ಹೈದರಾಬಾದ್: ಎಲ್ಲ ರೀತಿಯ ಅರ್ಹತೆಯನ್ನು ನೀವು ಹೊಂದಿದ್ದರೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮಿಷ್ಟವಾದ ಕೆಲಸವನ್ನು ಪಡೆಯುವುದು ಸುಲಭದ ಮಾತಲ್ಲ. ಅದರಲ್ಲಿ ಕೆಲವರು ಕಾಲೇಜ್ ಕ್ಯಾಂಪಸ್ನಲ್ಲಿ ಕೆಲಸ ಗಿಟ್ಟಿಸಿ ಸಂತಸ ಪಟ್ಟರೆ, ಮತ್ತೆ ಕೆಲವರು ಸಮಾಧಾನದಿಂದ ಪ್ರಯತ್ನ ಪಡುತ್ತಾ ಕೆಲಸದ ಅವಕಾಶಕ್ಕೆ ತಯಾರಿ ನಡೆಸುತ್ತಾರೆ. ಈ ಹಂತದಲ್ಲಿ ಉದ್ಯೋಗ ಹುಡುಕುವಾಗ ಅನೇಕ ಬಾರಿ ಏರಿಳಿತದ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಎಲ್ಲ ಅರ್ಹತೆ ಮತ್ತು ಕೌಶಲ್ಯವನ್ನು ಹೊಂದಿದ್ದರೂ ಗೊತ್ತಿಲ್ಲದೇ ಮಾಡುವ ತಪ್ಪಿನಿಂದ ಉದ್ಯೋಗವಂಚಿತರಾಗುತ್ತಾರೆ. ತಜ್ಞರು ಹೇಳುವಂತೆ, ಕೆಲವು ಅಗತ್ಯ ಉಪಯುಕ್ತ ಸಲಹೆಗಳನ್ನು ಹೊಂದಿದ್ದಲ್ಲಿ, ಕೆಲಸ ಪಡೆಯುವುದು ದೊಡ್ಡ ಕಷ್ಟದ ಕಾರ್ಯವಲ್ಲ. ಹಾಗಾದರೆ ಯಾವುದು ಅದು ಎಂಬುದಕ್ಕೆ ಇಲ್ಲಿದೆ ಉತ್ತರ.
ರೆಸ್ಯೂಮ್ ಅಪ್ಡೇಟ್ ಮಾಡಿ: ಯಾವುದೇ ಸಂದರ್ಶನಕ್ಕೆ ರೆಸ್ಯೂಮ್ ಕಳುಹಿಸುವ ಮುನ್ನ, ಅದರಲ್ಲಿ ಮಾರ್ಪಡು ಮಾಡುವುದನ್ನು ಮರೆಯಬಾರದು. ಜೊತೆಗೆ ಬಯಸುವ ಉದ್ಯೋಗಕ್ಕೆ ತಕ್ಕಂತೆ ನಿಮ್ಮ ರೆಸ್ಯೂಮ್ ಇರಬೇಕು ಎಂಬುದು ಮರೆಯಬೇಡಿ. ಉದ್ಯೋಗಕ್ಕೆ ತಕ್ಕಂತೆ ಕೆಲವು ಬದಲಾವಣೆ ಮಾಡಿ, ಕೆಲವು ಅಂಶಗಳನ್ನು ಹೈಲೈಟ್ ಮಾಡಿ. ಇದಕ್ಕಾಗಿ ಕೆಲವು ವಿಶೇಷ ಪದ ಹಾಕಿ, ಮತ್ತೆ ಅನಗತ್ಯ ಅಂಶಗಳನ್ನು ತೆಗೆದು ಹಾಕಿ. ಅನೇಕ ಜನರು ಒಂದೇ ರೆಸ್ಯೂಮ್ ಅನ್ನು ಹಲವು ವರ್ಷಗಳ ಕಾಲ ಬಳಕೆ ಮಾಡುತ್ತಾರೆ. ಈ ರೀತಿಯಾಗಿ ಮಾಡುವುದು ತಪ್ಪು. ಕನಿಷ್ಠ ಆರು ಅಥವಾ ವರ್ಷಕ್ಕೆ ಒಮ್ಮೆ ರೆಸ್ಯೂಮ್ ವಿಷಯ, ವಿನ್ಯಾಸ ಬದಲಾಯಿಸಿ. ಉತ್ತಮ ಉದ್ಯೋಗಕ್ಕೆ ಉತ್ತಮ ಮಾರ್ಗದ ಮೂಲಕ ಅಪ್ಡೇಟ್ ಆಗುವುದನ್ನು ಮರೆಯಬೇಡಿ.
ಸಂಸ್ಥೆಗಳ ಕೆರಿಯರ್ ಪೇಜ್ಗಳಿಗೆ ಚಂದಾದಾರರಾಗಿ: ಉದ್ಯೋಗ ಹುಡುಕುವಾಗ ನಿಮ್ಮ ಕ್ಷೇತ್ರದ ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸ ಖಾಲಿ ಇದ್ಯಾ ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ. ಈ ಹಿನ್ನಲೆ ಅಂತಹ ಸಂಸ್ಥೆಗಳ ಕೆರಿಯರ್ ಪೇಜ್ಗೆ ಸಬ್ಸ್ಕ್ರೈಬ್ ಮಾಡಿ. ಸಂಸ್ಥೆಯ ಕುರಿತು ಆನ್ಲೈನ್ನಲ್ಲಿ ಹುಡುಕುವುದು, ವೆಬ್ಸೈಟ್ ಅನ್ನು ನಿಯಮಿತವಾಗಿ ಪರೀಕ್ಷಿಸುವುದು, ಕೆರಿಯರ್ ಪೇಜ್ಗೆ ಚಂದಾದಾರರಾಗುವುದರಿಂದ ಅಲ್ಲಿನ ಉದ್ಯೋಗವಕಾಶದ ಬಗ್ಗೆ ಶೀಘ್ರ ತಿಳಿಯಬಹುದು. ಇದರಿಂದ ಕೆಲಸವನ್ನು ಹುಡುಕುವ ಕಷ್ಟವೂ ತಪ್ಪಲಿದೆ.