ನವದೆಹಲಿ:ಭಾರತದ ಉತ್ಪಾದನಾ ವಲಯದಲ್ಲಿ ಆಗತಾನೇ ಹೊರ ಬಂದ ಪದವೀಧರರ (ಫ್ರೆಶ್ ಗ್ರಾಜುಯೇಟ್) ನೇಮಕಾತಿಯಲ್ಲಿ ಏರಿಕೆ ಕಂಡಿದೆ. ವರ್ಷದ ಮೊದಲಾರ್ಧದಲ್ಲೇ ಶೇ 48ರಷ್ಟು ನೇಮಕಾತಿ ನಡೆಸಲಾಗಿದ್ದು, ಕಳೆದ 2023ರ ಜುಲೈನಿಂದ ಡಿಸೆಂಬರ್ ಅವಧಿಗೆ ಹೋಲಿಕೆ ಮಾಡಿದಾಗ ಶೇ 7ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಟೀಮ್ಲೀಸ್ ಎಡ್ಟೆಕ್ ಪ್ರಕಾರ, ಈ ನೇಮಕಾತಿ ಏರಿಕೆಯು ಬಂಡವಾಳ ಹೂಡಿಕೆಗಳು ಮತ್ತು ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಟೆಕ್ಸ್ಟೈಲ್ಸ್ ಡೊಮೇನ್‌ಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆಯಂತೆ. ಬಂಡವಾಳ ಹರಿವಿನ ಜೊತೆಗೆ ತಾಂತ್ರಿಕ ಪ್ರಗತಿ, ಉತ್ಪಾದನಾ ಪ್ರಕ್ರಿಯೆಗಳನ್ನು ಮರು ರೂಪಿಸುತ್ತಿರುವ ಹಿನ್ನೆಲೆಯ ಕ್ಷೇತ್ರಗಳಲ್ಲಿ ವೇಗದ ಬೆಳವಣಿಗೆ ಕಾಣಿಸುತ್ತಿದೆ. ಜತೆಗೆ ಭಾರತದ ಕೈಗಾರಿಕಾ ಪುನರುತ್ಥಾನಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಯುವ ಪ್ರತಿಭೆಗಳಿಗೆ ಉತ್ತೇಜಕ ಅವಕಾಶವನ್ನು ಒದಗಿಸಲಾಗುತ್ತಿದೆ ಎಂದು ಟೀಮ್ಲೀಸ್ ಎಡ್ಟೆಕ್ನ ಸಂಸ್ಥಾಪಕ ಮತ್ತು ಸಿಇಒ ಶಂತನು ರೂಜ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಭಾರತದ 18 ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಸ್ತರದ 377 ಕಂಪನಿಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ವೇಳೆ ಸಂಸ್ಥೆಗಳಲ್ಲಿ ಉತ್ಪನ್ನ ವಿನ್ಯಾಸಕರು, ಯಾಂತ್ರೀಕೃತಗೊಂಡ ಎಂಜಿನಿಯರ್‌ಗಳು, ಎಂಬೆಡೆಡ್ ಎಂಜಿನಿಯರ್‌ಗಳು, ಮೆಕ್ಯಾನಿಕಲ್ ಎಂಜಿನಿಯರ್‌ಗಳು ಮತ್ತು ಗುಣಮಟ್ಟದ ಭರವಸೆ ಸಹಾಯಕರಿಗೆ ಹೆಚ್ಚಿನ ಬೇಡಿಕೆ ಇರುವುದು ಕಂಡು ಬಂದಿದೆ.