ಬೆಂಗಳೂರು:ಕಳೆದ ತಿಂಗಳು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಪ್ರಕಟಿಸಿತ್ತು. ಇದೀಗ ಈ ಹುದ್ದೆಗಳ ವರ್ಗೀಕರಣ, ವಿದ್ಯಾರ್ಹತೆ, ವೇತನ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ವಿವರಗಳನ್ನೊಳಗೊಂಡ ವಿವರವಾದ ಅಧಿಸೂಚನೆ ಪ್ರಕಟಿಸಿದೆ.
ಹುದ್ದೆಗಳ ವಿವರ: ಜಿಟಿಟಿಸಿಯಲ್ಲಿ ಒಟ್ಟು 74 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅದರ ವಿವರಗಳು ಇಂತಿದೆ.
- ಲೆಕ್ಚರರ್ (ಎಂಜಿನಿಯರಿಂಗ್) - 18
- ಇಂಜಿನಿಯರ್ - 2
- ಅಧಿಕಾರಿ ದರ್ಜೆ ಗ್ರೇಡ್ 2 - 2
- ಫೋರ್‌ಮನ್ ಗ್ರೇಡ್ 2 - 4
- ಇನ್ಸ್ಪೆಕ್ಟರ್ ಗ್ರೇಡ್ -1 - 4
- ತಂತ್ರಜ್ಞ ಗ್ರೇಡ್-II
- ಟೆಕ್ನಿಷಿಯನ್ ಗ್ರೇಡ್ -1 - 7
- ಟೆಕ್ನಿಷಿಯನ್ ಗ್ರೇಡ್ -2 - 7
- ಇನ್ಸ್ಪೆಕ್ಟರ್ ಗ್ರೇಡ್ 2 - 5
- ಟೆಕ್ನಿಷಿಯನ್ ಗ್ರೇಡ್ 3 - 15
- ಟೆಕ್ನಿಷಿಯನ್ ಗ್ರೇಡ್ 4- 4
- ಅಸಿಸ್ಟೆಂಟ್ ಗ್ರೇಡ್ - 2
ವಿದ್ಯಾರ್ಹತೆ:ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 27 ವರ್ಷ. ಪ.ಜಾ, ಪ.ಪಂ ಮತ್ತು ಪ್ರವರ್ಗ1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.