ನವದೆಹಲಿ:ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ)ದಲ್ಲಿ ಪಿಎಚ್ಡಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇಗ್ನೋದಲ್ಲಿ ಈ ಬಾರಿ ಪಿಎಚ್ಡಿ ದಾಖಲಾತಿಗೆ ನೆಟ್ನ (NET) ಶೇ.70ರಷ್ಟು ಮತ್ತು ಶೇ.30ರಷ್ಟು ಸಂದರ್ಶನದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸಲಾಗುತ್ತಿದೆ. 25ಕ್ಕೂ ಹೆಚ್ಚು ವಿಷಯಗಳಲ್ಲಿ ಒಟ್ಟು 349 ಸೀಟ್ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದೆಹಲಿ ವಿಶ್ವವಿದ್ಯಾಲಯದ ದಾಖಲಾತಿಗಳ ಶುಲ್ಕ ವಿಭಿನ್ನವಾಗಿರಲಿದೆ. ಆದರೆ ಖಾಸಗಿ ವಿ.ವಿ.ಗೆ ಹೋಲಿಸಿದರೆ ಕಡಿಮೆ ಇರಲಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಕೋರ್ಸಿನ ಆಧಾರದ ಮೇಲೆ ಶುಲ್ಕ ವ್ಯತ್ಯಾಸ ಇರುತ್ತದೆ.
ಕೋರ್ಸ್ ಮತ್ತು ಸೀಟು ವಿವರ:
- ಮನೋವಿಜ್ಞಾನ - 21
- ಮಾನವಶಾಸ್ತ್ರ - 5
- ಇತಿಹಾಸ - 10
- ಸಮಾಜಶಾಸ್ತ್ರ - 6
- ಜೀವರಸಾಯನಶಾಸ್ತ್ರ - 10
- ರಸಾಯನಶಾಸ್ತ್ರ - 4
- ಭೂಗೋಳ - 15
- ಭೂವಿಜ್ಞಾನ - 9
- ಜೀವ ವಿಜ್ಞಾನ - 20
- ಭೌತಶಾಸ್ತ್ರ - 4
- ಸ್ಟಟಿಸ್ಟಿಕ್ಸ್ - 8
- ಗಣಿತ - 4
- ಹಿಂದಿ - 5
- ಸಂಸ್ಕೃತ - 5
- ಡೆವೆಲಪ್ಮೆಂಟ್ ಸ್ಟಡೀಸ್ - 7
- ಕಂಪ್ಯೂಟರ್ ಸೈನ್ಸ್ - 15
- ಇಂಟರ್ ಡಿಸಿಪ್ಲಿನರಿ ಮತ್ತು ಟ್ರಾನ್ಸ್ ಡಿಸಿಪ್ಲಿನರಿ - 16
- ಪರಿಸರ ಅಧ್ಯಯನಗಳು - 20
- ಸೋಷಿಯಲ್ ವರ್ಕ್- 12
- ನ್ಯೂಟ್ರಿಷಿಯನ್ ಸೈನ್ಸ್- 6
- ಚೈಲ್ಡ್ ಡೆವಲ್ಮೆಂಟ್- 23
- ಗ್ರಾಮೀಣಾಭಿವೃದ್ಧಿ - 3
- ಹೋಮ್ ಸೈನ್ಸ್– 10
- ನಿರ್ವಹಣೆ - 10
- ವಾಣಿಜ್ಯ - 11
- ವೊಕೇಷನಲ್ ಸ್ಟಡೀಸ್- 10
- ಶಿಕ್ಷಣ - 26
- ಫೈನ್ ಆರ್ಟ್ - ೨
- ರಂಗಭೂಮಿ ಕಲೆಗಳು - 8
- ಸಂಗೀತ - 6
- ನೃತ್ಯ - 5
- ಜೆಂಡರ್ ಆ್ಯಂಡ್ ಡೆವಲಪ್‌ಮೆಂಟ್ ಸ್ಟಡೀಸ್- 8
- ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ - 6
- ದೂರ ಶಿಕ್ಷಣ - 19
ಇದನ್ನೂ ಓದಿ: ಕರ್ನಾಟಕ ಲೋಕಾಯುಕ್ತದಲ್ಲಿದೆ ಟೈಪಿಸ್ಟ್ ಕಂ ಕ್ಲರ್ಕ್ ಹುದ್ದೆ; ಪಿಯುಸಿ ಆದವರಿಗೆ ಅವಕಾಶ