ಬೆಂಗಳೂರು: ಕರ್ನಾಟಕ ಅಂಚೆ ಇಲಾಖೆಯಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ, ಬೆಂಗಳೂರು ಜಿಪಿಒ, ಬೆಳಗಾವಿ ವಿಭಾಗ, ಕೊಡಗು ವಿಭಾಗ, ಮೈಸೂರು ವಿಭಾಗ, ಶಿವಮೊಗ್ಗ, ಉಡುಪಿಯಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಇವು ಕ್ರೀಡಾ ಕೇಡರ್ ಹುದ್ದೆಗಳಾಗಿವೆ.
ಹುದ್ದೆಗಳು: ಕರ್ನಾಟಕ ಪೋಸ್ಟಲ್ ಸರ್ಕಲ್ನಲ್ಲಿ ಒಟ್ಟು 22 ಹುದ್ದೆಗಳು ಖಾಲಿ ಇವೆ.
- ಪೋಸ್ಟಲ್ ಅಸಿಸ್ಟೆಂಟ್ - 6
- ಸೊರ್ಟಿಂಗ್ ಅಸಿಸ್ಟೆಂಟ್ - 3
- ಪೋಸ್ಟ್ಮ್ಯಾನ್ - 13
ಅಭ್ಯರ್ಥಿಗಳು ಅಂಚೆ ಇಲಾಖೆ ನಿಯಮಗಳಿಗೆ ಅನುಸಾರವಾದ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರಬೇಕಿದೆ.
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ:ಅಸಿಸ್ಟೆಂಟ್ ಡೈರೆಕ್ಟರ್ (ಆರ್ ಅಂಡ್ ಇ), ಆಫೀಸ್ ಆಫ್ ದಿ ಚೀಫ್, ಪೋಸ್ಟ್ಮಾಸ್ಟರ್ ಜನರಲ್, ಕರ್ನಾಟಕ ಸರ್ಕಲ್, ಬೆಂಗಳೂರು- 560001.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್ 3 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indiapost.gov.in ಅಥವಾ karnatakapost.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಐಐಟಿ ಧಾರವಾಡದಲ್ಲಿವೆ ಎರಡು ಹುದ್ದೆ:ಧಾರವಾಡದ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಜೆಆರ್ಎಫ್ ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್ 3 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಜೆಆರ್ಎಫ್ ಹುದ್ದೆಗೆ ಬಿ.ಟೆಕ್, ಎಂಟೆಕ್ ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್ 3 ಹುದ್ದೆಗಳಿಗೆ ವಿಜ್ಞಾನ ವಿಷಯದಲ್ಲಿ ಡಾಕ್ಟರಲ್ ಪದವಿ ಅಥವಾ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಜೆಆರ್ಎಫ್ ಹುದ್ದೆಗೆ 35 ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್ 3 - 45 ವರ್ಷ. ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಶುಲ್ಕ ವಿನಾಯಿತಿ ಮಾಡಲಾಗಿದೆ. ಈ ಹುದ್ದೆಗೆ ಸಂದರ್ಶನದ ಮೂಲಕ ಅಯ್ಕೆ ಮಾಡಲಾಗುವುದು.
ಈ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್ 8 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು iitdh.ac.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಎಸ್ಎಸ್ಸಿ ನೇಮಕಾತಿ: 968 ಜೆಇ ಹುದ್ದೆಗಳಿಗೆ ಅರ್ಜಿ ಆಹ್ವಾನ