಮಂದಿ ಶೇ 60ರಷ್ಟು ಸ್ಕೋರ್ ಮಾಡುವ ಮೂಲಕ ಕೆಲಸದ ಸಿದ್ಧತೆ ಪ್ರತಿ ಬಿಂಬಿಸಿದ್ದಾರೆ.
ಎಂಬಿಎ ಮತ್ತು ಬಿಟೆಕ್ ವಿದ್ಯಾರ್ಥಿಗಳು ಮುಂದು: ಬಹುತೇಕ ಉದ್ಯೋಗ ಅರ್ಹ ಪದವೀಧರರಲ್ಲಿ ಶೇ 78ರಷ್ಟು ಉದ್ಯೋಗ ಪಡೆಯವಲ್ಲಿ ಅರ್ಹರಾಗಿದ್ದಾರೆ. ಇವರ ಬೆನ್ನಲ್ಲೇ ಶೇ 71.50ರಷ್ಟು ಬಿಟೆಕ್ ಪದವೀಧರರು ಅರ್ಹರಾಗಿದ್ದಾರೆ. ಪ್ರಾಯೋಗಿಕ ಕೌಶಲ್ಯ ಮತ್ತು ಉದ್ಯಮ ಸಂಬಂಧಿ ತರಬೇತಿಗಳಿಗೆ ಒತ್ತು ನೀಡುವಿಕೆಯು ಯುವಜನತೆ ಉದ್ಯೋಗ ಪಡಯುವಿಕೆಯಲ್ಲಿ ಪ್ರಮುಖ ಅಂಶವಾಗಿದೆ.
ಕರ್ನಾಟಕ ಮುಂಚೂಣಿ: ರಾಜ್ಯಗಳ ಉದ್ಯೋಗವಕಾಶದ ವಿಚಾರದಲ್ಲಿ ಆಂಧ್ರ ಪ್ರದೇಶದ ಯುವಕರು ಶೇ 72ರಷ್ಟು ಅಂಕಗಳಿಸುವ ಮೂಲಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ತೆಲಂಗಾಣ ಶೇ 63ರಷ್ಟು ಸ್ಕೋರ್ ಮೂಲಕ 8ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಶೇ 84ರಷ್ಟು ಹೊಂದಿದ್ದರೆ, ದೆಹಲಿ ಶೇ 78ರಷ್ಟು ಸ್ಕೋರ್ ಹೊಂದಿದೆ. ಇನ್ನು ಕರ್ನಾಟಕ ಶೇ 75ರಷ್ಟು ಸ್ಕೋರ್ಗಳಿಸಿದೆ.
ಇಂಜಿನಿಯರಿಂಗ್ ಪ್ರಾವೀಣ್ಯತೆಯಲ್ಲಿ ಆಂಧ್ರ ಮುಂದು: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ಕೋರ್ನಲ್ಲಿ ಆಂಧ್ರಪ್ರದೇಶವೂ ಶೇ 84.82ರಷ್ಟಿದೆ.