ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗದಿಂದ (ಎಸ್ಎಸ್ಸಿ) 968 ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಭಾರತಾದ್ಯಂತ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ:
- ಬಾರ್ಡರ್ ರೋಡ್ಸ್ ಆರ್ಗನೈಸೇಷನ್ - 475 ಹುದ್ದೆಗಳು
- ಬ್ರಹ್ಮಪುತ್ರ ಬೋರ್ಡ್, ಜಲಶಕ್ತಿ ಸಚಿವಾಲಯ -2
- ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ - 338
- ಸೆಂಟ್ರಲ್ ವಾಟರ್ ಕಮಿಷನ್ -132
- ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ - 338
- ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್ - 5
- ಡಿಜಿಕ್ಯೂಎಲ್-ಎನ್ಎವಿಎಎಲ್, ರಕ್ಷಣಾ ಸಚಿವಾಲಯ - 6
- ಫರಕ್ಕ ಬ್ಯಾರೇಜ್ ಪ್ರೋಜೆಕ್ಟ್ , ಜಲಶಕ್ತಿ ಸಚಿವಾಲಯ - 4
- ಎನ್ಟಿಆರ್ಒ - 6
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ ಅಥವಾ ಬಿ.ಟೆಕ್ ಅಥವಾ ಡಿಪ್ಲೊಮಾ ಇಂಜಿನಿಯರಿಂಗ್ ಪದವಿ.
ವಯೋಮಿತಿ: ಕನಿಷ್ಠ ವಯೋಮಿತಿ 18. ಗರಿಷ್ಠ 32. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 5ರಿಂದ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ವೇತನ: ಮಾಸಿಕ 35,400 ರೂ.ನಿಂದ 1,12,400 ರೂಪಾಯಿ.
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ ಆಯ್ಕೆ ನಡೆಯಲಿದೆ. ಇದರಲ್ಲಿ ಎರಡು ಪತ್ರಿಕೆಗಳಿದ್ದು, ಮೊದಲ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಬುದ್ಧಮಟ್ಟ(IQ) ಪರೀಕ್ಷೆ ನಡೆಯಲಿದೆ. ಎರಡನೇ ಪತ್ರಿಕೆ ನಿರ್ದಿಷ್ಟ ಪರೀಕ್ಷೆ. ಅಂತಿಮ ಹಂತದಲ್ಲಿ ಸಂದರ್ಶನ ನಡೆಯಲಿದೆ.
ಮಾರ್ಚ್ 28 ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್ 18. ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ ಏಪ್ರಿಲ್ 19. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.nic.in ಜಾಲತಾಣಕ್ಕೆ ಭೇಟಿ ನೀಡಿ.
ಬಳ್ಳಾರಿಯ ಕೆಐಒಸಿಎಲ್ನಲ್ಲಿ ವಾಕ್ ಇನ್ ಇಂಟರ್ವ್ಯೂ:ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ನಲ್ಲಿ 15 ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ. ಭೂ ವಿಜ್ಞಾನಿ, ಗಣಿ ಸಮೀಕ್ಷಕ ಹುದ್ದೆಗಳ ಭರ್ತಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಏಪ್ರಿಲ್ 5ರಂದು ಬಳ್ಳಾರಿಯಲ್ಲಿ ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.
30 ರಿಂದ 40 ವರ್ಷದ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರ ಒಳಗೊಂಡ ರೆಸ್ಯೂಮ್, ಶೈಕ್ಷಣಿಕ ದಾಖಲಾತಿಯೊಂದಿಗೆ ಈ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಭಾಗಿಯಾಗಬಹುದು. ಕೆಐಒಸಿಎಲ್ ಲಿ. ಸಂಡೂರ್ ಪ್ರೊಜೆಕ್ಟ್ ಆಫೀಸ್, ಲಕ್ಷ್ಮೀಪುರ, ಸಂಡೂರು -583119, ಬಳ್ಳಾರಿ ಜಿಲ್ಲೆ.
ಈ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kioclltd.in ಲತಾಣಕ್ಕೆ ಭೇಟಿ ನೀಡಿ.
ಇದನ್ನೂ ಓದಿ: ಆಗ್ನೇಯ ಮಧ್ಯ ರೈಲ್ವೆಯಲ್ಲಿ 733 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - 733 Apprentice Job Recruitment