ಕರ್ನಾಟಕ

karnataka

ETV Bharat / education-and-career

ಕಲಬುರಗಿ: ಅತಿಥಿ ಉಪನ್ಯಾಸಕರ ನೇಮಕಾತಿ; ಎಂಎಸ್ಸಿ ಪದವೀಧರರಿಗೆ ಅವಕಾಶ - ESIC GUEST FACULTY RECRUITMENT

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

guest-faculty-recruitment-by-employees-state-insurance-corporation-kalaburagi
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Dec 9, 2024, 4:50 PM IST

ಬೆಂಗಳೂರು: ಕಲಬುರಗಿಯ ನೌಕರರ ರಾಜ್ಯ ವಿಮಾ ನಿಗಮ(ಇಎಸ್​ಐಸಿ)ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಒಟ್ಟು ಹುದ್ದೆಗಳು 4

  • ಭೌತಶಾಸ್ತ್ರ -1
  • ರಸಾಯನಶಾಸ್ತ್ರ- 1
  • ಜೀವಶಾಸ್ತ್ರ- 1
  • ಇಂಗ್ಲಿಷ್​ - 1

ವಿದ್ಯಾರ್ಹತೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಜೀವ ವಿಜ್ಞಾನದಲ್ಲಿ ಎಂಎಸ್ಸಿ ಪದವಿ ಹೊಂದಿರಬೇಕು. ಇಂಗ್ಲಿಷ್​ ವಿಷಯಕ್ಕೆ ಎಂಎ ಇಂಗ್ಲಿಷ್​ ಹಾಗೂ ಬಿಎಡ್​, ಎಂಎಡ್​ ಇಂಗ್ಲಿಷ್​ ಪದವಿ. ಈ ಹುದ್ದೆಗಳಿಗೆ ಗಂಟೆಗೆ 400 ರೂ.ನಂತೆ ಪಾವತಿಸಲಾಗುತ್ತದೆ.

ಆಯ್ಕೆ:ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

ಅರ್ಜಿ ಸಲ್ಲಿಕೆ:ಅಧಿಸೂಚನೆಯ ಜೊತೆಗೆ ನೀಡಿರುವ ಅರ್ಜಿ ಭರ್ತಿ ಮಾಡಿ, ಕೆಳಗಿನ ವಿಳಾಸಕ್ಕೆ ನಿಗದಿತ ಅವಧಿಗೆ ಮುನ್ನ ತಲುಪಿಸಿ.

ಇಎಸ್​ಐಸಿ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆ, ಸೇಡಂ ರೋಡ್​, ಕಲಬುರಗಿ - 585106.

ಅರ್ಜಿ ಸಲ್ಲಿಸಲು ಕಡೇಯ ದಿನ ಡಿಸೆಂಬರ್​ 15. ಹೆಚ್ಚಿನ ಮಾಹಿತಿಗೆ esic.nic.inಇಲ್ಲಿಗೆ ಭೇಟಿ ನೀಡಿ.

ಅಧಿಸೂಚನೆ (ESIC)

ವಿಜಯಪುರ ಕೃಷಿ ವಿ.ವಿಯಲ್ಲಿ ಲೈಬ್ರರಿ ಸಹಾಯಕರ ಹುದ್ದೆ:ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕರ ಹುದ್ದೆಗೆ (ತಾತ್ಕಾಲಿಕ ನೇಮಕಾತಿ) ಅಧಿಸೂಚನೆ ಪ್ರಕಟಿಸಲಾಗಿದೆ. ಎರಡು ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಮಾಸಿಕ 14,000 ರೂ ಗೌರವಧನ ನಿಗದಿಪಡಿಸಲಾಗಿದೆ. ಡಿಸೆಂಬರ್​ 20ರಂದು ಈ ಕೆಳಗಿನ ವಿಳಾಸದಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನ ಕೊಠಡಿ, ಡೀನ್​ (ಕೃಷಿ), ಕೃಷಿ ಮಹಾವಿದ್ಯಾಲಯ, ವಿಜಯಪುರ.

ಹೆಚ್ಚಿನ ಮಾಹಿತಿಗೆ uasd.eduಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: PUC ಆದವರಿಗೆ ನಿಮ್ಹಾನ್ಸ್​ನಲ್ಲಿದೆ ಉದ್ಯೋಗದ ಸುವರ್ಣಾವಕಾಶ: ವಾಕ್​ ಇನ್​ನಲ್ಲಿ ಭಾಗಿಯಾಗಿ

ABOUT THE AUTHOR

...view details