ಕರ್ನಾಟಕ

karnataka

ETV Bharat / education-and-career

ಯಾವುದೇ ಶ್ಯೂರಿಟಿ ಇಲ್ಲದೆ ಬಡ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೂ ಶಿಕ್ಷಣ ಸಾಲ: ಅರ್ಜಿ ಸಲ್ಲಿಸುವುದು ಹೇಗೆ? - PM VIDYALAXMI SCHEME LOAN APPLY

ಶಿಕ್ಷಣ ಸಾಲಕ್ಕಾಗಿ ಬ್ಯಾಂಕ್‌ಗಳನ್ನು ಸುತ್ತುವ ಅಗತ್ಯವಿಲ್ಲ - ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿ, ನಿಯಮಗಳನ್ನು ಪಾಲಿಸಿ.

pm-vidyalaxmi-scheme-benefits scheme-for-students-to-avail-easy-loans-for-higher-education
ಬಡ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೂ ಶಿಕ್ಷಣ ಸಾಲ: ಯಾವುದೇ ಶ್ಯೂರಿಟಿ ಇಲ್ಲದೆ, ಪಡೆಯುವುದು ಹೇಗೆ? (ANI)

By ETV Bharat Karnataka Team

Published : Nov 9, 2024, 10:14 PM IST

PM Vidyalaxmi Scheme Benefits :ಉನ್ನತ ಶಿಕ್ಷಣವನ್ನು ಮುಂದುವರಿಸುವ ಬಯಕೆ ಏನೋ ಇರುತ್ತದೆ. ಆದರೆ ಅನೇಕ ಉತ್ಕೃಷ್ಟ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆ ಕಾಡುತ್ತದೆ. ಇದರಿಂದ ಅಧ್ಯಯನದಿಂದ ಹಲವರು ದೂರ ಉಳಿಯುತ್ತಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ವಿದ್ಯಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸಚಿವ ಸಂಪುಟ ಬುಧವಾರ ಈ ಯೋಜನೆಗೆ ಅನುಮೋದನೆ ನೀಡಿದೆ. ಇದು ಯಾವುದೇ ಮೇಲಾಧಾರವಿಲ್ಲದೇ ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ. ಈವರೆಗೆ 4.5 ಲಕ್ಷದವರೆಗೆ ಬಡ್ಡಿ ರಹಿತ ಶಿಕ್ಷಣ ಸಾಲ ನೀಡಲಾಗುತ್ತಿತ್ತು. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಸಬ್ಸಿಡಿ ಬಡ್ಡಿಯೊಂದಿಗೆ 10 ಲಕ್ಷ ರೂಗಳ ವರೆಗೂ ಸಾಲ ನೀಡಲು ನಿರ್ಧರಿಸಿದೆ. ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ತೊಂದರೆಯಿಲ್ಲದೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾದಂತಾಗಿದೆ.

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಪ್ರಯೋಜನಗಳು

  • ಈ ವಿದ್ಯಾಲಕ್ಷ್ಮಿ ಯೋಜನೆಯಡಿ, ವಿದ್ಯಾರ್ಥಿಗಳಿಗೆ 'ಯಾವುದೇ ಮೇಲಾಧಾರ ಅಥವಾ ಗ್ಯಾರಂಟಿ ಇಲ್ಲದೇ' ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ.
  • ಈ ಯೋಜನೆಯಡಿ ಪ್ರತಿ ವರ್ಷ ಗರಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲಾಗುತ್ತದೆ.
  • ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು 10 ಲಕ್ಷದವರೆಗೆ ವಿದ್ಯಾರ್ಥಿ ಸಾಲ ಪಡೆಯಬಹುದು.
  • ವಾಸ್ತವವಾಗಿ, 4.5 ಲಕ್ಷದವರೆಗೆ ಸಂಪೂರ್ಣ ಬಡ್ಡಿ ಸಹಾಯ ಧನವನ್ನು ಒದಗಿಸಲಾಗುತ್ತದೆ. ಅದರ ನಂತರ, ಸಾಲದ ಒಟ್ಟು ಮೊತ್ತವನ್ನು ಲೆಕ್ಕಿಸದೇ, ಅದರ ಮೇಲೆ ವಿಧಿಸಲಾದ ಬಡ್ಡಿಯನ್ನು 3 ಪ್ರತಿಶತದವರೆಗೆ ಸಬ್ಸಿಡಿ ಒದಗಿಸಲಾಗುತ್ತದೆ. ಹೆಣ್ಣು ಮಕ್ಕಳಿಗೂ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.
  • ಉತ್ತಮ ಪ್ರತಿಭೆಯಿದ್ದರೂ ಆರ್ಥಿಕ ತೊಂದರೆಯಿಂದ ಉನ್ನತ ಶಿಕ್ಷಣದಿಂದ ದೂರ ಉಳಿದಿರುವ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.
  • ಉನ್ನತ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಟಾಪ್-100 ಶ್ರೇಣಿಯ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ವಿದ್ಯಾಲಕ್ಷ್ಮಿ ಯೋಜನೆಯಡಿ ಸಾಲವನ್ನು ನೀಡಲಾಗುತ್ತದೆ. ಅಲ್ಲದೇ, ರಾಜ್ಯಗಳು/UTಗಳಲ್ಲಿ ಅಗ್ರ-200 ಶ್ರೇಯಾಂಕದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಸಹ ಈ ಯೋಜನೆಯಡಿ ಶಿಕ್ಷಣ ಸಾಲವನ್ನು ಪಡೆಯಬಹುದು.

ಯಾವ ಯಾವ ಕೋರ್ಸ್​ಗಳಿಗೆ ಸಾಲ ಸೌಲಭ್ಯ:

ಈ ಯೋಜನೆಯಡಿಯಲ್ಲಿ ಇಂಟರ್, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಮೆಡಿಸಿನ್, ಪಿಜಿ ಡಿಪ್ಲೋಮಾ, ಸಿಎ, ವೃತ್ತಿಪರ ಕೋರ್ಸ್‌ಗಳು, ಐಐಎಂ, ಮ್ಯಾನೇಜ್‌ಮೆಂಟ್, ಐಐಟಿ, ವೃತ್ತಿಪರ ಶಿಕ್ಷಣ ಕೋರ್ಸ್‌ಗಳು ಇತ್ಯಾದಿ ಕ್ಷೇತ್ರಗಳಲ್ಲಿ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ನೀಡಲಾಗುತ್ತದೆ.

  • ಅರ್ಹ ವಿದ್ಯಾರ್ಥಿಗಳು PM ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ಈ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.
  • ಅರ್ಹ ವಿದ್ಯಾರ್ಥಿಗಳಿಗೆ ಕೇವಲ 15 ದಿನಗಳಲ್ಲಿ ಶಿಕ್ಷಣ ನೀಡಲಾಗುವುದು.
  • ಡೀಫಾಲ್ಟ್ ಆಗಿದ್ದಲ್ಲಿ ಶೇಕಡಾ 75 ರವರೆಗಿನ ಕ್ರೆಡಿಟ್ ಗ್ಯಾರಂಟಿ ಸಹ ಒದಗಿಸಲಾಗುತ್ತದೆ.

ವಿದ್ಯಾಲಕ್ಷ್ಮಿ ಸಾಲಗಳಿಗೆ ಅರ್ಜಿ ಹೀಗೆ ಸಲ್ಲಿಸಿ!

  • ಮೊದಲು ನೀವು ವಿದ್ಯಾ ಲಕ್ಷ್ಮಿ ಪೋರ್ಟಲ್ ಗೆ ವಿಸಿಟ್​ ಮಾಡಿ.
  • ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ ಮತ್ತು ನೋಂದಾಯಿಸಿ.
  • ಶಿಕ್ಷಣ ಸಾಲದ ಫಾರ್ಮ್ ಓಪನ್​ ಮಾಡಿ, ಅದರಲ್ಲಿ ನಿಮ್ಮ ವೈಯಕ್ತಿಕ, ಶೈಕ್ಷಣಿಕ ಅರ್ಹತೆ ಮತ್ತು ಶ್ರೇಣಿಯ ವಿವರಗಳನ್ನು ನಮೂದಿಸಿ.
  • ನಂತರದಲ್ಲಿ ಲಭ್ಯವಿರುವ ಸಾಲ ಯೋಜನೆಗಳು ಮತ್ತು ಅವುಗಳನ್ನು ನೀಡುವ ಬ್ಯಾಂಕ್‌ಗಳ ವಿವರಗಳ ಬಗ್ಗೆ ತಿಳಿದುಕೊಳ್ಳಿ
  • ನಿಮಗಾಗಿ ಸೂಕ್ತವಾದ ಸಾಲ ಯೋಜನೆ ಮತ್ತು ಬ್ಯಾಂಕ್ ಆಯ್ಕೆಮಾಡಿ. ಒಂದು ಬಾರಿಗೆ ಗರಿಷ್ಠ 3 ಬ್ಯಾಂಕ್‌ಗಳನ್ನು ಆಯ್ಕೆ ಮಾಡಬಹುದು.
  • ಬ್ಯಾಂಕ್‌ಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ 15 ದಿನಗಳಲ್ಲಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತವೆ.
  • ನಿಮ್ಮ ಅರ್ಜಿಯನ್ನು ತಿರಸ್ಕರಿಸಿದರೆ, ಕಾರಣಗಳನ್ನು ತಿಳಿಸುವ ಮೇಲ್ ಅನ್ನು ನಿಮಗೆ ಕಳುಹಿಸಲಾಗುತ್ತದೆ.

ನಿಮ್ಮ ಗಮನದಲ್ಲಿರಲಿ: ಈ ಸಾಲಗಳ ಮೇಲಿನ ಬಡ್ಡಿ ದರಗಳು ಆಯಾ ಬ್ಯಾಂಕ್‌ಗಳನ್ನು ಅವಲಂಬಿಸಿ ಬದಲಾಗುತ್ತವೆ. ಆದರೆ, ನೀವು ಈ ಸಾಲಗಳನ್ನು EMI ಮೋಡ್‌ನಲ್ಲಿ ಮರುಪಾವತಿ ಮಾಡುತ್ತೀರಾ? ಅಥವಾ ಮೊರಾಟೋರಿಯಂ ವಿಧಾನದ ಮೂಲಕ ಉದ್ಯೋಗದ ನಂತರ ಪಾವತಿಸುವುದೇ? ಎಂಬುದನ್ನು ಮೊದಲೇ ತಿಳಿಸಬೇಕಾಗುತ್ತದೆ.

ಇವುಗಳನ್ನು ಓದಿ:

ABOUT THE AUTHOR

...view details