ಬೆಂಗಳೂರು: ಭಾರತೀಯ ಅಂಚೆ ಕಚೇರಿಯಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕದಲ್ಲಿ ಸಂಪೂರ್ಣ ನೇಮಕಾತಿ ನಡೆಯಲಿದ್ದು, ಒಟ್ಟು 27 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:ಚಿಕ್ಕೋಡಿ 1, ಕಲ್ಬುರ್ಗಿ 1, ಹಾವೇರಿ 1, ಕಾರವಾರ 1, ಬೆಂಗಳೂರು 15, ಮಂಡ್ಯ 1, ಮೈಸೂರು 3, ಪುತ್ತೂರು 1, ಶಿವಮೊಗ್ಗ 1, ಉಡುಪಿ 1, ಕೋಲಾರ 1 ಹುದ್ದೆಗಳ ಭರ್ತಿ.
ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ ಹೊಂದಿರಬೇಕು. ಹಗುರ ಮತ್ತು ಭಾರಿ ವಾಹನ ಚಾಲನೆಯಲ್ಲಿ 3 ವರ್ಷ ಅನುಭವ ಹೊಂದಿರಬೇಕು. ಹಗುರ ಮತ್ತು ಭಾರಿ ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 27. ಪ.ಜಾ, ಪ.ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಆಯ್ಕೆ: ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ವೆಬ್ಸೈಟ್ನಲ್ಲಿ ನೀಡಲಾದ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ ಅದನ್ನು ಸ್ಟಾಫ್ ಕಾರ್ ಡ್ರೈವರ್ (ನೇರ ನೇಮಕಾತಿ) ಎಂಬ ಶೀರ್ಷಿಕೆಯೊಂದಿಗೆ ದಿ ಮ್ಯಾನೇಜರ್, ಮೇಲ್ ಮೋಟರ್ ಸರ್ವೀಸ್ ಬೆಂಗಳೂರು- 560001 ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಮೇ 14. ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆindiapost.govt.inಇಲ್ಲಿಗೆ ಭೇಟಿ ನೀಡಿ.
ಎಸ್ಎಸ್‌ಸಿ ಹುದ್ದೆಗಳು:ಸಿಬ್ಬಂದಿ ನೇಮಕಾತಿ ಆಯೋಗದಿಂದ(ಎಸ್ಎಸ್‌ಸಿ) 3,712 ಕಿರಿಯ ದರ್ಜೆ ಕ್ಲರ್ಕ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದು.
ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 18 ಮತ್ತು ಗರಿಷ್ಠ 27 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ವಿಶೇಷಚೇತನ, ಮಹಿಳಾ ಹಾಗೂ ನಿವೃತ್ತ ಸೇವಾಧಾರರಿಗೆ ಅರ್ಜಿ ಶುಲ್ಕ ವಿನಾಯಿತಿ ಮಾಡಲಾಗಿದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ ಶುಲ್ಕ ವಿಧಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನ ಮೇ 7. ಹೆಚ್ಚಿನ ಮಾಹಿತಿಗೆ ssc.gov.inಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ:ಕರ್ನಾಟಕ ವಿಧಾನಸಭೆಯಲ್ಲಿ ಕನ್ನಡ, ಆಂಗ್ಲ ವರದಿಗಾರರ ಹುದ್ದೆಗಳು: ಪದವೀಧರರಿಗೆ ಅವಕಾಶ!