ಬೆಂಗಳೂರು:ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳ ಭರ್ತಿಗೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಪಿಎಂ ಅಭಿಮ್ ಯೋಜನೆಯಡಿ ನಮ್ಮ ಕ್ಲಿನಿಕ್‌ಗಳಿಗೆ ನೇಮಕಾತಿ ನಡೆಯಲಿದ್ದು, ಇವು ಗುತ್ತಿಗೆ ಆಧಾರದ ಹುದ್ದೆಗಳಾಗಿವೆ.
ಹುದ್ದೆಗಳ ವಿವರ: ಒಟ್ಟು ಹುದ್ದೆಗಳ ಸಂಖ್ಯೆ 6. ಉಡುಪಿಯಲ್ಲಿ 3, ಕುಂದಾಪುರದಲ್ಲಿ 2 ಮತ್ತು ಕಾರ್ಕಳದಲ್ಲಿ 1 ಹುದ್ದೆಗಳಿವೆ.
ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, ಅರೆ ವೈದ್ಯಕೀಯ ಮಂಡಳಿಯ ಡಿಪ್ಲೊಮಾ ಪದವಿ ಹೊಂದಿರಬೇಕು.
ವೇತನ:ಆಯ್ಕೆಯಾದ ಅಭ್ಯರ್ಥಿಗಳವಿದ್ಯಾರ್ಹತೆಗೆ ಅನುಗುಣವಾಗಿ ಮಾಸಿಕ 14,044ರಿಂದ 15,397 ರೂ ವೇತನ.
ಆಯ್ಕೆ: ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಆಯ್ಕೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ನಿಗದಿತ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ:ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್‌ಹೆಚ್‌ಎಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ.
ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಆಗಸ್ಟ್ 3. ಹೆಚ್ಚಿನ ಮಾಹಿತಿಗೆ udupi.nic.inಇಲ್ಲಿಗೆ ಭೇಟಿ ನೀಡಿ. 0820-2985429 ಈ ಕಚೇರಿ ದೂರವಾಣಿ ಸಂಖ್ಯೆಗೂ ಸಂಪರ್ಕಿಸಬಹುದು.
ಅಧಿಸೂಚನೆ (ಉಡುಪಿ ಜಿಲ್ಲಾಡಳಿತ ವೆಬ್ತಾಣ) ವಿಜಯಪುರದಲ್ಲಿ ನರ್ಸ್ ಹುದ್ದೆ ನೇಮಕಾತಿ:ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನರ್ಸ್ ಮತ್ತು ಕಿರಿಯ ಪ್ರಯೋಗಾಲಯ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ಟಾಫ್ ನರ್ಸ್- 55 ಮತ್ತು ಕಿರಿಯ ಪ್ರಯೋಗಾಲಯ ತಂತ್ರಜ್ಞರು- 15 ಹುದ್ದೆಗಳಿವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನರ್ಸಿಂಗ್ನಲ್ಲಿ ಡಿಪ್ಲೊಮಾ ಅಥವಾ ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರಬೇಕು. ಕಿರಿಯ ಪ್ರಯೋಗಾಲಯ ತಂತ್ರಜ್ಞರ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿಯೊಂದಿಗೆ ಲ್ಯಾಬ್ ಟೆಕ್ನಿಷಿಯನ್ನಲ್ಲಿ ಡಿಪ್ಲೊಮಾ ಪದವಿ ಹೊಂದಿರಬೇಕು.
ವಿಜಯಪುರದ ಜಿಲ್ಲಾಡಳಿತ ವೆಬ್ತಾಣದಲ್ಲಿ ಲಭ್ಯವಿರುವ ಅಧಿಕೃತ ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾ ಭವನ ವಿಜಯಪುರ.
ಈ ಕುರಿತು ಹೆಚ್ಚಿನ ಮಾಹಿತಿಗೆ vijayapura.nic.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ:ಬೆಂಗಳೂರು: ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ