ಕರ್ನಾಟಕ

karnataka

ETV Bharat / education-and-career

RRB ನೇಮಕಾತಿ; 9144 ಟೆಕ್ನಿಕಲ್​ ಹುದ್ದೆಗೆ ಅಧಿಸೂಚನೆ - 9144 Technical Post Recruitment

ರೈಲ್ವೇ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

9144 Technical Post Recruitment by RRB
9144 Technical Post Recruitment by RRB

By ETV Bharat Karnataka Team

Published : Mar 11, 2024, 1:17 PM IST

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಟೆಕ್ನಿಕಲ್​ ಗ್ರೇಡ್​ -1 ಸಿಗ್ನಲ್​ ಮತ್ತು ಟೆಕ್ನಿಕಲ್​ ಗ್ರೇಡ್​ 3 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 9144 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆ ವಿವರ: ಆರ್​ಆರ್​ಬಿಯಿಂದ ದೇಶಾದ್ಯಂತ 9144 ತಾಂತ್ರಿಕ ಹುದ್ದೆಗಳ ಭರ್ತಿಗೆ ಕ್ರಮ

ವಿದ್ಯಾರ್ಹತೆ: ಟೆಕ್ನಿಕಲ್​ ಗ್ರೇಡ್​ 1 ಸಿಗ್ನಲ್​ ಹುದ್ದೆಗೆ ಡಿಪ್ಲೊಮಾ, ಬಿಎಸ್ಸಿ, ಬಿಇ ಮತ್ತು ಬಿಟೆಕ್​ ಮತ್ತು ಟೆಕ್ನಿಕಲ್​ 3 ಹುದ್ದೆಗೆ 10ನೇ ತರಗತಿ, ಪಿಯುಸಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: ಟೆಕ್ನಿಕಲ್​ ಗ್ರೇಡ್​ 1 ಸಿಗ್ನಲ್​ ಹುದ್ದೆಗೆ ಗರಿಷ್ಠ 36 ವರ್ಷ. ಟೆಕ್ನಿಕಲ್​ 3 ಹುದ್ದೆಗೆ ಗರಿಷ್ಠ ವಯೋಮಿತಿ 33 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವೇತನ: ಟೆಕ್ನಿಕಲ್​ ಗ್ರೇಡ್​ 1 ಸಿಗ್ನಲ್​ ಹುದ್ದೆಗೆ 29,200 ರೂ ಮಾಸಿಕ, ಟೆಕ್ನಿಕಲ್​ 3 ಹುದ್ದೆಗೆ 19,900 ರೂ ಮಾಸಿಕ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ, ಮಹಿಳಾ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕ ಇತರೆ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ.

ಅಧಿಸೂಚನೆ

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಕಂಪ್ಯೂಟರ್​ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಮಾರ್ಚ್​ 9ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 8 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

HAL ನೇಮಕಾತಿ:

ಹಿಂದೂಸ್ತಾನ್​ ಏರೋನಾಟಿಕ್​ ಲಿಮಿಟೆಡ್​ನಲ್ಲಿ ಖಾಲಿ ಇರುವ 160 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಡಿಪ್ಲೊಮಾ ಟೆಕ್ನಿಷಿಯನ್​ 137, ಏರ್​ಕ್ರಾಫ್ಟ್​ ಟೆಕ್ನಿಷಿಯನ್​ 23 ಹುದ್ದೆಗಳ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಇಸಿಇ, ಇಇಇ, ಮೆಕಾನಿಕಲ್​ನಲ್ಲಿ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು. ಗರಿಷ್ಠ ವಯೋಮಿತಿ 28 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ. ಮಾರ್ಚ್​ 3 ರಿಂದ ಅರ್ಜಿ ಸಲ್ಲಿಕೆ ಆರಂಭ. ಕಡೆಯ ದಿನಾಂಕ ಮಾರ್ಚ್​ 16. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು hal-india.co.inಭೇಟಿ ನೀಡಿ.

ಇದನ್ನೂ ಓದಿ: ಕೆಇಎ ನೇಮಕಾತಿ: ಪ್ರೋಗ್ರಾಮರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details