ಕರ್ನಾಟಕ

karnataka

ETV Bharat / education-and-career

ಬಿಬಿಎಂಪಿಯಲ್ಲಿ ಕನ್ನಡ ಉಪನ್ಯಾಸಕರ ಹುದ್ದೆ; ಕೆಪಿಎಸ್​ಸಿ ಅಧಿಸೂಚನೆ ಪ್ರಕಟ

ಗ್ರೂಪ್​ ಬಿ ವೃಂದದ ಬ್ಯಾಕ್​ಲಾಗ್​ ಹುದ್ದೆ ಇದಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By ETV Bharat Karnataka Team

Published : 7 hours ago

Kannada Lecturer post in BBMP KPSC Relesed Notification
ಬಿಬಿಎಂಪಿ (ಸಂಗ್ರಹ ಚಿತ್ರ)

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕನ್ನಡ ಉಪನ್ಯಾಸಕರ ಹುದ್ದೆ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಗ್ರೂಪ್​ ಬಿ ವೃಂದದ ಬ್ಯಾಕ್​ಲಾಗ್​ ಹುದ್ದೆ ಇದಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ: ಬಿಬಿಎಂಪಿಯಲ್ಲಿ ಕನ್ನಡ ಉಪನ್ಯಾಸಕರು- ಒಟ್ಟು ಹುದ್ದೆ 3

ವಿದ್ಯಾರ್ಹತೆ: ಅಭ್ಯರ್ಥಿಯು ಅಧಿಕೃತ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ಅಧಿಸೂಚನೆ (ಕೆಪಿಎಸ್​ಸಿ)

ವಯೋಮಿತಿ: ಅಭ್ಯರ್ಥಿಯ ಕನಿಷ್ಠ 18 ಮತ್ತು ಗರಿಷ್ಠ ವಯೋಮಿತಿ 40 ವರ್ಷವಾಗಿದೆ.

ವೇತನ: 43,100- 83,900 ರೂ. ಮಾಸಿಕ

ಅರ್ಜಿ ಸಲ್ಲಿಕೆ: ಅಭ್ಯರ್ಥಿಯು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಿಲ್ಲ. ಈ ಹುದ್ದೆಗಳನ್ನು ಮೆರಿಟ್​ ಆಧಾರದ ಮೇಲೆ ಭರ್ತಿ ಮಾಡಲಾಗುವುದು.

ಈ ಹುದ್ದೆಗೆ ಅಕ್ಟೋಬರ್​ 7ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್​​ 7 ಆಗಿದೆ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಕೆಪಿಎಸ್​ಪಿ ಅಧಿಕೃತ ಜಾಲತಾಣ kpsc.kar.nic.in ಗೆ ಭೇಟಿ ನೀಡಿ.

ಬಿಇಎಲ್​ನಲ್ಲಿ ಅಪ್ರೆಂಟಿಸ್​ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ

ಬೆಂಗಳೂರಿನಲ್ಲಿರುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನಲ್ಲಿ ಅಪ್ರೆಂಟಿಸ್​ಶಿಪ್​ ಟ್ರೈನಿಂಗ್​ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಾಕ್​ ಇನ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಐಟಿಐ ಪದವಿ ಹೊಂದಿರುವ ಗರಿಷ್ಠ 21 ವರ್ಷ ದಾಟಿರದ ಅಭ್ಯರ್ಥಿಗಳು ಹಾಜರಾಗಬಹುದು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಹುದ್ದೆಗೆ ಮಾಸಿಕ 10,333 ರೂ. ಗೌರವ ಧನ ನಿಗದಿಸಲಾಗಿದೆ. ಈ ಹುದ್ದೆಗೆ ಅಕ್ಟೋಬರ್​ 17, 18, 21ರಂದು ಬಿಇಎಲ್​ನ ಸೆಂಟರ್​ ಫಾರ್​ ಲರ್ನಿಂಗ್​ ಅಂಡ್​ ಡೆವೆಲಪ್​ಮೆಂಟ್​, ಜಾಲಹಳ್ಳಿ ಬೆಂಗಳೂರು ಇಲ್ಲಿ ನೇರ ಸಂದರ್ಶನ ನಡೆಯಲಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು bel-india.in ಭೇಟಿ ನೀಡಿ.

ಇದನ್ನೂ ಓದಿ: ಮಂಡ್ಯ ಜಿಲ್ಲಾ ಪಂಚಾಯತ್​ನಲ್ಲಿದೆ ಉದ್ಯೋಗ; ಪದವಿ ಪಾಸಾದವರಿಗೆ ಅವಕಾಶ

ABOUT THE AUTHOR

...view details